ಸಮವಸ್ತçಕ್ಕೆ ಹೊಂದುವ ಬಣ್ಣದ ಹಿಜಾಬ್ ಧರಿಸಲು ಅವಕಾಶಕ್ಕೆ ಮನವಿ

ಬೆಂಗಳೂರು, ಫೆ. ೧೪: ಹಿಜಾಬ್ ವಿವಾದ ಸೋಮವಾರ ಹೊಸ ತಿರುವು ಪಡೆದುಕೊಂಡಿದ್ದು, ಶಾಲಾ ಸಮವಸ್ತçಕ್ಕೆ ಹೊಂದುವ ಬಣ್ಣದ ಹಿಜಾಬ್ ಧರಿಸಲು ಅವಕಾಶ ನೀಡುವಂತೆ ಮುಸ್ಲಿಂ ವಿದ್ಯಾರ್ಥಿಗಳು ಹೈಕೋರ್ಟ್ಗೆ ಮನವಿ ಮಾಡಿದ್ದಾರೆ. ಶಾಂತಿ, ಸೌಹಾರ್ದತೆ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಬಟ್ಟೆಯ ಬಳಕೆಯನ್ನು ನಿರ್ಬಂಧಿಸಿರುವ ರಾಜ್ಯ ಸರ್ಕಾರದ ಆದೇಶವನ್ನು ಪ್ರಶ್ನಿಸಿ, ಹಿಜಾಬ್ ಪರವಾಗಿ ಅರ್ಜಿ ಸಲ್ಲಿಸಿರುವ ಹುಡುಗಿಯರು ಇಂದು ಕರ್ನಾಟಕ ಹೈಕೋರ್ಟ್ಗೆ ಮನವಿ ಸಲ್ಲಿಸಿದ್ದಾರೆ. ಶಾಲಾ ಸಮವಸ್ತçಕ್ಕೆ ಹೊಂದುವ ಬಣ್ಣದ ಹಿಜಾಬ್ ಧರಿಸಲು ಅವಕಾಶ ನೀಡಿ ಎಂದು ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ, ನ್ಯಾಯಮೂರ್ತಿ ಜೆ ಎಂ ಖಾಜಿ ಮತ್ತು ನ್ಯಾಯಮೂರ್ತಿ ಕೃಷ್ಣ ಎಂ ದೀಕ್ಷಿತ್ ಅವರನ್ನೊಳಗೊಂಡ ಹೈಕೋರ್ಟ್ನ ಪೂರ್ಣ ಪೀಠಕ್ಕೆ ಬಾಲಕಿಯರು ಮನವಿ ಮಾಡಿದ್ದಾರೆ. ಉಡುಪಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಬಾಲಕಿಯರ ಪರವಾಗಿ ವಾದ ಮಂಡಿಸಿದ ವಕೀಲ ದೇವದತ್ತ್ ಕಾಮತ್ ಅವರು, ‘ನಾನು ರಾಜ್ಯ ಸರ್ಕಾರದ ಆದೇಶವನ್ನು ಮಾತ್ರ ಪ್ರಶ್ನಿಸುತ್ತಿಲ್ಲ. ಸಮವಸ್ತçಕ್ಕೆ ಹೊಂದುವ ಬಣ್ಣದ ಸ್ಕಾರ್ಫ್ ಧರಿಸಲು ಅವಕಾಶ ನೀಡುವಂತೆ ಸಕಾರಾತ್ಮಕ ಆದೇಶವನ್ನು ಕೇಳುತ್ತೇನೆ ಎಂದು ಪೀಠಕ್ಕೆ ತಿಳಿಸಿದರು. ಮುಸ್ಲಿಂ ವಿದ್ಯಾರ್ಥಿಗಳ ಪ್ರಕಾರ ಹಿಜಾಬ್ ಅತ್ಯಗತ್ಯ ಧಾರ್ಮಿಕ ಆಚರಣೆಯಾಗಿದೆ ಮತ್ತು ಅದರ ಬಳಕೆಯನ್ನು ನಿರ್ಬಂಧಿಸುವುದು ಭಾರತೀಯ ಸಂವಿಧಾನದ ೨೫ ನೇ ವಿಧಿಯನ್ನು ಉಲ್ಲಂಘಿಸುತ್ತದೆ. ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆ ಮತ್ತು ಆರೋಗ್ಯ ಮತ್ತು ಈ ಭಾಗದ ಇತರ ನಿಬಂಧನೆಗಳಿಗೆ ಒಳಪಟ್ಟು, ಎಲ್ಲಾ ವ್ಯಕ್ತಿಗಳು ಆತ್ಮಸಾಕ್ಷಿಯ ಸ್ವಾತಂತ್ರ‍್ಯಕ್ಕೆ ಸಮಾನವಾಗಿ ಅರ್ಹರಾಗಿದ್ದಾರೆ ಮತ್ತು ಮುಕ್ತವಾಗಿ ಧರ್ಮವನ್ನು ಪ್ರತಿಪಾದಿಸಲು, ಆಚರಿಸಲು ಮತ್ತು ಪ್ರಚಾರ ಮಾಡುವ ಹಕ್ಕನ್ನು ಹೊಂದಿದ್ದಾರೆ ಎಂದರು.

ಬಾಲಕಿ ಮೇಲೆ ಅತ್ಯಾಚಾರ

ಹಾಸನ, ಫೆ. ೧೪: ೧೧ ವರ್ಷದ ಹುಡುಗಿ ಮೇಲೆ ಅತ್ಯಾಚಾರವೆಸಗಿಸದ ೨೪ ವರ್ಷದ ಯುವಕನೊರ್ವ, ಆಕೆಯನ್ನು ಗ್ರಾಮದ ಟ್ಯಾಂಕ್‌ವೊAದರಲ್ಲಿ ಎಸೆದಿರುವ ಘಟನೆ ಹಾಸನ ತಾಲೂಕಿನಲ್ಲಿ ನಡೆದಿದೆ. ಭಾನುವಾರ ಮಧ್ಯಾಹ್ನ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮನೆ ಬಳಿ ತನ್ನ ಸ್ನೇಹಿತರೊಂದಿಗೆ ಆಟವಾಡುತ್ತಿದ್ದ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಪುಸಲಾಯಿಸಿರುವ ಆರೋಪಿ ಕೀರ್ತಿ ಸಾಗರ್, ನಿರ್ಜನ ಪ್ರದೇಶವೊಂದಕ್ಕೆ ಕರೆದೊಯ್ದು, ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಬಳಿಕ ಟ್ಯಾಂಕ್‌ವೊAದಕ್ಕೆ ಎಸೆದಿದ್ದಾನೆ. ಹೊಲವೊಂದರಲ್ಲಿ ಕೆಲಸ ಮಾಡುತ್ತಿದ್ದ ಗ್ರಾಮಸ್ಥರೊಬ್ಬರು ಆಕಸ್ಮಿಕವಾಗಿ ಇದನ್ನು ಗಮನಿಸಿದ್ದು, ಸ್ಥಳಕ್ಕೆ ಧಾವಿಸಿ ಬಾಲಕಿಯನ್ನು ರಕ್ಷಿಸಿದ್ದಾರೆ. ಘಟನೆ ಬಗ್ಗೆ ಮಾಹಿತಿ ಪಡೆದ ನಂತರ ಪೋಷಕರು ಸ್ಥಳಕ್ಕೆ ಧಾವಿಸಿದ್ದು, ಆಕೆಯನ್ನು ಹಾಸನದ ಹಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ಆಕೆ ಆಟವಾಡುತ್ತಿದ್ದಾಗ ಗಿಫ್ಟ್ ನೀಡುವುದಾಗಿ ಹೇಳಿ ಆಕೆಯ ಮೇಲೆ ಅತ್ಯಾಚಾರವೆಸಗಿರುವುದಾಗಿ ಆರೋಪ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ. ಬಾಲಕಿ ಮೇಲೆ ಅತ್ಯಾಚಾರವೆಸಗಿದ ಬಳಿಕ ಆಕೆಯ ಕಾಲುಗಳನ್ನು ಕಟ್ಟಿ ಗ್ರಾಮಕ್ಕೆ ಹೊಂದಿಕೊAಡAತಿದ್ದ ಟ್ಯಾಂಕ್ ವೊಂದಕ್ಕೆ ಎಸೆದಿದ್ದಾನೆ. ಸದ್ಯ ಆರೋಪಿ ನ್ಯಾಯಾಂಗ ಕಸ್ಟಡಿಯಲ್ಲಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಏರ್ ಇಂಡಿಯಾದ ಸಿಇಓ, ಎಂ.ಡಿ.ಯಾಗಿ ಇಲ್ಕರ್ ಐಸಿ

ನವದೆಹಲಿ, ಫೆ. ೧೪: ಟಾಟಾ ಸನ್ಸ್ ಇಂದು ಇಲ್ಕರ್ ಐಸಿ ಅವರನ್ನು ಏರ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಮತ್ತು ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಆಗಿ ನೇಮಕ ಮಾಡಿದೆ. ಏರ್ ಇಂಡಿಯಾ ಮಂಡಳಿಯು ಸೋಮವಾರ ಮಧ್ಯಾಹ್ನ ಸಭೆ ನಡೆಸಿ ಚರ್ಚೆಯ ನಂತರ ಇಲ್ಕರ್ ಐಸಿ ಅವರ ನೇಮಕಾತಿಯನ್ನು ಅನುಮೋದಿಸಿದೆ ಎಂದು ತಿಳಿದು ಬಂದಿದೆ. ಟಾಟಾ ಸನ್ಸ್ ಅಧ್ಯಕ್ಷ ಎನ್ ಚಂದ್ರಶೇಖರನ್ ಅವರು ಮಂಡಳಿಯ ಸಭೆಗೆ ವಿಶೇಷ ಆಹ್ವಾನಿತರಾಗಿದ್ದರು. ಇಲ್ಕರ್ ಐಸಿ ಟರ್ಕಿಶ್ ಏರ್‌ಲೈನ್ಸ್ ನ ಅಧ್ಯಕ್ಷರಾಗಿದ್ದರು ಮತ್ತು ಅದಕ್ಕೂ ಮೊದಲು ಅವರು ಕಂಪನಿಯ ಮಂಡಳಿಯಲ್ಲಿದ್ದರು. ಇಲ್ಕರ್ ಅವರು ವಾಯುಯಾನ ಉದ್ಯಮದ ನಾಯಕರಾಗಿದ್ದು, ಅವರ ಅಧಿಕಾರಾವಧಿಯಲ್ಲಿ ಟರ್ಕಿಶ್ ಏರ್‌ಲೈನ್ಸ್ ಅನ್ನು ಯಶಸ್ಸಿನತ್ತ ಕೊಂಡೊಯ್ದಿದ್ದಾರೆ. ಏರ್ ಇಂಡಿಯಾವನ್ನು ಹೊಸ ಯುಗಕ್ಕೆ ಕರೆದೊಯ್ಯುವ ಟಾಟಾ ಸಮೂಹಕ್ಕೆ ಇಲ್ಕರ್ ಅವರನ್ನು ಸ್ವಾಗತಿಸಲು ನಾವು ಸಂತೋಷಪಡುತ್ತೇವೆ ಎಂದು ಟಾಟಾ ಸನ್ಸ್ ಹೇಳಿದೆ.

೨ ದಶಕಗಳ ನಂತರ ರಾಜ್ಯಪಾಲರಿಗೆ ಭವ್ಯ ಸ್ವಾಗತ!

ಬೆಂಗಳೂರು, ಫೆ . ೧೪: ಎರಡು ದಶಕಗಳ ನಂತರ ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೂಲಕ ಜಂಟಿ ಅಧಿವೇಶನಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಆಗಮಿಸಿದರು. ಎರಡು ದಶಕಗಳ ನಂತರ ಹಳೇ ಪರಂಪರೆಗೆ ಮತ್ತೆ ಚಾಲನೆ ನೀಡಿದರು. ಕೆಲ ಕಾರಣಗಳಿಂದ ಈ ಹಿಂದೆ ಈ ಪರಂಪರೆ ನಿಂತು ಹೋಗಿತ್ತು. ಇದೀಗ ಮತ್ತೆ ಹಳೇ ಸಂಪ್ರದಾಯಕ್ಕೆ ಇಂದು ಚಾಲನೆ ಸಿಕ್ಕಿತು. ಅಶ್ವಪಡೆ ಬೆಂಗಾವಲಿನ ಮೂಲಕ ಆಗಮಿಸಿದ ರಾಜ್ಯಪಾಲರನ್ನು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸಭಾಪತಿ ಬಸವರಾಜ್ ಹೊರಟ್ಟಿ, ಸಿಎಂ ಬಸವರಾಜ್ ಬೊಮ್ಮಾಯಿ ಹೂಗುಚ್ಛ ನೀಡಿ ಬರಮಾಡಿಕೊಂಡರು. ಬಳಿಕ ರಾಜ್ಯಪಾಲರ ಜೊತೆಗೂಡಿ ಎಲ್ಲರೂ ಗ್ರ‍್ಯಾಂಡ್ ಸ್ಟೆಪ್ಸ್ ಮೂಲಕ ವಿಧಾನಮಂಡಲ ಜಂಟಿ ಅಧಿವೇಶನಕ್ಕೆ ಪ್ರವೇಶಿಸಿದರು.

ಭಾರತೀಯ ವಿಜ್ಞಾನ ಸಂಸ್ಥೆಗೆ ೪೨೫ ಕೋಟಿ ರೂ. ದೇಣಿಗೆ

ಭುವನೇಶ್ವರ, ಫೆ. ೧೪: ಪರೋಪಕಾರಿ ದಂಪತಿಗಳಾದ ಸುಸ್ಮಿತಾ ಮತ್ತು ಸುಬ್ರೋತೊ ಬಾಗ್ಚಿ ಹಾಗೂ ರಾಧಾ ಮತ್ತು ಎನ್‌ಎಸ್ ಪಾರ್ಥಸಾರಥಿ ಅವರು ಒಟ್ಟಾಗಿ ಬೆಂಗಳೂರಿನ ಕ್ಯಾಂಪಸ್‌ನಲ್ಲಿ ಸ್ನಾತಕೋತ್ತರ ವೈದ್ಯಕೀಯ ಶಾಲೆ ಮತ್ತು ೮೦೦ ಹಾಸಿಗೆಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ನಿರ್ಮಿಸಲು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ)ಗೆ ೪೨೫ ಕೋಟಿ ರೂ. ದೇಣಿಗೆ ನೀಡಿದ್ದಾರೆ. ಸ್ನಾತಕೋತ್ತರ ವೈದ್ಯಕೀಯ ಶಾಲೆ ಮತ್ತು ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯನ್ನು ನಿರ್ಮಿಸಲು ಸ್ವೀಕರಿಸಿದ ಏಕೈಕ ಅತಿದೊಡ್ಡ ಖಾಸಗಿ ದೇಣಿಗೆಯಾಗಿದೆ ಎಂದು ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ. ಸುಸ್ಮಿತಾ ಮತ್ತು ಸುಬ್ರೋತೊ ಬಾಗ್ಚಿ ಹಾಗೂ ರಾಧಾ ಮತ್ತು ಎನ್‌ಎಸ್ ಪಾರ್ಥಸಾರಥಿ ಅವರು 'ಮೈಂಡ್‌ಟ್ರೀಯ ಸಹ ಸಂಸ್ಥಾಪಕರಾಗಿದ್ದಾರೆ. ಬೃಹತ್ ದೇಣಿಗೆ ನೀಡಿದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಬಾಗ್ಚಿ-ಪಾರ್ಥಸಾರಥಿ ಆಸ್ಪತ್ರೆ ಎಂದು ಹೆಸರಿಡಲು ನಿರ್ಧರಿಸಲಾಗಿದೆ. ಸುಸ್ಮಿತಾ ಮತ್ತು ಸುಬ್ರೋತೊ ಬಾಗ್ಚಿ ದಂಪತಿಯೊAದಿಗಿನ ಪಾಲುದಾರಿಕೆ ಒಪ್ಪಂದಕ್ಕೆ ಐಐಎಸ್‌ಸಿ ಸಹಿ ಹಾಕಿದೆ. ಅಹಮದಾಬಾದ್ ಮೂಲದ ವಾಸ್ತುಶಿಲ್ಪಿ ಆರ್ಚಿ ಮೆಡೆಸ್ ಆಸ್ಪತ್ರೆಯ ಕಟ್ಟಡವನ್ನು ವಿನ್ಯಾಸಗೊಳಿಸಿದ್ದಾರೆ.

ಚೀನಿ ಆ್ಯಪ್ ನಿಷೇಧಕ್ಕೆ ಕೇಂದ್ರ ನಿರ್ಧಾರ

ನವದೆಹಲಿ, ಫೆ. ೧೪: ೫೪ ಚೀನಾ ಆ್ಯಪ್‌ಗಳನ್ನು ಈ ಕೇಂದ್ರ ಸರ್ಕಾರ ನಿಷೇಧಿಸಲು ಹೊಸ ಆದೇಶ ಹೊರಡಿಸಿದೆ. ಈ ಹಿಂದೆ ೨ ಬಾರಿ ಚೀನಾ ಆ್ಯಪ್ ಗಳನ್ನು ನಿಷೇಧಿಸಿದ್ದ ಕೇಂದ್ರ ಸರ್ಕಾರ ಇದೀಗ ಮೂರನೇ ಬಾರಿಗೆ ೫೪ ಚೀನಾ ಮೂಲದ ಆ್ಯಪ್‌ಗಳನ್ನು ನಿಷೇಧಿಸಿದೆ ಎಂದು ತಿಳಿದುಬಂದಿದೆ. ಭಾರತದ ಭದ್ರತೆಗೆ ಅಪಾಯವನ್ನುಂಟುಮಾಡುವ ಇನ್ನೂ ೫೪ ಚೀನೀ ಅಪ್ಲಿಕೇಶನ್‌ಗಳನ್ನು ಭಾರತ ಸರ್ಕಾರ ನಿಷೇಧಿಸಲಿದೆ. ಮೂಲಗಳ ಪ್ರಕಾರ ಈ ೫೪ ಚೈನೀಸ್ ಅಪ್ಲಿಕೇಶನ್‌ಗಳಲ್ಲಿ ಬ್ಯೂಟಿ ಕ್ಯಾಮೆರಾ ಸೇರಿವೆ ಎನ್ನಲಾಗಿದೆ. ಉಳಿದಂತೆ ಸ್ವೀಟ್ ಸೆಲ್ಫಿ ಎಚ್‌ಡಿ, ಬ್ಯೂಟಿ ಕ್ಯಾಮೆರಾ - ಸೆಲ್ಫಿ ಕ್ಯಾಮೆರಾ, ಈಕ್ವಲೈಜರ್ ಮತ್ತು ಬಾಸ್ ಬೂಸ್ಟರ್, ಕ್ಯಾಮ್‌ಕಾರ್ಡ್ ಫಾರ್ ಸೇಲ್ಸ್ಫೋರ್ಸ್ ಎಂಟ್, ಐಸೊಲ್ಯಾಂಡ್ ೨: ಆಶಸ್ ಆಫ್ ಟೈಮ್ ಲೈಟ್, ವಿವಾ ವಿಡಿಯೋ ಎಡಿಟರ್, ಟೆನ್ಸೆಂಟ್ ಕ್ರೆöÊವರ್, ಒನ್ಮಿಯೊಜಿ ಅರೆನಾ, ಆಪ್‌ಮಿಯೊ ಚೆಸ್, ಡ್ಯುಯಲ್ ಸ್ಪೇಸ್ ಲೈಟ್ ಸೇರಿದಂತೆ ಒಟ್ಟು ೫೪ ಆ್ಯಪ್‌ಗಳನ್ನು ನಿಷೇಧದ ಪಟ್ಟಿಗೆ ಸೇರಿಸಲಾಗಿದೆ.