ಮಡಿಕೇರಿ, ಫೆ. ೧೪: ಹಿಜಾಬ್ - ಕೇಸರಿ ಶಾಲು ವಿವಾದಕ್ಕೆ ಸಂಬAಧಿಸಿದAತೆ ಹೈಕೋರ್ಟ್ ಮೌಖಿಕ ಆದೇಶದ ಅನ್ವಯ ಜಿಲ್ಲೆಯಲ್ಲಿ ಇಂದು ಪ್ರೌಢಶಾಲೆಗಳು ಪ್ರಾರಂಭವಾಗಿದ್ದು, ಎರಡು ಶಾಲೆಗಳಲ್ಲಿ ಗೊಂದಲ ಉಂಟಾಗಿದ್ದನ್ನು ಹೊರತುಪಡಿಸಿ ಉಳಿದೆಡೆ ತರಗತಿಗಳು ಶಾಂತವಾಗಿ ನಡೆದಿವೆ.
ರಾಜ್ಯದೆಲ್ಲೆಡೆ ವಿವಾದಕ್ಕೆ ಕಾರಣವಾಗಿದ್ದ ಹಿಜಾಬ್ - ಕೇಸರಿ ಶಾಲು ವಿವಾದಕ್ಕೆ ಸಂಬAಧಿಸಿದAತೆ ವಿವಾದ ಹೈಕೋರ್ಟ್ ಮೆಟ್ಟಿಲೇರಿದ್ದರಿಂದ ವಿಚಾರಣೆ ನಡೆಸಿದ್ದ ಹೈಕೋರ್ಟ್ ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಿತು. ಈ ಬೆಳವಣಿಗೆಗಳ ನಡುವೆ ಸರಕಾರ ಮುಂಜಾಗ್ರತಾ ಕ್ರಮವಾಗಿ ಪ್ರೌಢ ಶಾಲೆ ಹಾಗೂ ಕಾಲೇಜುಗಳಿಗೆ ರಜೆ ಘೋಷಿಸಿತು. ಬಳಿಕ ಮೌಖಿಕ ಆದೇಶ ಹೊರಡಿಸಿದ ಹೈಕೋರ್ಟ್ ಪ್ರೌಢಶಾಲೆಗಳನ್ನು ಆರಂಭಿಸುವAತೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶದಂತೆ ಸರ್ಕಾರ ಪ್ರೌಢಶಾಲೆಗಳನ್ನು ಪುನರಾರಂಭಿಸುವ ನಿಟ್ಟಿನಲ್ಲಿ ಪ್ರತಿ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಮೇಲೆ ಜವಾಬ್ದಾರಿ ಹೊರಿಸಿ ಶಾಲೆಗಳ ಆರಂಭಕ್ಕೆ ಯಾವುದೇ ತೊಂದರೆ ಆಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿತ್ತು.
ಅದರಂತೆ ಕೊಡಗಿನಲ್ಲಿಯೂ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅವರು ಶಾಲಾ ಮುಖ್ಯೋಪಾಧ್ಯಾಯರು, ಧಾರ್ಮಿಕ ಮುಖಂಡರುಗಳು, ಅಧಿಕಾರಿಗಳ ಸಭೆ ನಡೆಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದ್ದರು. ಬಳಿಕ ಇಂದು ಜಿಲ್ಲೆಯಲ್ಲಿ ಪ್ರೌಢಶಾಲೆಗಳು ಪುನರಾರಂಭಗೊAಡವು. ಶಾಲೆಗಳಲ್ಲಿ ಹಿಜಾಬ್ - ಕೇಸರಿ ಶಾಲು ಸಂಬAಧ ಯಾವುದೇ ತೊಂದರೆಗಳಾಗದAತೆ ಗಮನ ಹರಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ವೇದಮೂರ್ತಿ ಅವರನ್ನು ಒಳಗೊಂಡು ಅಧಿಕಾರಿಗಳ ತಂಡ ರಚಿಸಲಾಗಿತ್ತು.
ಈ ತಂಡ ಪ್ರೌಢಶಾಲೆಗಳಿಗೆ ಭೇಟಿ ನೀಡಿ ಪರಿಸ್ಥಿತಿಯ ಬಗ್ಗೆ ಅವಲೋಕನ ಮಾಡಿತು. ಎರಡು ಶಾಲೆಗಳಲ್ಲಿ ಕೊಂಚ ಗೊಂದಲ ಉಂಟಾಗಿದ್ದು, ಉಳಿದಂತೆ ಎಲ್ಲೆಡೆ ಶಾಲೆಗಳು ಸಾಂಗವಾಗಿ ನಡೆದಿವೆ. ನೆಲ್ಲಿಹುದಿಕೇರಿ ಕೆಪಿಎಸ್ ಶಾಲೆಯಲ್ಲಿ ಕೆಲ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಶಾಲೆಗೆ ಆಗಮಿಸಿದ್ದರು. ಈ ವೇಳೆ ಹಿಜಾಬ್ ಆಗಲಿ, ಕೇಸರಿ ಶಾಲುಗಳನ್ನಾಗಲಿ ಧರಿಸುವಂತಿಲ್ಲ ಎಂದು ನ್ಯಾಯಾಲಯದ ಆದೇಶವಿರುವ ಬಗ್ಗೆ ಶಾಲೆಯ
(ಮೊದಲ ಪುಟದಿಂದ) ಮುಖ್ಯ ಶಿಕ್ಷಕರು ವಿದ್ಯಾರ್ಥಿನಿಯರ ಗಮನಕ್ಕೆ ತಂದಾಗ ಅದಕ್ಕೆ ಒಪ್ಪದ ವಿದ್ಯಾರ್ಥಿನಿಯರು ಹಿಜಾಬ್ ಧರಿಸದೆ ತರಗತಿಯಲ್ಲಿ ಕೂರುವುದಿಲ್ಲ ಎಂದು ಹೇಳಿದರು. ಇದಕ್ಕೆ ಸಮ್ಮತಿಸದಿದ್ದಾಗ ಸುಮಾರು ಮೂವತ್ತಕ್ಕೂ ಅಧಿಕ ವಿದ್ಯಾರ್ಥಿನಿಯರು ಶಾಲೆಯಿಂದ ಮನೆಗೆ ಮರಳಿದರು. ಕೊಟ್ಟಮುಡಿಯ ಮರ್ಕಜ ಉಲ್ಹಿದಾಯಿ ಶಾಲೆಯಲ್ಲಿ ಹಿಜಾಬ್ ಧರಿಸಿ ವಿದ್ಯಾರ್ಥಿನಿಯರು ಶಾಲೆಗೆ ಆಗಮಿಸಿದ್ದು, ಅಧಿಕಾರಿಗಳು ಇದಕ್ಕೆ ಅವಕಾಶ ನೀಡದೆ ನ್ಯಾಯಾಲಯದ ಆದೇಶ ಪಾಲಿಸುವಂತೆ ಹೇಳಿದರು. ಈ ಭಾಗದಲ್ಲಿ ನಮ್ಮ ಸಮುದಾಯದವರೆ ಹೆಚ್ಚಾಗಿರುವುದರಿಂದ ಹಿಜಾಬ್ ಧರಿಸಲು ಅವಕಾಶ ನೀಡಬೇಕೆಂದು ವಿದ್ಯಾರ್ಥಿನಿಯರ ಪೋಷಕರು ಮನವಿ ಮಾಡಿದರೂ ಕಾನೂನಿನ ಪ್ರಕಾರ ಇದಕ್ಕೆ ಅವಕಾಶವಿಲ್ಲ. ನ್ಯಾಯಾಲಯದ ಆದೇಶ ಪಾಲಿಸುವಂತೆ ಅಧಿಕಾರಿಗಳು ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ, ಎಸ್ಪಿ ಕ್ಷಮಾಮಿಶ್ರಾ ಇವರುಗಳು ಕೂಡ ಶಾಲೆಗೆ ಭೇಟಿ ನೀಡಿ ಕಾನೂನು ಪಾಲಿಸುವಂತೆ ಸೂಚನೆೆ ನೀಡಿದರು. ಹಿಜಾಬ್ ಧರಿಸಲು ಅವಕಾಶವಿಲ್ಲ ಎಂಬ ನ್ಯಾಯಾಲಯದ ಸೂಚನೆ ಹಿನ್ನೆಲೆಯಲ್ಲಿ ಎಮ್ಮೆಮಾಡು ಶಾಲೆಯ ಸುಮಾರು ೮೫ ಮಂದಿ ವಿದ್ಯಾರ್ಥಿನಿಯರು ಶಾಲೆಗೆ ಗೈರಾಗಿದ್ದರು. ಉಳಿದಂತೆ ಕೂಡಿಗೆ, ಹೆಬ್ಬಾಲೆ, ತೊರೆನೂರು, ಶಿರಂಗಾಲ ಮತ್ತಿತರ ಕಡೆ ಶಾಲೆಗಳು ಎಂದಿನAತೆ ನಡೆದವು.
೩೫ ವಿದ್ಯಾರ್ಥಿನಿಯರು ಶಾಲೆಯಿಂದ ವಾಪಸ್
ಸೋಮವಾರಪೇಟೆ: ಹಿಜಾಬ್ ಹಾಗೂ ಕೇಸರಿ ಶಾಲು ವಿವಾದದ ಬಗ್ಗೆ ರಾಜ್ಯ ಉಚ್ಚ ನ್ಯಾಯಾಲಯ ನೀಡಿರುವ ಮಧ್ಯಂತರ ಆದೇಶವನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾದ ಶಾಲಾಡಳಿತ ಮಂಡಳಿಯ ಕ್ರಮದಿಂದಾಗಿ, ಇಂದು ಸೋಮವಾರಪೇಟೆ ಅವಿಭಜಿತ ತಾಲೂಕಿನ ೬೯೫ ವಿದ್ಯಾರ್ಥಿನಿಯರ ಪೈಕಿ ೩೫ ವಿದ್ಯಾರ್ಥಿನಿಯರು ಶಾಲೆಯಿಂದ ಮನೆಗಳಿಗೆ ವಾಪಸ್ ಆದರು.
ಹೈಕೋರ್ಟ್ ನೀಡಿರುವ ಮಧ್ಯಂತರ ಆದೇಶವನ್ನು ಶಾಲಾ ಕಾಲೇಜುಗಳಲ್ಲಿ ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಈಗಾಗಲೇ ಜಿಲ್ಲಾಧಿಕಾರಿಗಳು, ತಾಲೂಕು ತಹಶೀಲ್ದಾರ್ಗಳು ಸಭೆ ನಡೆಸಿ ಶಾಲಾಡಳಿತ ಮಂಡಳಿ ಹಾಗೂ ಶಿಕ್ಷಕ ವರ್ಗಕ್ಕೆ ಸ್ಟಷ್ಟ ಸೂಚನೆ ನೀಡಿದ್ದು, ಇಂದು ತರಗತಿಗಳು ಆರಂಭಗೊAಡ ಹಿನ್ನೆಲೆ ಮತ್ತೆ ಹಿಜಾಬ್ನತ್ತ ಎಲ್ಲರ ದೃಷ್ಟಿ ನೆಟ್ಟಿತ್ತು.
ಸೋಮವಾರಪೇಟೆ ಹಾಗೂ ಕುಶಾಲನಗರ ತಾಲೂಕು ವ್ಯಾಪ್ತಿಯ ಸರ್ಕಾರಿ ಹಾಗೂ ಖಾಸಗಿ ಪ್ರೌಢಶಾಲೆಗಳ ೮,೯,೧೦ನೇ ತರಗತಿಗಳಲ್ಲಿ ಒಟ್ಟು ೬೯೫ ಮುಸ್ಲಿಂ ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದು, ಇಂದು ಬಹುತೇಕ ಎಲ್ಲಾ ವಿದ್ಯಾರ್ಥಿಗಳು ಮನೆಯಿಂದಲೇ ಹಿಜಾಬ್ ಧರಿಸಿ ಶಾಲೆಗಳಿಗೆ ಆಗಮಿಸಿದರು.
ಈ ಸಂದರ್ಭ ಶಾಲಾಡಳಿತ ಮಂಡಳಿ ಹಾಗೂ ಶಿಕ್ಷಕ ವರ್ಗದವರು ಹೈಕೋರ್ಟ್ ಆದೇಶದ ಬಗ್ಗೆ ಮನವರಿಕೆ ಮಾಡಿಕೊಟ್ಟ ಹಿನ್ನೆಲೆ ೬೬೦ ವಿದ್ಯಾರ್ಥಿನಿಯರು ತಮ್ಮ ಹಿಜಾಬ್ಗಳನ್ನು ತೆಗೆದು ತರಗತಿಗಳಿಗೆ ಪ್ರವೇಶಿಸಿದರು. ಉಳಿದ ೩೫ ವಿದ್ಯಾರ್ಥಿಗಳು ಹಿಜಾಬ್ ತೆಗೆಯಲು ನಿರಾಕರಿಸಿದ ಹಿನ್ನೆಲೆ ಅವರುಗಳ ಪೋಷಕರಿಗೆ ಮಾಹಿತಿ ನೀಡಲಾಯಿತು.
ಶಾಲೆಗೆ ಆಗಮಿಸಿದ ಪೋಷಕರೊಂದಿಗೆ ಮಾತುಕತೆ ನಡೆಸಿದ ಶಾಲಾಡಳಿತ ಮಂಡಳಿ, ನ್ಯಾಯಾಲಯದ ಮಧ್ಯಂತರ ಆದೇಶ ಇರುವುದರಿಂದ ತರಗತಿಗಳಲ್ಲಿ ಸದ್ಯಕ್ಕೆ ಹಿಜಾಬ್ ಧರಿಸಲು ಅವಕಾಶವಿಲ್ಲ. ಈ ಹಿನ್ನೆಲೆ ತಾವುಗಳೇ ಅವರಿಗೆ ತಿಳುವಳಿಕೆ ನೀಡುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸದ ಪೋಷಕರು, ಹಿಜಾಬ್ ನಮ್ಮ ಧಾರ್ಮಿಕ ಹಕ್ಕು, ಅದನ್ನು ಬಳಸಲು ಅವಕಾಶ ಕೊಡುವಂತೆ ಮನವಿ ಮಾಡಿದರು. ಇದಕ್ಕೆ ಒಪ್ಪದೇ ಇದ್ದ ಸಂದರ್ಭ ತಮ್ಮ ಮಕ್ಕಳನ್ನು ವಾಪಸ್ ಮನೆಗೆ ಕರೆದೊಯ್ದರು.
ಕುಶಾಲನಗರದ ಮೌಲಾನ ಆಜಾದ್ ಶಾಲೆಯಲ್ಲಿ ೨೨೬ ವಿದ್ಯಾರ್ಥಿನಿಯರಿದ್ದು, ಇವರ ಪೈಕಿ ೪ ವಿದ್ಯಾರ್ಥಿಗಳು ಹಿಜಾಬ್ ತೆಗೆಯಲು ನಿರಾಕರಿಸಿ ಮನೆಗೆ ತೆರಳಿದರೆ, ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ೩೦೮ ವಿದ್ಯಾರ್ಥಿನಿಯರ ಪೈಕಿ ೩೫ ವಿದ್ಯಾರ್ಥಿನಿಯರು ಹಿಜಾಬ್ ಹಿನ್ನೆಲೆ ತರಗತಿಗಳಿಂದ ದೂರ ಉಳಿದರು. ಸೋಮವಾರಪೇಟೆ ತಾಲೂಕಿನ ೩೮೭ ವಿದ್ಯಾರ್ಥಿನಿಯರ ಪೈಕಿ ಎಲ್ಲರೂ ತರಗತಿಗಳಿಗೆ ಹಾಜರಾಗಿದ್ದರು. ಸೋಮವಾರಪೇಟೆ ವ್ಯಾಪ್ತಿಯ ಎರಡು ಶಾಲೆಗಳಿಗೆ ಹಿಜಾಬ್ ಧರಿಸಿ ಆಗಮಿಸಿದ್ದ ವಿದ್ಯಾರ್ಥಿಗಳಿಗೆ, ಉಪನ್ಯಾಸಕ ವರ್ಗದವರು ನ್ಯಾಯಾಲಯದ ಆದೇಶದ ಬಗ್ಗೆ ಮಾಹಿತಿ ನೀಡಿದ್ದರಿಂದ, ತಾವಾಗಿಯೇ ಹಿಜಾಬ್ ತೆಗೆದು ತರಗತಿಗಳಿಗೆ ತೆರಳಿದರು.
ತಾಲೂಕು ತಹಶೀಲ್ದಾರ್ ಗೋವಿಂದರಾಜು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಹೇಮಂತ್ ಅವರುಗಳು ಶಾಲೆಗಳಿಗೆ ತೆರಳಿ ಖುದ್ದು ಪರಿಶೀಲನೆ ನಡೆಸಿದರು. ಹಿಜಾಬ್ ಹಾಗೂ ಕೇಸರಿ ಶಾಲು ಧರಿಸಿ ತರಗತಿಗಳಿಗೆ ಬರಲು ಅವಕಾಶವಿಲ್ಲ. ನ್ಯಾಯಾಲಯದ ಆದೇಶವನ್ನು ಪ್ರತಿಯೊಬ್ಬರೂ ಪಾಲಿಸಲೇಬೇಕು. ಹತ್ತನೇ ತರಗತಿಯ ಪರೀಕ್ಷೆಗಳು ಹತ್ತಿರ ಬರುತ್ತಿದ್ದು, ಇತರ ವಿಚಾರಗಳ ಬಗ್ಗೆ ಚಿಂತಿಸದೇ ಓದಿನ ಬಗ್ಗೆ ಗಮನಹರಿಸಬೇಕು. ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿ ಪರೀಕ್ಷೆಗಳು ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಮಹತ್ತರ ಘಟ್ಟವಾಗಿದ್ದು, ಅನ್ಯ ವಿಚಾರಗಳಿಗೆ ತಲೆಹಾಕದೇ ವ್ಯಾಸಂಗದತ್ತ ಗಮನ ಕೇಂದ್ರೀಕರಿಸಿ ಎಂದು ತಹಶೀಲ್ದಾರ್ ಗೋವಿಂದರಾಜು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಶನಿವಾರಸಂತೆಯಲ್ಲಿ ಭಾರತಿ ವಿದ್ಯಾಸಂಸ್ಥೆ ಪ್ರೌಢಶಾಲೆಯಲ್ಲಿ ಮೂವರು ವಿದ್ಯಾರ್ಥಿನಿಯರು ಗೈರು ಹಾಜರಾಗಿದ್ದರು.