ಮಡಿಕೇರಿ, ಫೆ. ೧೪: ಮಡಿಕೇರಿಯ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ಇಂದಿರಾ ಕ್ಯಾಂಟೀನ್ಗೆ ವಿದ್ಯುತ್ ಸರಬರಾಜಾಗದೆ ತಿಂಗಳುಗಟ್ಟಲೆ ಕಳೆದಿದ್ದು, ವಿದ್ಯುತ್ ಗ್ರೆöÊಂಡರ್ ಮೂಲಕ ಸಿದ್ಧಪಡಿಸುವ ಇಡ್ಲಿ ಹಿಟ್ಟು ತಯಾರಿಸಲಾಗದೆ, ಪಲಾವ್, ಪುಳಿಯೊಗರೆಗೆ ಮಾತ್ರ ಗ್ರಾಹಕರು ತೃಪ್ತಿಪಟ್ಟುಕೊಳ್ಳುವಂತಾಗಿದೆ.
ತಿಂಗಳುಗಟ್ಟಲೆ ವಿದ್ಯುತ್ ಇಲ್ಲದಿದ್ದರೂ ಕ್ಯಾಂಟೀನ್ ನಿರ್ವಹಣೆ ಪಡೆದಿರುವ ಗುತ್ತಿಗೆದಾರರು ಈ ಸಂಬAಧ ತಲೆಕೆಡಿಸಿಕೊಳ್ಳದಿರುವುದು ವಿಷಾಧನೀಯ. ಇನ್ನು ಅಲ್ಲಿರುವ ಅಡುಗೆ ಮಾಡುವ ಸಿಬ್ಬಂದಿಗಳಿಗೆ ೩ ತಿಂಗಳು ಸಂಬಳ ಕೂಡ ಸಿಗದೆ ಪರದಾಡುತ್ತಿದ್ದು, ಸರಕಾರದಿಂದ ಕ್ಯಾಂಟೀನ್ಗೆ ಬಿಡುಗಡೆ ಆಗುತ್ತಿರುವ ಹಣ ಪೋಲಾಗುತ್ತಿರುವುದಾಗಿ ಮೇಲ್ನೋಟಕ್ಕೆ ಕಂಡುಬರುತ್ತಿದೆ. ನಿರ್ವಹಣೆಯೇ ಇಲ್ಲದೇ ಪಾಳುಬಿದ್ದಂತಿರುವ ಕ್ಯಾಂಟೀನ್ಗೆ ಕಾಲಿಡಲು ಸಾರ್ವಜನಿಕರು ಹಿಂಜರಿಯುತ್ತಿದ್ದು, ಇಲ್ಲಿಗೆ ಊಟೋಪಚಾರಕ್ಕೆ ತೆರಳುವ ಮಂದಿಯ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ.
೨೦೧೭ ರಲ್ಲಿ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರ ರಾಜ್ಯಾದ್ಯಂತ ಬಡ ವರ್ಗದವರಿಗೆ, ಕೂಲಿ ಕಾರ್ಮಿಕರಿಗೆ ಹಾಗೂ ಆರ್ಥಿಕವಾಗಿ ಸದೃಢರಲ್ಲದವರಿಗೆ ಅತ್ಯಂತ ಕಡಿಮೆ ದರದಲ್ಲಿ ಊಟೋಪಚಾರ ದೊರಕಿಸಿಕೊಡುವ ನಿಟ್ಟಿನಲ್ಲಿ ಈ ಸೌಲಭ್ಯ ಪ್ರಾರಂಭಿಸಿತು.
ಕೋವಿಡ್ ಸಂದರ್ಭದಲ್ಲಿ ಈ ಕನಿಷ್ಟ ದರವನ್ನೂ ಮನ್ನ ಮಾಡಿದ ರಾಜ್ಯ ಸರಕಾರ ಪೊಟ್ಟಣಗಳ ಮೂಲಕ ಉಚಿತವಾಗಿ ಬೆಳಗ್ಗಿನ ತಿಂಡಿ, ಮಧ್ಯಾಹ್ನದ ಊಟ ಹಾಗೂ ರಾತ್ರಿ ಕೂಡ ರಾಜ್ಯಾದ್ಯಂತ ಆಹಾರದ ಸೇವೆ ಒದಗಿಸುತ್ತಿತ್ತು. ಜಿಲ್ಲೆಯ ಸೋಮವಾರಪೇಟೆಯಲ್ಲಿ ನಿರ್ಮಿಸಲುದ್ದೇಶಿಸಿರುವ ಕ್ಯಾಂಟಿನ್ಗೆ, ಟೆಂಡರ್ ಪಡೆದಿರುವ ಗುತ್ತಿಗೆದಾರನ ನಿರ್ಲಕ್ಷö್ಯದಿಂದಾಗಿ ಇನ್ನೂ ನಿರ್ಮಾಣದ ಭಾಗ್ಯ ದೊರೆತಿಲ್ಲವಾದರೂ ವೀರಾಜಪೇಟೆ ಹಾಗೂ ಮಡಿಕೇರಿಯಲ್ಲಿರುವ ಇಂದಿರಾ ಕ್ಯಾಂಟೀನ್ಗಳು ಕೋವಿಡ್ ಸಂದರ್ಭದಲ್ಲಿ ಅತ್ಯುತ್ತಮ ಸೇವೆ ಒದಗಿಸಿದ್ದವು.
ಪ್ರಸ್ತುತ ವೀರಾಜಪೇಟೆಯಲ್ಲಿರುವ ಕ್ಯಾಂಟೀನ್ನಲ್ಲಿ ಎಂದಿನAತೆ ಕಡಿಮೆ ದರದಲ್ಲಿನ ಉಟೋಪಚಾರ ಮುಂದುವರೆದಿದೆಯಾದರೂ,
(ಮೊದಲ ಪುಟದಿಂದ) ಮಡಿಕೇರಿಯ ಕ್ಯಾಂಟೀನ್ ಸಂಪೂರ್ಣ ನಿರ್ಲಕ್ಷö್ಯಕ್ಕೆ ಒಳಗಾಗಿದೆ. ಮಳೆಗಾಲದಲ್ಲಿ ಸೀಲಿಂಗ್ ಮೂಲಕ ಸೋರಿ ಒಳಕ್ಕೆ ಹರಿದಿರುವ ಮಳೆನೀರು ವಿದ್ಯುತ್ ಮೀಟರ್ಅನ್ನು ಕೆಡಿಸಿದ್ದು, ಹಲವು ತಿಂಗಳುಗಳಿAದಲೇ ಕ್ಯಾಂಟೀನ್ ಕತ್ತಲಲ್ಲಿ ಮಲಗಿದೆ. ಇಡ್ಲಿ ಹಿಟ್ಟು ತಯಾರಿಸಲು ವಿದ್ಯುತ್ನ ಅವಶ್ಯಕತೆ ಇದ್ದು, ತಿಂಗಳುಗಳಿAದ ಕೇವಲ ಪುಳಿಯೊಗರೆ, ಪಲಾವ್ಗೆ ಮಾತ್ರ ಊಟದ ಪಟ್ಟಿ ಸೀಮಿತವಾಗಿದೆ. ಕಾಲೇಜಿನ ಕೆಲವು ವಿದ್ಯಾರ್ಥಿಗಳನ್ನು ಹೊರತುಪಡಿಸಿದರೆ, ಇಲ್ಲಿಗೆ ಯಾರೂ ಕೂಡ ಕಾಲಿಡುತ್ತಿಲ್ಲ. ಸಮೀಪದಲ್ಲೇ ಗೂಡ್ಸ್ ಆಟೋ ಸ್ಟಾö್ಯಂಡ್ ಹಾಗೂ ಆಟೋ ಸ್ಟಾö್ಯಂಡ್ ಇದ್ದರೂ, ನಿರ್ವಹಣೆಯೇ ಇಲ್ಲದೆ ಹದಗೆಟ್ಟಿರುವ ಕ್ಯಾಂಟೀನ್ಗೆ ತೆರಳಲು ಆಟೋ ಚಾಲಕರು ಮುಜುಗರ ವ್ಯಕ್ತಪಡಿಸಿದ್ದಾರೆ. -ಪ್ರಜ್ವಲ್