ಮಡಿಕೇರಿ ಫೆ. ೫: ನೂತನವಾಗಿ ಕೊಡಗು ಜಿಲ್ಲಾ ದಲಿತ ಸಂಘರ್ಷ ಸಮಿತಿಯನ್ನು ರಚಿಸಲಾಗಿದ್ದು, ಜಿಲ್ಲಾ ಸಂಚಾಲಕರಾಗಿ ಟಿ.ಈ. ಸುರೇಶ್ ಆಯ್ಕೆಯಾಗಿದ್ದಾರೆ.
ಕೊಡ್ಲಿಪೇಟೆಯ ಜ್ಞಾನಮಂದಿರದಲ್ಲಿ ನಡೆದ ಸಮಿತಿಯ ಸಭೆಯಲ್ಲಿ ಗೌರವ ಸಂಚಾಲಕರಾಗಿ ಡಿ.ಜೆ. ಈರಪ್ಪ, ಸೋಮವಾರಪೇಟೆ ತಾಲೂಕು ಸಂಚಾಲಕರಾಗಿ ಡಿ.ಎನ್. ವಸಂತ, ಕೊಡ್ಲಿಪೇಟೆ ಹೋಬಳಿ ಸಂಚಾಲಕರಾಗಿ ಡಿ.ಕೆ. ವೀರಭದ್ರ ಹಾಗೂ ಶನಿವಾರಸಂತೆ ಹೋಬಳಿ ಸಂಚಾಲಕರಾಗಿ ಹೆಚ್.ಆರ್. ಪಾಲಾಕ್ಷ ನೇಮಕಗೊಂಡರು.