*ಗೋಣಿಕೊಪ್ಪಲು, ಫೆ. ೧೪: ಸಮಾಜದ ಬೌದ್ಧಿಕ ಎಲುಬು ಶಿಕ್ಷಣ. ಸಮಾಜದ ಪ್ರಗತಿ ವಿದ್ಯಾವಂತರನ್ನು ಅವಲಂಬಿಸಿದೆ ಎಂದು ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಎಂ.ಕೆ.ನಾಯಕ್ ಹೇಳಿದರು.
ಪೊನ್ನಂಪೇಟೆ ಅರಣ್ಯ ಕಾಲೇಜಿನಲ್ಲಿ ವಿಶ್ವವಿದ್ಯಾನಿಲಯದ ಐಡಿಪಿ (ಇನ್ಸು÷್ಟಟ್ಯೂಷÀನಲ್ ಡವಲೆಪ್ ಮೆಂಟ್ ಪ್ರೋಗ್ರಾಂ) ಮತ್ತು ಎನ್.ಎ.ಎಚ್.ಇ.ಪಿ. (ನ್ಯಾಷನಲ್ ಅಗ್ರಿಕಲ್ಚರ್ ಹೈಯರ್ ಎಜುಕೇಷನ್ ಪ್ರೋಗ್ರಾಂ) ಸಹಯೋಗದಲ್ಲಿ ನಡೆದ ಹಿರಿಯ ಮತ್ತು ಹೊಸ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮಕ್ಕೆ ಶುಭಕೋರಿ ಚಿತ್ರದುರ್ಗದ ಹಿರಿಯೂರಿನಿಂದ ಆನ್ಲೈನ್ನಲ್ಲಿ ಅವರು ಮಾತನಾಡಿದರು.
ಅರಣ್ಯ ಕಾಲೇಜಿನಲ್ಲಿ ಪದವಿ ಪಡೆದು ವಿವಿಧ ಹುದ್ದೆಗಳನ್ನು ಅಲಂಕರಿಸಿರುವ ಹಿರಿಯ ವಿದ್ಯಾರ್ಥಿಗಳೊಡನೆ ಪ್ರಸ್ತುತ ಅಧ್ಯಯನ ನಡೆಸುತ್ತಿ ರುವ ವಿದ್ಯಾರ್ಥಿಗಳನ್ನು ಮುಖಾಮುಖಿಯಾಗಿಸಿ ಅವರ ಅನುಭವವನ್ನು ವಿನಿಮಯ ಮಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ ಎಂದರು.
ವಿಶ್ವವಿದ್ಯಾನಿಲಯದ ಐಡಿಪಿ ಸಂಚಾಲಕ ಡಾ. ಶಶಿಧರ್ ಮಾತನಾಡಿ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯದ ಮುಂದೆ ಇಂದು ಮಾನವ ಸಂಪನ್ಮೂಲದ ಕೊರತೆ ಕಾಡುತ್ತಿದೆ. ಇದುವರೆಗೆ ವಿಶ್ವವಿದ್ಯಾನಿಲಯದಿಂದ ೯೦೦ ವಿದ್ಯಾರ್ಥಿಗಳು ಪದವಿ ಪಡೆದು ಹೊರ ಹೋಗಿದ್ದಾರೆ. ಸ್ನಾತಕೋತ್ತರ ಪದವಿ ಪಡೆದ ಪದವೀಧರರು ಮುಂದೆ ಬಂದರೆ ಅವರಿಗೆ ನೇರವಾಗಿ ಉದ್ಯೋಗ ನೀಡಲಾಗುವುದು ಎಂದು ಹೇಳಿದರು.
ಪೊನ್ನಂಪೇಟೆ ಅರಣ್ಯ ಕಾಲೇಜಿನ ಡೀನ್ ಡಾ. ಸಿ.ಜಿ. ಕುಶಾಲಪ್ಪ ಮಾತನಾಡಿ ಅರಣ್ಯ ಕಾಲೇಜಿನಲ್ಲಿ ಅಧ್ಯಯನ ಮಾಡಿದವರು ಸಮಾಜ ಮತ್ತು ಅರಣ್ಯ ಕಾಯುವುದರಿಂದ ಹಿಡಿದು ದೇಶದ ಗಡಿಕಾಯುವವರೆಗೂ ಇದ್ದಾರೆ. ದೇಶ ವಿದೇಶದಲ್ಲೂ ಕಾಲೇಜಿನ ಹಿರಿಮೆ ಎತ್ತಿ ಹಿಡಿದಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯದ ಕುಲಸಚಿವ ಡಾ. ಹನುಮಂತಪ್ಪ ಮಾತನಾಡಿ, ಅರಣ್ಯಶಾಸ್ತç ಅಧ್ಯಯನಕ್ಕೆ ಇಂದು ಬಹಳ ಬೇಡಿಕೆ ಇದೆ. ಇಂಜಿನಿಯರ್ ಮತ್ತು ವೈದ್ಯಕೀಯ ಕ್ಷೇತ್ರವನ್ನು ಬಿಟ್ಟರೆ ಉಳಿದ ಎಲ್ಲ ಕ್ಷೇತ್ರದಲ್ಲಿಯೂ ಅರಣ್ಯಶಾಸ್ತç ಪದವೀಧರರು ಉನ್ನತ ಮಟ್ಟದ ಉದ್ಯೋಗ ಕಂಡುಕೊAಡಿರುವುದು ಇದಕ್ಕೆ ಕಾರಣ ಎಂದು ಹರ್ಷ ವ್ಯಕ್ತಪಡಿಸಿದರು.
ಅರಣ್ಯ ಕಾಲೇಜಿನ ನೋಡಲ್ ಅಧಿಕಾರಿ ಡಾ. ದೇವಗಿರಿ ಪ್ರಾಸ್ತಾವಿಕ ನುಡಿ ಆಡಿದರು. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಡಾ. ನಂದಿನಿ, ಪ್ರಾಧ್ಯಾಪಕ ಡಾ. ಕೆಂಚರೆಡ್ಡಿ ಇದ್ದರು.