ಗೋಣಿಕೊಪ್ಪಲು, ಫೆ.೯: ಅಮ್ಮತ್ತಿ ನಗರಕ್ಕೆ ನಾಲ್ಕು ದಿಕ್ಕುಗಳಿಂದ ಸೇರುವ ರಸ್ತೆಗಳು ಅತ್ಯಂತ ಹದಗೆಟ್ಟಿದ್ದು ಸಾರ್ವಜನಿಕರಿಗೆ ತೀವ್ರ ತೊಂದರೆ ಆಗುತ್ತಿರುವುದನ್ನು ಖಂಡಿಸಿ ಅಮ್ಮತ್ತಿ ಪಟ್ಟಣವನ್ನು ಬಂದ್ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ.
ಅಮ್ಮತ್ತಿ ಬಸವೇಶ್ವರ ದೇವಾಲಯ ಆವರಣದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅಮ್ಮತ್ತಿ ನಾಡು ನಾಗರಿಕರ ಹಿತರಕ್ಷಣಾ ವೇದಿಕೆಯ ಮೂಲಕ ಬಂದ್‌ಗೆ ಕರೆ ನೀಡ ಲಾಗಿದ್ದು, ತಾ. ೧೪ ರಂದು ಬೆಳಿಗ್ಗೆ ೧೧ ಗಂಟೆಯಿAದ ಮಧ್ಯಾಹ್ನ ೧ ಗಂಟೆಯವರೆಗೆ ಪಟ್ಟಣ ಬಂದ್ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ವೇದಿಕೆಯ ಪ್ರಿನ್ಸಿ ಗಣಪತಿ ತಿಳಿಸಿದರು.
ಆ ಮೂಲಕ ಜನಪ್ರತಿನಿಧಿಗಳನ್ನು ಹಾಗೂ ಅಧಿಕಾರಿಗಳನ್ನು ಗಮನ ಸೆಳೆಯಲಾಗುವುದು ಕಳೆದ ನಾಲ್ಕು ವರ್ಷಗಳಿಂದ ಅಮ್ಮತ್ತಿ ನಾಡಿನ ಜನತೆ ಈ ಸಮಸ್ಯೆ ಎದುರಿಸುತ್ತಿದ್ದಾರೆ. ಅನೇಕ ಭಾರಿ ಈ ಬಗ್ಗೆ ಅಧಿಕಾರಿಗಳಿಗೆ ಪತ್ರ ಬರೆದರೂ ಪ್ರಯೋಜನವಾಗಿಲ್ಲ. ಹೀಗಾಗಿ ಅನಿವಾರ್ಯವಾಗಿ ನಾಡಿನ ಜನರು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ ಎಂದು ವಿವರ ನೀಡಿದರು.
ಅಮ್ಮತ್ತಿಯಿಂದ ಒಂಟಿಯAಗಡಿ, ಅಮ್ಮತ್ತಿಯಿಂದ ಸಿದ್ದಾಪುರ, ಅಮ್ಮತ್ತಿ ಯಿಂದ ಹೊಸೂರು, ಪಾಲಿಬೆಟ್ಟ, ಅಮ್ಮತ್ತಿಯಿಂದ ವೀರಾಜಪೇಟೆ ತೆರಳುವ ಎಲ್ಲಾ ಮಾರ್ಗಗಳು ಹಾಳಾಗಿದ್ದು ಈ ಬಗ್ಗೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ನವರ ಸಮ್ಮುಖದಲ್ಲಿ ನಾಗರಿಕರು ಭೇಟಿ ಮಾಡಿ ಮನವಿ ಸಲ್ಲಿಸಲಾಗಿತ್ತು. ಈ ವೇಳೆ ಹಿರಿಯ ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದ್ದರು. ಅಧಿಕಾರಿಗಳು ಕೇವಲ ಗುಂಡಿ ಮುಚ್ಚುವ ಕೆಲಸ ಮಾಡಿ ಸುಮ್ಮನಾಗಿದ್ದಾರೆ ಎಂದು ದೂರಿದರು. ಇದೀಗ ಗುಂಡಿ ಮುಚ್ಚಿದ ರಸ್ತೆಗಳು ಇನ್ನಷ್ಟು ಹದಗೆಟ್ಟಿವೆ, ಹೀಗಾಗಿ ನಗರ ಬಂದ್ ಮಾಡಿ ಪ್ರತಿಭಟನೆ ಮಾಡುವ ನಿರ್ಧಾರಕ್ಕೆ ಬರಲಾಗಿದೆ ಎಂದು ಪ್ರಿನ್ಸ್ ಗಣಪತಿ ಸ್ಪಷ್ಟ ಪಡಿಸಿದರು.
ಗೋಷ್ಠಿಯಲ್ಲಿ ಪ್ರಮುಖರಾದ ಧನ್ಯ ದೇವಯ್ಯ, ಪಿ.ಎನ್.ಸೋಮೇಶ್, ಜಯ ಉತ್ತಪ್ಪ, ಹರೀಶ್ ಕಾವೇರಪ್ಪ, ಪ್ರತಂ ಕಾವೇರಪ್ಪ, ಮಧು ಮಾದಪ್ಪ, ಅಯ್ಯಪ್ಪ, ವಿಶ್ವನಾಥ್ ಉಪಸ್ಥಿತರಿದ್ದರು.
- ಹೆಚ್.ಕೆ.ಜಗದೀಶ್