ಮಡಿಕೇರಿ, ಫೆ. ೫: ಕೊಡಗು ಜಿಲ್ಲೆಯಲ್ಲಿ ಈ ಹಿಂದೆ ಜಮಾಬಂದಿ ವಹಿ ಚಾಲ್ತಿಯಲ್ಲಿದ್ದು, ೨೦೦೦ ಇಸವಿಯಿಂದ ಆರ್.ಟಿ.ಸಿ. ಚಾಲ್ತಿಗೆ ಬಂದ ನಂತರ ಪಟ್ಟೆದಾರಿಕೆ ಹಾಗೂ ಪೌತಿ ವಾರಸಾ ಬದಲಾವಣೆ ವಿಷಯದಲ್ಲಿ ಗೊಂದಲ ಹಾಗೂ ಸಮಸ್ಯೆಗಳಿರುವುದಾಗಿ ಸಂಘ- ಸಂಸ್ಥೆಗಳು ಹಾಗೂ ಸಾರ್ವಜನಿಕರು ಗಮನಕ್ಕೆ ತಂದಿದ್ದು, ಇದನ್ನು ಬಗೆಹರಿಸುವ ನಿಟ್ಟಿನಲ್ಲಿ ಚರ್ಚಿಸಲು ತಾ. ೯ರಂದು ಪೂರ್ವಾಹ್ನ ೧೦.೩೦ ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಭೆ ಕರೆಯಲಾಗಿದೆ. ಈ ಸಭೆಗೆ ಈ ವಿಚಾರದಲ್ಲಿ ಆಸಕ್ತಿ ಹಾಗೂ ಮಾಹಿತಿ ಹೊಂದಿರುವವರು ಸಹ ಹಾಜರಾಗಿ ತಮ್ಮ ಅಭಿಪ್ರಾಯ- ಸಲಹೆಗಳನ್ನು ಮೌಖಿಕವಾಗಿ / ಲಿಖಿತವಾಗಿ ನೀಡಬಹುದಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.