ಮಡಿಕೇರಿ, ಫೆ. ೪: ರಾಯಚೂರು ಜಿಲ್ಲಾ ನ್ಯಾಯಾಧೀಶರಿಂದ ಗಣರಾಜ್ಯೋತ್ಸವ ಸಂದರ್ಭ ಡಾ.ಅಂಬೇಡ್ಕರ್ ಅವರಿಗೆ ಅಪಮಾನ ಖಂಡಿಸಿ ಜಿಲ್ಲಾ ದಲಿತ ಸಂಘರ್ಷ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ನಗರದಲ್ಲಿ ನ್ಯಾಯಾಧೀಶರ ಪ್ರತಿಕೃತಿಗೆ ಚಪ್ಪಲಿ ಹಾರ ಹಾಕುವ ಮೂಲಕ ಮೆರವಣಿಗೆ ಸಾಗಿ ಪ್ರತಿಭಟನಾ ನಿರತರು ನ್ಯಾಯಾಧೀಶರನ್ನು ವಜಾಗೊಳಿಸಬೇಕೆಂದು ಆಗ್ರಹಿಸಿದರು.
ವಿಭಾಗೀಯ ಸಂಚಾಲಕ ಎನ್.ವೀರಭದ್ರಯ್ಯ, ಮಡಿಕೇರಿ ತಾಲೂಕು ಸಂಚಾಲಕ ದೀಪಕ್, ಬೆಟ್ಟಗೇರಿ ಹೋಬಳಿ ಸಂಚಾಲಕ ಜ್ಯೋತಿ ಕುಮಾರ್ ಪ್ರಮುಖರಾದ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ನಗರದಲ್ಲಿ ನ್ಯಾಯಾಧೀಶರ ಪ್ರತಿಕೃತಿಗೆ ಚಪ್ಪಲಿ ಹಾರ ಹಾಕುವ ಮೂಲಕ ಮೆರವಣಿಗೆ ಸಾಗಿ ಪ್ರತಿಭಟನಾ ನಿರತರು ನ್ಯಾಯಾಧೀಶರನ್ನು ವಜಾಗೊಳಿಸಬೇಕೆಂದು ಆಗ್ರಹಿಸಿದರು.
ವಿಭಾಗೀಯ ಸಂಚಾಲಕ ಎನ್.ವೀರಭದ್ರಯ್ಯ, ಮಡಿಕೇರಿ ತಾಲೂಕು ಸಂಚಾಲಕ ದೀಪಕ್, ಬೆಟ್ಟಗೇರಿ ಹೋಬಳಿ ಸಂಚಾಲಕ ಜ್ಯೋತಿ ಕುಮಾರ್ ಪ್ರಮುಖರಾದ ಗಣೇಶ್, ಅಬೂಬಕ್ಕರ್, ಸಮಿತಿ ಪದಾಧಿಕಾರಿಗಳಿದ್ದರು.
*ಗೋಣಿಕೊಪ್ಪ : ರಾಯಚೂರಿನ ನ್ಯಾಯಾಧೀಶ ಮಲ್ಲಿಕಾರ್ಜನ ಗೌಡ ಅಂಬೇಡ್ಕರ್ ಅವರನ್ನು ಅವಮಾನಿಸಿದ್ದು, ಇವರ ಮೇಲೆ ದೇಶದ್ರೋಹದ ಪ್ರಕರಣವನ್ನು ದಾಖಲಿಸಿ ಗಡಿಪಾರು ಮಾಡಬೇಕೆಂದು ಕೊಡಗು ಜಿಲ್ಲಾ ದಲಿತ ಸಂಘರ್ಷ ಸಮಿತಿ ಒತ್ತಾಯಿಸಿ ಪ್ರತಿಭಟನೆ ನಡೆಸಿತು.
ಗೋಣಿಕೊಪ್ಪ ಬಸ್ ನಿಲ್ದಾಣದಲ್ಲಿ ಮಾನವ ಸರಪಳಿ ರಚಿಸಿ ನ್ಯಾಯಾಧೀಶರ ವಿರುದ್ಧ ಧಿಕ್ಕಾರ ಘೋಷಣೆಗಳನ್ನು ಹಾಕುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ನ್ಯಾಯಾಧೀಶರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ ಸ್ಥಳೀಯ ವೃತ್ತ ನಿರೀಕ್ಷಕರ ಮೂಲಕ ಮನವಿ ಪತ್ರವನ್ನು ಈ ಸಂದರ್ಭ ನೀಡಲಾಯಿತು.
ಜಿಲ್ಲಾ ದಲಿತ ಸಂಘರ್ಷ ಸಮಿತಿ ಸಂಚಾಲಕ ಹೆಚ್.ಆರ್. ಪರಶುರಾಮ್ ಮಾತನಾಡಿ, ಇಂತಹ ವ್ಯಕ್ತಿಯ ಬಗ್ಗೆ ನಿರ್ಧಾಕ್ಷೀಣ್ಯ ಕ್ರಮ ಕೈಗೊಳ್ಳಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು. ಭಾರತದ ಸಂವಿಧಾನ ರಚನೆಯ ಶಿಲ್ಪಿಯನ್ನು ದಿಕ್ಕರಿಸುವ ವ್ಯಕ್ತಿ ಭಾರತದಲ್ಲಿ ವಾಸಿಸಲು ಅಯೋಗ್ಯರಾಗಿದ್ದಾರೆ. ಇವರನ್ನು ಭಾರತದಿಂದ ಗಡಿಪಾರು ಮಾಡಬೇಕೆಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಖಜಾಂಚಿ ಹೆಚ್.ಆರ್. ಕುಮಾರ್ ಮಹಾದೇವ್ ಒತ್ತಾಯಿಸಿದರು.
ಈ ಸಂದರ್ಭ ಡಿ.ಎಸ್.ಎಸ್ ಮುಖಂಡರಾದ ಗೋವಿಂದಪ್ಪ, ಕೃಷ್ಣಪ್ಪ, ಕಾಟಿ ಮುರುಗ, ಆಂತರಿಕ ಶಿಸ್ತು ಮತ್ತು ತರಬೇತಿ ವಿಭಾಗದ ಸಂಚಾಲಕ ರಜಿನಿಕಾಂತ್, ಸಾಂಸ್ಕöÈತಿಕ ವಿಭಾಗ ಸಂಚಾಲಕ ಪಿ.ಜೆ. ಸುಬ್ರಮಣಿ, ಕಲಾ ಮಂಡಳಿ ಸಂಚಾಲಕ ಗಿರೀಶ್, ವಿದ್ಯಾರ್ಥಿ ಒಕ್ಕೂಟದ ಸತೀಶ್ ಹಾಗೂ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು, ಸದಸ್ಯರುಗಳು ಹಾಜರಿದ್ದರು.