ಶನಿವಾರಸAತೆ, ಫೆ. ೪: ಕುಶಾಲನಗರ ಸಂಚಾರಿ ಪೊಲೀಸ್ ಅಧಿಕಾರಿ ಸಹಾಯಕ ಸಬ್‌ಇನ್ಸ್ಪೆಕ್ಟರ್ ಸುರೇಶ್ (೫೨) ಅವರ ಅಂತ್ಯಕ್ರಿಯೆ ಸಕಲ ಪೊಲೀಸ್ ಗೌರವ ರಕ್ಷೆಯೊಂದಿಗೆ ನಡೆಯಿತು.
ಹಂಡ್ಲಿ ಪಂಚಾಯಿತಿ ವ್ಯಾಪ್ತಿಯ ಬೆಳ್ಳಾರಳ್ಳಿ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. ಮೃತ ಸುರೇಶ್ ಬೆಳ್ಳಾರಳ್ಳಿಯ ಶೋಭ ಎಂಬವರನ್ನು ಮದುವೆಯಾಗಿದ್ದು, ಕಳೆದ ೧೦ ದಿನಗಳಿಂದ ಕಾಣೆಯಾದ ಬಗ್ಗೆ ಕುಶಾಲನಗರ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿತ್ತು. ತಾ. ೩ರಂದು ಸುರೇಶ್ ಮೃತದೇಹ ಕೊಳೆತ ಸ್ಥಿತಿಯಲ್ಲಿ ಕೊಣನೂರು ಬಳಿ ಪತ್ತೆಯಾಗಿತ್ತು. ಹಾಸನ ಜಿಲ್ಲಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಯ ನಂತರ ಇಂದು ಸಂಜೆ ಅಂತ್ಯಕ್ರಿಯೆ ನಡೆಸಲಾಯಿತು.
ಅಂತ್ಯಕ್ರಿಯೆ ಸಂದರ್ಭ ಕುಶಾಲನಗರ ಡಿವೈಎಸ್‌ಪಿ ಶೈಲೇಂದ್ರ, ಇನ್ಸ್ಪೆಕ್ಟರ್‌ಗಳಾದ ಮಹೇಶ್, ಎಸ್. ಪರಶಿವಮೂರ್ತಿ, ಕುಶಾಲನಗರ ಟ್ರಾಫಿಕ್ ಠಾಣೆಯ ಎಸ್.ಐ. ಚಂದ್ರಶೇಖರ್, ಗ್ರಾಮಾಂತರ ಠಾಣಾಧಿಕಾರಿ ಶಿವಕುಮಾರ್, ಅಪ್ಪಾಜಿ ಹಾಗೂ ಪೊಲೀಸ್ ಸಿಬ್ಬಂದಿಗಳು, ಮೃತರ ಬಂಧುಗಳು, ಊರಿನ ಗ್ರಾಮಸ್ಥರು ಭಾಗವಹಿಸಿದ್ದರು.