ಪೊನ್ನಂಪೇಟೆ, ಫೆ. ೧೪ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಪೊನ್ನಂಪೇಟೆ ತಾಲೂಕಿನ ಕುಂದ ಗ್ರಾಮ ಸಮೀಪದ ಬಸವೇಶ್ವರ ಬಡಾವಣೆಯಲ್ಲಿನ ವಿಶೇಷಚೇತನ ಮಹಿಳೆ ಸರಿತಾ ಎಂಬವರಿಗೆ ಜೀವನ ನಿರ್ವಹಣೆಗೆ ಸಹಾಯ ಮಾಡುವ ಸಲುವಾಗಿ ತಿಂಗಳಿಗೆ ೭೫೦ ರೂಪಾಯಿ ಮಾಶಾಸನವನ್ನು ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ಆದೇಶದ ಮೇರೆಗೆ ಮಂಜೂರು ಮಾಡಲಾಯಿತು.

ಮಂಜೂರಾತಿ ಪತ್ರ ಮತ್ತು ಹಣವನ್ನು ವಲಯದ ಮೇಲ್ವಿಚಾರಕರಾದ ನರಸಿಂಹಮೂರ್ತಿ ಫಲಾನುಭವಿ ಕುಟುಂಬಕ್ಕೆ ವಿತರಿಸಿದರು. ಈ ಸಂದÀರ್ಭ ಗ್ರಾಮದ ಮುಖಂಡರಾದ ಪಿ.ಎಸ್. ಗಣೇಶ್, ಅಮ್ಮಣಿ, ಅಪ್ಪು, ಸುಬ್ರಮಣಿ, ದರ್ಶನ್ ಉಪಸ್ಥಿತರಿದ್ದರು.