ಶನಿವಾರಸಂತೆ, ಫೆ. ೫: ಸಮೀಪದ ಹಂಡ್ಲಿ ಗ್ರಾಮ ಪಂಚಾಯಿತಿ ಮತ್ತು ಶ್ರೀ ಬಸವೇಶ್ವರ ದೇವಸ್ಥಾನ ಸಮಿತಿ ವತಿಯಿಂದ ೭೭ನೇ ವರ್ಷದ ಶ್ರೀಜಯದೇವ ಜಾನುವಾರುಗಳ ಜಾತ್ರಾ ಮಹೋತ್ಸವ ಹಾಗೂ ಶಿವಕುಮಾರ ಮಹಾಸ್ವಾಮೀಜಿಯವರ ಪುಣ್ಯಾರಾಧನಾ ಕಾರ್ಯಕ್ರಮ ತಾ.೭ರಂದು (ನಾಳೆ) ನಡೆಯಲಿದೆ.
ಬೆಳಿಗ್ಗೆ ೯.೩೦ಕ್ಕೆ ಶನಿವಾರಸಂತೆಯ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಿಂದ ವಾದ್ಯಗೋಷ್ಠಿ, ನಂದೀಧ್ವಜ, ವೀರಗಾಸೆ ವೈಭವದೊಂದಿಗೆ ಶಿವಕುಮಾರ ಮಹಾ ಸ್ವಾಮೀಜಿಯವರ ಭಾವಚಿತ್ರ ಹಾಗೂ ಗುಡುಗಳಲೆ ಗ್ರಾಮದ ಶ್ರೀ ಬಸವೇಶ್ವರ ಶನಿವಾರಸಂತೆ, ಫೆ. ೫: ಸಮೀಪದ ಹಂಡ್ಲಿ ಗ್ರಾಮ ಪಂಚಾಯಿತಿ ಮತ್ತು ಶ್ರೀ ಬಸವೇಶ್ವರ ದೇವಸ್ಥಾನ ಸಮಿತಿ ವತಿಯಿಂದ ೭೭ನೇ ವರ್ಷದ ಶ್ರೀಜಯದೇವ ಜಾನುವಾರುಗಳ ಜಾತ್ರಾ ಮಹೋತ್ಸವ ಹಾಗೂ ಶಿವಕುಮಾರ ಮಹಾಸ್ವಾಮೀಜಿಯವರ ಪುಣ್ಯಾರಾಧನಾ ಕಾರ್ಯಕ್ರಮ ತಾ.೭ರಂದು (ನಾಳೆ) ನಡೆಯಲಿದೆ.
ಬೆಳಿಗ್ಗೆ ೯.೩೦ಕ್ಕೆ ಶನಿವಾರಸಂತೆಯ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಿಂದ ವಾದ್ಯಗೋಷ್ಠಿ, ನಂದೀಧ್ವಜ, ವೀರಗಾಸೆ ವೈಭವದೊಂದಿಗೆ ಶಿವಕುಮಾರ ಮಹಾ ಸ್ವಾಮೀಜಿಯವರ ಭಾವಚಿತ್ರ ಹಾಗೂ ಗುಡುಗಳಲೆ ಗ್ರಾಮದ ಶ್ರೀ ಬಸವೇಶ್ವರ ಶಿವಲಿಂಗ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ವೀರಶೈವ ಸಮಾಜ ತಾಲೂಕು ಅಧ್ಯಕ್ಷ ಕೆ.ಬಿ. ಹಾಲಪ್ಪ, ದೇವಸ್ಥಾನ ಸಮಿತಿ ಅಧ್ಯಕ್ಷ ಡಿ.ಬಿ. ಧರ್ಮಪ್ಪ, ಕಾಳಿಕಾಂಬ ದೇವಾಲಯ ಸಮಿತಿ ಅಧ್ಯಕ್ಷ ಕೆ.ಎಲ್. ಲಕ್ಷö್ಮಣಾಚಾರ್ ಪಾಲ್ಗೊಳ್ಳುತ್ತಾರೆ. ಶಿವಕುಮಾರ ಮಹಾಸ್ವಾಮೀಜಿಯವರ ಪುಣ್ಯಾರಾಧನಾ ಪ್ರಯುಕ್ತ ದಾಸೋಹ ಕಾರ್ಯಕ್ರಮವಿದೆ.
ಕೋವಿಡ್ ಕಾರಣದಿಂದ ಹೆಚ್ಚಿನ ಜನ ಸೇರಲು ಜಿಲ್ಲಾಡಳಿತದಿಂದ ಅನುಮತಿ ಇಲ್ಲದಿರುವುದರಿಂದ ಜಾತ್ರೆಯಲ್ಲಿ ಅಂಗಡಿ - ಮುಂಗಟ್ಟು ಹಾಗೂ ಮನೋರಂಜನಾ ಕಾರ್ಯಕ್ರಮ ಇರುವುದಿಲ್ಲ ಎಂದು ಜಾತ್ರಾ ಸಮಿತಿ ಅಧ್ಯಕ್ಷ ಎನ್.ಎಂ. ಬಸವರಾಜ್, ಉಪಾಧ್ಯಕ್ಷ ಎಸ್.ಆರ್. ವೀರೇಂದ್ರಕುಮಾರ್, ಕಾರ್ಯದರ್ಶಿ ಎಚ್.ಎಂ. ವಿನಯ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.