ಚೆಟ್ಟಳ್ಳಿ, ಫೆ. ೪: ಚೆಟ್ಟಳ್ಳಿ ಗ್ರಾಮ ಸಭೆ ಗದ್ದಲ, ಗೊಂದಲ ನಡುವೆ ನಡೆಯಿತು. ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರುಗಳಾದ ಬಲ್ಲಾರಂಡ ಮಣಿ ಉತ್ತಪ್ಪ ಹಾಗೂ ಸುನಿತಾ ಮಂಜುನಾಥ್ ನಡುವೆ ‘ಮೈಕ್’ಗಾಗಿ ಕಿತ್ತಾಟ ನಡೆಯಿತು.

ಗ್ರಾಮ ಸಭೆ ಪ್ರಾರಂಭವಾಗುತ್ತಿದ್ದAತೆ ಚೆಟ್ಟಳ್ಳಿ ಪಟ್ಟಣದಲ್ಲಿ ಕಸದ ಸಮಸ್ಯೆ, ಗಬ್ಬೆದ್ದು ನಾರುವ ಚರಂಡಿಗಳ ಬಗ್ಗೆ ಖುದ್ದಾಗಿ ಪರಿಶೀಲಿಸಿ ಸಮಸ್ಯೆ ಪರಿಹಾರದ ನಂತರ ಗ್ರಾಮ ಸಭೆ ನಡೆಸಬೇಕೆಂದು ಬಲ್ಲಾರಂಡ ಮಣಿ ಉತ್ತಪ್ಪ ಪಟ್ಟು ಹಿಡಿದು ಪ್ರತಿಭಟಿಸಲು ವೇದಿಕೆಯ ಮುಂದೆ ಧರಣಿ ಕುಳಿತಾಗ ಅಜೆಂಡಾ ಪ್ರಕಾರ ಸಭೆ ನಡೆಸಿ ಈ ಬಗ್ಗೆ ಚರ್ಚಿಸೋಣ ಎಂದ ನಂತರ ಪ್ರತಿಭಟನೆ ಕೈಬಿಟ್ಟರು.

ಗ್ರಾ.ಪಂ. ಅಧ್ಯಕ್ಷ ಪಿ.ಟಿ. ಮುತ್ತಪ್ಪÀ ಅಧ್ಯಕ್ಷತೆಯಲ್ಲಿ ಹಾಗೂ ನೋಡಲ್ ಅಧಿಕಾರಿ ಪಶು ವೈದ್ಯಾಧಿಕಾರಿ ಡಾ.ಸಂಜೀವ ಉಪಸ್ಥಿತಿಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು. ಕೆಲವು ಇಲಾಖೆಯ ಸಂಬAಧಪಟ್ಟ ಅಧಿಕಾರಿಗಳು ಸಭೆಗೆ ಗೈರಾದ ಬಗ್ಗೆ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.

‘ಮೈಕ್’ ಗಾಗಿ ಕಿತ್ತಾಟ

ಸೋಲಾರ್ ದೀಪ ಖರೀದಿಯಲ್ಲಿ ಅವ್ಯವಹಾರದ ಬಗ್ಗೆ ಹಾಗೂ ಜಿ.ಪಂ. ಮಾಜಿ ಸದಸ್ಯೆ ಲೆಟರ್‌ಪ್ಯಾಡ್‌ನಲ್ಲಿ ಕಾಮಗಾರಿಯ ಅನಧಿಕೃತ ಬಿಲ್ಲು ನೀಡಿರುವ ಬಗ್ಗೆ ಮಾಜಿ ಗ್ರಾ.ಪಂ. ಸದಸ್ಯ ಎನ್.ಎಸ್.ರವಿ ಆರೋಪಿಸಿದರು. ಕೂಡ್ಲೂರು ಗ್ರಾಮದಲ್ಲಿ ನೀರು ಬಿಡುವ ವ್ಯಕ್ತಿಯ ಗೌರವ ಧನವನ್ನು ನಕಲಿ ಸಹಿ ಬಳಸಿ ಹಣ ಡ್ರಾ ಮಾಡಿದ ವಿಚಾರ ಚರ್ಚೆಗೆ ಕಾರಣವಾಗುತ್ತಿದ್ದಂತೆ ಮಾಜಿ ಜಿ.ಪಂ. ಸದಸ್ಯೆ ಸುನಿತ ದೂರು ದಾಖಲಿಸುವಂತೆ ಧ್ವನಿ ಎತ್ತಿದಾಗ ಗೊಂದ¯ದ ವಾತಾವರಣ ಸೃಷ್ಟಿಯಾಯಿತು.

ಗ್ರಾಮಸ್ಥ ಸೋಮೇಶ ಅವರು ಅಧ್ಯಕ್ಷರು ಡಮ್ಮಿಯಾಗಿ ರಬ್ಬರ್ ಸ್ಟಾö್ಯಂಪಾಗಿರಬಾರದೆAದು ಹೇಳುತ್ತಿದ್ದಂತೆ ಸುನಿತಾ ಮಂಜುನಾಥ್ ವೇದಿಕೆಯಲ್ಲಿದ್ದ ಮೈಕನ್ನು ತೆಗೆದು ಅಧ್ಯಕ್ಷರನ್ನು ಅವಮಾನಿಸಲಾಗಿದೆ ಇದು ಖಂಡನೀಯವೆAದು ಆಕ್ರೋಶ ವ್ಯಕ್ತಪಡಿಸಿದರು. ಈ ವಿಷಯಕ್ಕೆ ಸಂಬAಧಿಸಿದAತೆ ಮಣಿ ಉತ್ತಪ್ಪ ಹಾಗೂ ಸುನಿತಾ ನಡುವೆ ವಾಗ್ವಾದ ನಡೆಯಿತು. ಅನಂತರ ಸುನಿತರವರ ಕೈಯಿಂದ ಮಾತನಾಡಲು ಮಣಿಉತ್ತಪ್ಪ ಮೈಕ್ ಎಳೆದರು ಎಂಬ ಕಾರಣಕ್ಕೆ ಕೆಲಕಾಲ ಸಭೆಯಲ್ಲಿ ಗದ್ದಲ ಉಂಟಾಗಿ ಉಭಯ ಕಡೆಯವರು ಏರುಧ್ವನಿಯಲ್ಲಿ ಕಿರುಚುತ್ತÀ ಆಕ್ರೋಶ ಹೊರಹಾಕಿದರು.

ಚೆಟ್ಟಳ್ಳಿ ಉಪಠಾಣೆ ಎ.ಎಸ್.ಐ. ಶ್ರೀನಿವಾಸ್ ಹಾಗೂ ಪೊಲೀಸ್ ಸಿಬ್ಬಂದಿಗಳು, ಗ್ರಾ.ಪಂ. ಸದಸ್ಯರು, ಸಾರ್ವಜನಿಕರು ಸಮಾಧಾನಪಡಿಸಲು ಪ್ರಯತ್ನಿಸಿದರು. ನಂತರ ನನ್ನಿಂದ ತಪ್ಪಾಗಿದ್ದರೆೆ ಕ್ಷಮೆ ಇರಲಿ ಎಂದು ಮಣಿಉತ್ತಪ್ಪ ಕ್ಷಮೆಯಾಚಿಸಿದರು.

ನ್ಯಾಯಾಲಯದಲ್ಲಿರುವ ಜಾಗದ ಪ್ರಕರಣವನ್ನು ಪರಸ್ಪರ ಮಾತುಕತೆ ಮೂಲಕ ಇತ್ಯರ್ಥಪಡಿಸಿಕೊಂಡು ಜನೋಪಯೋಗಿ ಡಯಾಲಿಸಿಸ್ ಕೇಂದ್ರ ತೆರೆಯಲು ಪೂರಕ ಸಹಕಾರ ನೀಡುವಂತೆ ಚೆಟ್ಟಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ಮನವಿ ಮಾಡಿದರು. ಅಲ್ಲದೇ ಕೃಷಿ ಪತ್ತಿನ ಸಹಕಾರ ಸಂಘದಿAದ ಪೆಟ್ರೋಲ್ ಬಂಕ್ ಆರಂಭಕ್ಕೆ ಗ್ರಾಮ ಪಂಚಾಯಿತಿ ಪರವಾನಗಿ ನೀಡಬೇಕಾಗಿ ಒತ್ತಾಯಿಸಿದರು.

ಕಸವನ್ನು ವಿಲೇವಾರಿ ಮಾಡಲು ಸೂಕ್ತ ಜಾಗವನ್ನು ಗುರುತಿಸುವ ಕೆಲಸ ಗ್ರಾಮ ಪಂಚಾಯಿತಿಯಿAದ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಯುವಕರು ಗುಂಪುಗೂಡಿ ರಾತ್ರಿಯಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದಾರೆ. ಅಲ್ಲದೇ ಗಾಂಜಾ ಮಾರಾಟ ಮಾಡುವ ವ್ಯಕ್ತಿಗಳ ಬಗ್ಗೆ ಮಾಹಿತಿ ನೀಡಿ ಸಹಕರಿಸಿ ಎಂದು ಚೆಟ್ಟಳ್ಳಿ ಪೊಲೀಸ್ ಉಪಠಾಣೆಯ ಎ.ಎಸ್.ಐ. ಶ್ರೀನಿವಾಸ್ ಮನವಿ ಮಾಡಿದರು.

ಪೊನ್ನತ್ತೊö್ಮಟ್ಟೆಯಲ್ಲಿದ್ದ ನ್ಯಾಯ ಬೆಲೆ ಅಂಗಡಿ ಕಂಬಿಬಾಣೆಯ ಭೂತನಕಾಡು ಗ್ರಾಮಕ್ಕೆ ವರ್ಗಾವಣೆಯಾಗಿರುವುದರಿಂದ ಜನರು ತೊಂದರೆಗೆ ಸಿಲುಕಿದ್ದಾರೆ ಎಂದು ಗ್ರಾಮಸ್ಥ ಶಕೀರ್ ಹಾಗೂ ಉನೈಸ್ ಅಸಮಾಧಾನ ವ್ಯಕ್ತಪಡಿಸಿದರು.

ಸಭೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ವಿಮಲಾಕ್ಷಮ ಸದಸ್ಯರುಗಳಾದ ಬಲ್ಲಾರಂಡ ಕಂಠಿ ಕಾರ್ಯಪ್ಪ, ತೀರ್ಥಕುಮಾರ್, ಸುರೇಶ್, ಮಂಜುನಾಥ್, ಮಧುಸೂದನ್, ಮುಳ್ಳಂಡ ಅಂಜನ್ ಮುತ್ತಪ್ಪ ಸೇರಿದಂತೆ ಇನ್ನಿತರರು ಇದ್ದರು.