ಮಡಿಕೇರಿ, ಫೆ. ೪: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಕೊಡವ ಭಾಷೆ, ಸಂಸ್ಕೃತಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕೊಡವ ವ್ಯಾಕರಣವನ್ನು ರಚನೆ ಮಾಡಲು ಮುಂದಾಗಿದೆ. ಅಕಾಡೆಮಿಯು ೭ ತಜ್ಞರನ್ನು ಒಳಗೊಂಡ ಒಂದು ಸಮಿತಿಯನ್ನು ರಚಿಸಿ ಇತ್ತೀಚೆಗೆ ಕೊಡವ ವ್ಯಾಕರಣ ಸಮಿತಿಯ ಪ್ರಥಮ ಸಭೆಯು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಕಚೇರಿಯಲ್ಲಿ ನಡೆಯಿತು.
ಈ ಸಮಿತಿಯ ತಜ್ಞರು ಹಾಗೂ ಅಧ್ಯಕ್ಷರಾಗಿ ಡಾ. ಅಮ್ಮಾಟಂಡ ಪಾರ್ವತಿ ಅಪ್ಪಯ್ಯ, ಬಾಚರಣಿಯಂಡ ಪಿ. ಅಪ್ಪಣ್ಣ, ಬಾಚರಣಿಯಂಡ ರಾಣು ಅಪ್ಪಣ್ಣ, ನಾಗೇಶ್ ಕಾಲೂರು, ಕಾಳಿಮಾಡ ಮೋಟಯ್ಯ, ಡಾ. ಮುಲ್ಲೇಂಗಡ ರೇವತಿ ಪೂವಯ್ಯ, ಧರ್ಮಶೀಲ ಅಜಿತ್ ಕಾರ್ಯ ನಿರ್ವಹಿಸಲಿದ್ದಾರೆ.
ಈಗಾಗಲೇ ಅಕಾಡೆಮಿಯಲ್ಲಿ ೨ ಸಮಿತಿ ಸಭೆಯನ್ನು ನಡೆಸಲಾಗಿದೆ. ಈ ವ್ಯಾಕರಣ ಪುಸ್ತಕವು ಮುಂದಿನ ದಿನಗಳಲ್ಲಿ ಕೊಡವ ಭಾಷೆಯನ್ನು ಕಲಿಯುವ ಹಾಗೂ ಕಲಿಸುವವರಿಗೆ ಉಪಯೋಗವಾಗುವುದು ಎಂದು ಅಧ್ಯಕ್ಷೆ ಪಾರ್ವತಿ ಅಪ್ಪಯ್ಯ ತಿಳಿಸಿದ್ದಾರೆ.