ಗೋಣಿಕೊಪ್ಪ ವರದಿ, ಫೆ. ೯ ; ಯೋಗ ಫೆಡರೇಷನ್ ಆಫ್ ಇಂಡಿಯಾ ವತಿಯಿಂದ ಪಿ. ಎಚ್. ಅಲೀಮ ಅವರಿಗೆ ರಾಷ್ಟçಮಟ್ಟದ ಉತ್ತಮ ಯೋಗ ಗುರು ಪ್ರಶಸ್ತಿ ಲಭಿಸಿದೆ.

ರಾಷ್ಟçಮಟ್ಟದ ಆನ್‌ಲೈನ್ ಯೋಗಾಸನ ಚಾಂಪಿಯನ್‌ಶಿಪ್‌ನಲ್ಲಿ ಉತ್ತಮ ಮಾರ್ಗದರ್ಶಕರಾಗಿ ಸೇವೆ ನೀಡಿದ ಹಿನ್ನೆಲೆ, ಪ್ರಶಸ್ತಿ ನೀಡಲಾಗುತ್ತಿದೆ. ಇವರು ಕುಟ್ಟ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿಯಾಗಿದ್ದಾರೆ.