ಗೋಣಿಕೊಪ್ಪ ವರದಿ, ಫೆ. ೪: ರಾಷ್ಟಿçÃಯ ಭೌಗೋಳಿಕ ವಿಜ್ಞಾನ ಕಾರ್ಯಕ್ರಮದಡಿ ಕೇಂದ್ರ ಸರ್ಕಾರ ಪ್ರಾಯೋಜಿತ ಕಾರ್ಯಾಗಾರದ ಸಮಾರೋಪ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ನಡೆಯಿತು.

ತರಬೇತಿ ಕಾರ್ಯಾಗಾರದ ಕೈಪಿಡಿಯನ್ನು ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನ ವಿಶ್ವ ವಿದ್ಯಾಲಯದ ಶಿಕ್ಷಣ ನಿರ್ದೇಶಕ ಡಾ. ಎಂ. ಹನುಮಂತಪ್ಪ ಈ ಸಂದರ್ಭ ಬಿಡುಗಡೆಗೊಳಿಸಿ ಮಾತನಾಡಿ, ತರಬೇತಿಯಲ್ಲಿ ಕಲಿತ ಶಿಕ್ಷಣವನ್ನು ಬದುಕಿನಲ್ಲೂ ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು.

ಕಾರ್ಯಾಗಾರ ಸಂಚಾಲಕ ಡಾ. ಡಿ. ರವಿಕುಮಾರ್ ಮಾತನಾಡಿ, ಬೌಗೋಳಿಕ ವಿಜ್ಞಾನ ಮತ್ತು ತಂತ್ರಜ್ಞಾನದ ಮೂರು ವಾರ ತರಬೇತಿ ನೀಡಲಾಗಿದೆ. ಸುಮಾರು ೧೭ ಸಂಪನ್ಮೂಲ ವ್ಯಕ್ತಿಗಳಿಂದ ಗುಣಮಟ್ಟದ ಮಾಹಿತಿ ದೊರೆಯುವಂತೆ ಮಾಡಲಾಗಿದೆ. ೫೦ ವಿಭಾಗಗಳಲ್ಲಿ ಮಾಹಿತಿ ನೀಡಲಾಗಿದೆ. ರಿಮೋಟ್ ಸೆನ್ಸರ್, ನಕ್ಷಾಶಾಸ್ತç, ಪ್ರಮಾಣ ಮತ್ತು ಹಂಚಿಕೆ, ಬೌಗೋಳಿಕ ವಿಶ್ಲೇಷಣೆ ಹೀಗೆ ತರಬೇತಿ ನೀಡಲಾಗಿದೆ. ವಿದ್ಯಾರ್ಥಿಗಳಿಗೆ ತರಬೇತಿಯಿಂದ ಸಾಕಷ್ಟು ಪ್ರಯೋಜನ ದೊರೆಯಲಿದೆ ಎಂದರು.

ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನ ವಿಶ್ವ ವಿದ್ಯಾಲಯದ ಕುಲಪತಿ ಡಾ. ಎಂ.ಕೆ. ನಾಯಕ್, ರಾಷ್ಟಿçÃಯ ಕೃಷಿ ಉನ್ನತ ಶಿಕ್ಷಣ ವಿಭಾಗದ ಸಂಚಾಲಕ ಡಾ. ಕೆ.ಸಿ ಶಶಿಧರ್, ಹೈದರಾಬಾದ್ ಎನ್‌ಆರ್‌ಎಸ್‌ಸಿ ಭುವನ್ ಜಿಯೋ ಪೋರ್ಟಲ್ ಮತ್ತು ವೆಬ್ ಸರ್ವಿಸ್ ಉಪ ನಿರ್ದೇಶಕ ಡಾ. ಟಿ. ರವಿಶಂಕರ್, ಬೆಂಗಳೂರು ಕೆಎಸ್‌ಸಿಎಸ್‌ಟಿ ಆಡಳಿತ ಕಾರ್ಯದರ್ಶಿ ಹೇಮಂತ್‌ಕುಮಾರ್, ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ಪ್ರಭಾರ ಮುಖ್ಯಸ್ಥ ಡಾ. ಜಿ.ಎಂ. ದೇವಗಿರಿ ಇದ್ದರು.