ಗೋಣಿಕೊಪ್ಪಲು, ಫೆ. ೫: ನಿಟ್ಟೂರು ಪಂಚಾಯಿತಿ ಆವರಣದಲ್ಲಿ ವಿವಿಧ ಕಾರ್ಯಕ್ರಮಗಳ ವಿವಿಧ ಉದ್ಘಾಟನೆ ಸಂಭ್ರಮದಿAದ ನೆರವೇರಿತು. ನ್ಯಾಯ ಬೆಲೆ ಅಂಗಡಿ, ಡಿಜಿಟಲ್ ಲೈಬ್ರರಿ, ಅಂಚೆ ಕಚೇರಿ, ಸ್ವಚ್ಛತಾ ಘಟಕ, ಉದ್ಯಾನವನ ಹಾಗೂ ಸಮೀಪದಲ್ಲಿ ಕಾಲಬೈರವೇಶ್ವರ ದೇವಾಲಯಕ್ಕೆ ತೆರಳಲು ರಸ್ತೆ ಉದ್ಘಾಟನೆಗೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಹಾಗೂ ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಆಗಮಿಸಿದ್ದರು.
ಅಚ್ಚುಕಟ್ಟಾಗಿ ಮಾಡಿದ ಕೆಲಸಗಳ ಬಗ್ಗೆ ಪಂಚಾಯಿತಿ ಆಡಳಿತ ಮಂಡಳಿಯನ್ನು ಶಾಸಕದ್ವಯರು ಶ್ಲಾಘಿಸಿದರು. ಈ ವೇಳೆ ಗ್ರಾಮದ ಹಿರಿಯರು ರಾಜಕೀಯವನ್ನು ಬದಿಗೊತ್ತಿ ಅಭಿವೃದ್ಧಿ ಕೆಲಸಗಳಿಗೆ ಪಂಚಾಯಿತಿ ಆಡಳಿತ ಮಂಡಳಿ ಹಗಲು-ರಾತ್ರಿ ಶ್ರಮಿಸುತ್ತಿವೆ ಎಂದು ಪಂಚಾಯಿತಿ ಆಡಳಿತ ಮಂಡಳಿಯ ಕೆಲಸವನ್ನು ಮುಕ್ತ ಕಂಠದಿAದ ಶ್ಲಾಘಿಸಿದರು.
ಈ ವೇಳೆ ಪೂರ್ಣಗೊಂಡ ಹಲವಾರು ಕಾಮಗಾರಿಗಳನ್ನು ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಹಾಗೂ ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಉದ್ಘಾಟನೆ ಮಾಡಿದರು.
ಪಂಚಾಯಿತಿ ನೂತನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಪಂಚಾಯಿತಿ ಅಧ್ಯಕ್ಷ ಚಕ್ಕೇರ ಸೂರ್ಯ ಅಯ್ಯಪ್ಪ ಮಾತನಾಡಿ, ಗ್ರಾಮೀಣ ಭಾಗದಲ್ಲಿರುವ ನಾಗರಿಕರಿಗೆ ಉತ್ತಮ ಸೇವೆ ನೀಡಲು ಚುನಾವಣೆಯಲ್ಲಿ ಆರಿಸಿ ಬಂದಿದ್ದೇವೆ. ಪಂಚಾಯಿತಿ ಆಡಳಿತ ಮಂಡಳಿಯ ಒಮ್ಮತದ ನಿರ್ಧಾರ, ಪಾರದರ್ಶಕ ಆಡಳಿತ ಇಷ್ಟೊಂದು ಪ್ರಮಾಣದಲ್ಲಿ ಅಭಿವೃದ್ಧಿ ಕಾಣಲು ಸಾಧ್ಯವಾಯಿತು. ಶಾಸಕ ಕೆ.ಜಿ. ಬೋಪಯ್ಯ ಅವರು ಸಕಾಲದಲ್ಲಿ ನೀಡಿದ ಅನುದಾನವನ್ನು ಸದ್ಭಳಕೆ ಮಾಡಿಕೊಂಡು ಸುಮಾರು ರೂ. ೧೫ ಕೋಟಿಗೂ ಅಧಿಕ ವೆಚ್ಚದ ಕಾಮಗಾರಿ ಪೂರೈಸಲಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪಂಚಾಯಿತಿ ಸದಸ್ಯ ಕಾಟೀಮಾಡ ಶರೀನ್ ಮುತ್ತಣ್ಣ, ಗ್ರಾಮದ ಜನರು ನೀಡಿದ ಸಹಕಾರ ಹಾಗೂ ಶಾಸಕರ ಶ್ರಮದಿಂದ ಹಾಡಿಗಳಿಗೆ ಗುಣಮಟ್ಟದ ರಸ್ತೆ, ಮನೆಗಳಿಗೆ ಸೋಲಾರ್, ವ್ಯವಸ್ಥೆ, ನೈರ್ಮಲ್ಯಕ್ಕೆ ಒತ್ತು, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಜನರ ಸಮಸ್ಯೆಗಳಿಗೆ ಆಗಿಂದಾಗ್ಗೆ ಪಂಚಾಯಿತಿ ವತಿಯಿಂದ ಸ್ಪಂದಿಸುವ ಕೆಲಸ ಮಾಡಲಾಗಿದೆ ಎಂದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಕೆ.ಜಿ. ಬೋಪಯ್ಯ ಹಾಗೂ ಸುಜಾ ಕುಶಾಲಪ್ಪ ಅವರುಗಳು ಮುಂದೆಯೂ ಗ್ರಾಮದ ಅಭಿವೃದ್ಧಿಗೆ ಅನುದಾನ ನೀಡುವುದಾಗಿ ಭರವಸೆ ನೀಡಿದರಲ್ಲದೆ, ನಡೆದಿರುವ ಕೆಲಸವನ್ನು ಶ್ಲಾಘಿಸಿದರು.
೧೫ ವರ್ಷದ ಸಮಸ್ಯೆಗೆ ಪರಿಹಾರ.!
ಗ್ರಾಮದ ಕೊಟ್ಟಗೇರಿಯಲ್ಲಿರುವ ೨೫ ಕುಟುಂಬಗಳು ಕಳೆದ ೧೫ ವರ್ಷಗಳಿಂದ ಹಕ್ಕುಪತ್ರ ಸಮಸ್ಯೆ ಎದುರಿಸುತ್ತಿದ್ದರು. ಪ್ರಸ್ತುತ ಆಡಳಿತ ಮಂಡಳಿಯ ಅಧ್ಯಕ್ಷರ ಸಮ್ಮುಖದಲ್ಲಿ ೨೫ ಕುಟುಂಬಗಳನ್ನು ವಿಶ್ವಾಸಕ್ಕೆ ಪಡೆದು ವಕೀಲರ ಹಾಗೂ ಪಿಡಿಒ ಸಮ್ಮುಖದಲ್ಲಿ ಹಲವಾರು ಸಭೆಗಳನ್ನು ನಡೆಸಿ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಲಾಗಿದೆ ಎಂದು ಪಂಚಾಯತಿ ಸದಸ್ಯರಾದ ಕಾಟೀಮಾಡ ಶರೀನ್ ಮುತ್ತಣ್ಣ ಸಭೆಯಲ್ಲಿ ತಿಳಿಸಿದರು. ಈ ವೇಳೆ ೨೫ ಪಲಾನುಭವಿಗಳಿಗೆ ಶಾಸಕರು ಹಕ್ಕುಪತ್ರ ವಿತರಿಸಿದರು.
ಸಭೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ಪಡಿಂಞರAಡ ಕವಿತಾ ಪ್ರಭು, ಆರ್.ಎಂ.ಸಿ. ಸದಸ್ಯರಾದ ಮಾಚಂಗAಡ ಸುಜಾ ಪೂಣಚ್ಚ, ಕಾಲಭೈರೇಶ್ವರ ದೇವಾಲಯ ಸಮಿತಿಯ ಅಧ್ಯಕ್ಷ ಮೇಚಂಡ ಸೋಮಯ್ಯ, ಅಕ್ರಮ, ಸಕ್ರಮ ಸಮಿತಿ ಸದಸ್ಯರಾದ ಯಮುನಾ ಚಂಗಪ್ಪ, ಮಾಜಿ ಆರ್.ಎಂ.ಸಿ. ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ, ಬಿಜೆಪಿ ಶಕ್ತಿ ಕೇಂದ್ರ ಪ್ರಮುಖ್ ಅಳಮೇಂಗಡ ಸುರೇಶ್ ಸುಬ್ಬಯ್ಯ, ಸಹ ಪ್ರಮುಖ್ ಪವಿತಾ ರಮೇಶ್, ಕೃಷ್ಣ ಗಣಪತಿ, ತಾಣಚ್ಚಿರ ಲೇಯರ್ ಬಿದ್ದಪ್ಪ, ಸತೀಶ್ ದೇವಯ್ಯ, ಪಂಚಾಯಿತಿ ಸದಸ್ಯರು, ಪಿಡಿಒ ಮನಮೋಹನ್, ಗ್ರಾಮದ ಹಿರಿಯರು, ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.
ಪಡಿಂಞರAಡ ಪ್ರಭುಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಸ್ಥಳೀಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಉತ್ತಮ ಕೆಲಸ ನಿರ್ವಹಿಸಿದ ಗುತ್ತಿಗೆದಾರಿಗೆ ಗೌರವಿಸಲಾಯಿತು.