ಮಡಿಕೇರಿ, ಫೆ. ೫: ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ ನಡೆಯಿತು. ಅಧ್ಯಕ್ಷತೆಯನ್ನು ವೈದ್ಯಕೀಯ ಕಾಲೇಜಿನ ಡೀನ್ ಡಾ.ಕೆ.ಬಿ.ಕಾರ್ಯಪ್ಪ ವಹಿಸಿ ಮಾತನಾಡಿ, ಕ್ಯಾನ್ಸರ್ ಕಾಯಿಲೆಯ ಬಗ್ಗೆ ಭಯ ಬೇಡ, ಕಾಯಿಲೆಯನ್ನು ಆದಷ್ಟು ಬೇಗ ಪ್ರಾರಂಭಿಕ ಹಂತದಲ್ಲೆ ಪತ್ತೆಹಚ್ಚಿದರೆ ಅದರಿಂದ ಗುಣಮುಖರಾಗಬಹುದು ಎಂದು ತಿಳಿಸಿದರು.

ಸರ್ಕಾರದಿಂದ ಕ್ಯಾನ್ಸರ್ ಕಾಯಿಲೆಗೆ ಉಚಿತವಾದ ಚಿಕಿತ್ಸೆಯನ್ನು ಸಾರ್ವಜನಿಕರಿಗೆ ನೀಡುವ ಸೌಲಭ್ಯವಿದ್ದು, ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿಯಲ್ಲಿ ಚಿಕಿತ್ಸೆ ಪಡೆಯಬಹುದು ಎಂದು ತಿಳಿಸಿದರು.

ಸಮುದಾಯ ವೈದ್ಯಶಾಸ್ತç ವಿಭಾಗದ ಸಹ ಪ್ರಾಧ್ಯಾಪಕ ಡಾ.ಶರವಣನ್ ಕ್ಯಾನ್ಸರ್ ಜಾಗೃತಿಯ ಮಹತ್ವದ ಕುರಿತು ಮಾತನಾಡಿದರು.

ಶಸ್ತçಚಿಕಿತ್ಸಾ ವಿಭಾಗದ ಪ್ರಾಧ್ಯಾಪಕ ಮತ್ತು ವಿಭಾಗ ಮುಖ್ಯಸ್ಥರಾದ ಡಾ.ಪ್ರವೀಣ್ ಕುಮಾರ್ ಕ್ಯಾನ್ಸರ್ ಪ್ರಸ್ತುತಿಯ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿದರು. ಯಾವುದೇ ವ್ಯಕ್ತಿಯಲ್ಲಿ ಗಡ್ಡೆ ಅಥವಾ ವಾಸಿ ಆಗದಿರುವ ಗಾಯ ಕಂಡುಬAದಲ್ಲಿ ಅದು ಕ್ಯಾನ್ಸರ್ ಕಾಯಿಲೆ ಲಕ್ಷಣ ಆಗಿರಬಹುದು. ಕ್ಯಾನ್ಸರ್ ಅನ್ನು ಆರಂಭಿಕ ಹಂತಗಳಲ್ಲಿ ಪತ್ತೆ ಹಚ್ಚಿದಾಗ ಉತ್ತಮ ಚಿಕಿತ್ಸೆಯನ್ನು ರೋಗಿಗೆ ನೀಡಬಹುದು. ಹಾಗೂ ಗುಣಪಡಿಸಬಹುದು ಮತ್ತು ಚಿಕಿತ್ಸೆಯ ನಂತರ ದೀರ್ಘಕಾಲ ಬದುಕುಳಿಯುವ ಅವಧಿಯನ್ನು ಹೊಂದಬಹುದು ಎಂದು ತಿಳಿಸಿದರು. ಕ್ಯಾನ್ಸರ್ ಕಾಯಿಲೆಗೆ ನೀಡುವ ಹಲವು ಚಿಕಿತ್ಸೆಗಳ ಬಗ್ಗೆ ಮಾಹಿತಿ ನೀಡಿದರು.

ದಂತ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥರಾದ ಡಾ.ಕೇದಾರನಾಥ್ ಅವರು ಮಾತನಾಡಿ ಬಾಯಿಯ ಕ್ಯಾನ್ಸರ್ ಬಗ್ಗೆ ಮಾಹಿತಿ ನೀಡಿದರು. ತಂಬಾಕು ಸೇವನೆಯಿಂದ ಭಾರತದಲ್ಲಿ ಬಾಯಿಯ ಕ್ಯಾನ್ಸರ್ ಅನ್ನು ಹೆಚ್ಚಾಗಿ ಕಾಣಬಹುದು, ಮತ್ತು ಕ್ಯಾನ್ಸರ್ ಪ್ರಮಾಣವು ಕಡಿಮೆಯಾಗಲು ತಂಬಾಕು ಸೇವನೆಯಿಂದ ದೂರ ಇರಬೇಕು ಎಂದರು.

ಕಿವಿ, ಮೂಗು ಮತ್ತು ಗಂಟಲು ಮುಖ್ಯಸ್ಥರಾದ ಡಾ.ಶ್ವೇತ ಅವರು ಕಿವಿ, ಮೂಗು ಮತ್ತು ಗಂಟಲಿನ ಕ್ಯಾನ್ಸರ್ ರೋಗ ಲಕ್ಷಣಗಳ ಬಗ್ಗೆ ಮಾತನಾಡಿದರು. ೨ ವಾರಕ್ಕಿಂತ ಹೆಚ್ಚಾಗಿ ಧ್ವನಿಯಲ್ಲಿ ಬದಲಾವಣೆ, ಕತ್ತಿನಲ್ಲಿ ಗಡ್ಡೆ, ನುಂಗಲು ತೊಂದರೆ ಕಾಣಿಸಿದರೆ ಹಾಗೂ ಮೂಗು ಮತ್ತು ಕಿವಿಯಲ್ಲಿ ರಕ್ತ ಬರುವುದು ಕ್ಯಾನ್ಸರ್ ರೋಗ ಲಕ್ಷಣಗಳಾಗಿರಬಹುದೆಂದು ತಿಳಿಸಿದರು.

ಇಂತಹ ರೋಗ ಲಕ್ಷಣವಿದ್ದರೆ ಅಂತವರು ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿದರೆ ಪ್ರಥಮ ಹಂತದಲ್ಲೇ ಕ್ಯಾನ್ಸರ್ ಅನ್ನು ಪತ್ತೆ ಹಚ್ಚಿ ಕ್ಯಾನ್ಸರ್ ಹೊರಹಾಕಲು ಉನ್ನತ ಚಿಕಿತ್ಸೆ ನೀಡಬಹುದು ಎಂದರು.

ತAಬಾಕು ಮತ್ತು ಮದ್ಯ ಸೇವನೆ ಮಾತ್ರವಲ್ಲದೆ ಬದಲಾಗುತ್ತಿರುವ ಜೀವನ ಶೈಲಿ ಮತ್ತು ಆಹಾರದಲ್ಲಿ ವಿವಿಧ ರಾಸಾಯನಿಕಗಳ ಹೆಚ್ಚಿದ ಸೇವನೆಯು ಕ್ಯಾನ್ಸರ್‌ಗೆ ಮುಖ್ಯ ಕಾರಣವಾಗುವ ಅಂಶವಾಗಿದೆ ಎಂದು ತಿಳಿಸಿದರು.

ಡಾ. ಮಹಿಮೇಶ್, ಸ್ವಾಗತಿಸಿ, ನಿರೂಪಿಸಿ ವಂದಿಸಿದರು.