ಮಡಿಕೇರಿ, ಫೆ. ೫: ಕೊಡವ ಸಮಾಜಗಳ ಒಕ್ಕೂಟದ ವತಿಯಿಂದ ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ ಅವರನ್ನು ಒಕ್ಕೂಟದ ಸಭೆಯಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.
ಬಾಳುಗೋಡಿನಲ್ಲಿ ನಡೆದ ಸಭೆಯಲ್ಲಿ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ, ಮುಕ್ಕಾಟಿರ ಟಿ. ನಾಣಯ್ಯ, ಖಜಾಂಚಿ ಚೆರಿಯಪಂಡ ಕಾಶಿಯಪ್ಪ, ಗೌರವ ಕಾರ್ಯದರ್ಶಿ ಶಂಕರಿ ಪೂವಯ್ಯ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.