ಚೆಟ್ಟಳ್ಳಿ, ಫೆ. ೯: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ನಾಲ್ನಾಡ್ ಕುಡಿಯಡ ಮಂದ್ ನಮ್ಮೆ ಸಮಿತಿಯ ಸಹಯೋಗದಲ್ಲಿ ಕಕ್ಕಬೆಯ ಯವಕಪಾಡಿಯ ಕುಡಿಯಡ ಮಂದ್ನಲ್ಲಿ ನಡೆದ ಕುಡಿಯಡ ಮಂದ್ ನಮ್ಮೆ-೨೦೨೨ ಸಮಾರೋಪ ಸಮಾರಂಭದಲ್ಲಿ ಅಕಾಡೆಮಿಯ ಅಧ್ಯಕ್ಷೆ ಡಾ. ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಅಧ್ಯಕ್ಷತೆ ವಹಿಸಿ ಕೊಡಗಿನ ಮೂಲ ಜನಾಂಗದ ಪವಿತ್ರನೆಲೆ ಎನಿಸಿ ಕೊಂಡಿರುವ ಮಂದ್ಗೆ ಅದರದೇ ಆದ ವಿಶೇಷ ಸ್ಥಾನಮಾನವಿದೆ. ಅಲ್ಲಿ ನಡೆಯುವ ಆಚರಣೆಗಳು ವಿಶೇಷತೆಯಿಂದ ಕೂಡಿದ್ದು, ಇಂತಹ ಮಂದ್ ನಮ್ಮೆಯಿಂದ ಸಂಸ್ಕೃತಿಯ ಉಳಿಯುವಿಕೆಗೊಂದು ವೇದಿಕೆಯಾಗಲಿದೆ ಎಂದರು. ಮುಂದಿನ ದಿನಗಳಲ್ಲಿ ಸರಕಾರದ ಅನುದಾನ ಬಂದ ನಂತರ ಹಲವು ಕಾರ್ಯ ಕ್ರಮದ ಜೊತೆಗೆ ವಿವಿಧ ಪರಿಕರಗಳನ್ನು ವಿತರಿಸಲಾಗು ವುದೆಂದರು.
ವೇದಿಕೆಯಲ್ಲಿ ತಮಿಳುನಾಡಿನ ಪರಿಶಿಷ್ಟಜಾತಿ ಹಾಗೂ ಪಂಗಡ ಆಯೋಗದ ಸದಸ್ಯೆ ಲೀಲಾವತಿ ಧನರಾಜ್, ಕುಂಜಿಲ ಕಕ್ಕಬೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಲಿಯಂಡ ಸಂಪನ್ ಅಯ್ಯಪ್ಪ, ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷ ಕುಡಿಯರ ಭರತ್ ಚಂದ್ರದೇವಯ್ಯ, ನಿವೃತ್ತ ಯೋಧ ಕುಯಿನಾಲಮಲೆ ಬೋಪಯ್ಯ, ನಾಲಡಿ ಗ್ರಾಮದ ಹಿರಿಯ ಜಾನಪದ ಕಲಾವಿದ ಕೋಡಿಮಣಿಯಂಡ ಬೋಪಯ್ಯ, ನಾಪೋಕ್ಲುವಿನ ಹಿರಿಯ ಜಾನಪದÀ ಕಲಾವಿದರಾದ ಕುಂಡ್ಯೋಳAಡ ರಮೇಶ್ ಮುದ್ದಯ್ಯ, ಯವಕÀಪಾಡಿ ಹಿರಿಯ ಜಾನಪದÀ ಕಲಾವಿದರಾದ ಪೂಮಾಲೆಕುಡಿಯ ಸಮಾಜದ ಸದಸ್ಯೆ ನಾಡಮಲೆ ಕಾವೇರಮ್ಮ, ಶತಾಯುಶಿ ಯವಕಪಾಡಿಯ ಕುಂಡುಮಲೆ ಪೂವಮ್ಮ ಬೆಳ್ಯಪ್ಪ ಹಾಗೂ ಹಿರಿಯ ಜಾನಪದ ಕಲಾವಿದರಾದ ಕೋಲಿಂದಮಲೆ ಎ. ಬೋಪಯ್ಯ, ಚೀಯಕಪೂವಂಡ ದೇವಯ್ಯ, ಕುಂಡಿಯೋಳAಡ ಸುಬ್ಬಯ್ಯ, ಕರಾಟೆಪಟು ಕೆ.ಪಿ. ಚಂಗಪ್ಪ ಚೇತನ್ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ವಿವಿಧ ತಂಡಗಳಿAದ ಉರ್ಟಿಕೊಟ್ಟ್ ಆಟ್, ಪÀರಿಯಕಳಿ, ಬಾಳೋಪಾಟ್, ಬೊಳಕಾಟ್, ಕೋಲಾಟ್ ಹಾಗೂ ಕೆಂಬಟ್ಟಿ ಜನಾಂಗದ ವಾಲಗತಾಟ್, ಕಾಪಳ ಜನಾಂಗದ ನೃತ್ಯ ಪ್ರದರ್ಶನ ನಡೆಯಿತು. ಪುರಾತನ ಕಾಲದ ಬಳಕೆಯ ವಸ್ತು ಪ್ರದರ್ಶನ ಹಾಗೂ ಅಕಾಡೆಮಿಯ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಅಕಾಡೆಮಿ ಸದಸ್ಯರು, ಸ್ಥಳೀಯರು ಭಾಗವಹಿಸಿದ್ದರು. ಭರತ್ಚಂದ್ರ ದೇವಯ್ಯ ಸ್ವ್ವಾಗತಿಸಿ, ಕುಡಿಯರ ಮುತ್ತಪ್ಪ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.
-ಪುತ್ತರಿರ ಕರುಣ್ಕಾಳಯ್ಯ