ವೀರಾಜಪೇಟೆ, ಫೆ. ೪: ನಗರದ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ವೀರಾಜಪೇಟೆಯ ಜೀವನ ಜ್ಯೋತಿ ಟ್ರಸ್ಟ್ ವತಿಯಿಂದ ನಾಣ್ಯ ಮತ್ತು ನೋಟು ಪ್ರದರ್ಶನ ಏರ್ಪಡಿಸಲಾಗಿತ್ತು.
ನಾಣ್ಯ ಮತ್ತು ನೋಟು ಸಂಗ್ರಹಗಾರರಾದ ಅಜಯ್ ನಾರಾಯಣರಾವ್ ಅವರು ಕಳೆದ ಒಂಬತ್ತು ವರ್ಷಗಳಿಂದ ಸಂಗ್ರಹಿಸಿದ ಭಾರತದ ಪುರಾತನ ಹಾಗೂ ವಿಶ್ವದ ೧೮೦ ಕ್ಕೂ ಅಧಿಕ ದೇಶಗಳ ನಾಣ್ಯ ಮತ್ತು ನೋಟು ಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಯನ್ನು ಭಾರತೀಯ ಭೂ ಸೇನೆಯ ನಿವೃತ ಕರ್ನಲ್ ನೆರೆಪಂಡ ಎ.ಚಿಣ್ಣಪ್ಪ ಸ್ಥಾಪಕರು, ಶ್ರೀ ಅನ್ನಪೂರ್ಣೇಶ್ವರಿ ಪತ್ತಿನ ಸಹಕಾರ ಸಂಘ ಮೂರ್ನಾಡು ಇವರು ಉದ್ಘಾಟಿಸಿದರು.
ನಂತರ ಮಾತನಾಡಿದ ನೆರಪಂಡ ಎ.ಚಿಣ್ಣಪ್ಪ ನಮ್ಮ ದೇಶದ ಹಾಗೂ ಬೇರೆ ಬೇರೆ ದೇಶಗಳ ನಾಣ್ಯ ಹಾಗೂ ನೋಟುಗಳನ್ನು ಒಂದೇ ಕಡೆ ಯಲ್ಲಿ ನೋಡುವ ಅವಕಾಶ ದೊರೆತಿದೆ. ಪ್ರತಿಯೊಬ್ಬರಿಗೂ ಒಂದೊAದು ತರಹದ ಹವ್ಯಾಸಗಳು ಇರುತ್ತವೆ. ಅದರಲ್ಲೂ ೧೮೦ ಕ್ಕೂ ಹೆಚ್ಚು ದೇಶಗಳ ನಗದು ನಾಣ್ಯಗಳನ್ನು ಸಂಗ್ರಹ ಮಾಡುವುದು ಮತ್ತು ಪ್ರದರ್ಶನ ಮಾಡುವುದು ಅದರಿಂದ ಬಂದ ಹಣದಿಂದ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನೀಡುವುದು ನಿಜಕ್ಕೂ ಶ್ಲಾಘನೀಯ ಎಂದು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ. ಮಹಾಬಲೇಶ್ವರ ಭಟ್ ರವರು ಮಾತನಾಡಿ, ಅಜಯ್ರಾವ್ ಅವರು ಅಪರೂಪದ ಕಾರ್ಯವನ್ನು ಮಾಡಿ ಅದರಿಂದ ಬಂದAತ ಹಣದಿಂದ ಸಮಾಜ ಪರ ಕೆಲಸ ಮಾಡುತ್ತ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ತಿಳಿಸಿದರು. ಈ ಸಂದರ್ಭ ಜೀವನ ಜ್ಯೋತಿ ಟ್ರಸ್ಟ್ನ ಅಧ್ಯಕ್ಷ ಅಜೇಯ ರಾವ್, ಸಂಸ್ಥೆಯ ಸದಸ್ಯರುಗಳಾದ ಪದ್ಮನಾಭ, ಶಶಿಕುಮಾರ್, ಪ್ರಂಜೀತ್, ರದೀಶ, ವಸಂತ ಯುವರಾಜ್ ಕೃಷ್ಣ ಹಾಜರಿದ್ದರು.