ಕುಡೆಕಲ್ ಸಂತೋಷ್ ಮಡಿಕೇರಿ, ಫೆ. ೩: ಜಿಲ್ಲೆಯಲ್ಲಿ ಕಂಡು - ಕೇಳರಿಯದ ಅನಾಹುತ ನಡೆದು ಹೋಗಿದ್ದು ೨೦೧೮ರಲ್ಲಿ., ಮನೆ ಮಠ ಕಳೆದುಕೊಂಡು ಸಂತ್ರಸ್ತರಾದವರು ಅತಂತ್ರರಾಗಿ ಮೂರು ವರ್ಷಗಳು ಕಳೆದಿವೆ., ಮನೆ ಕಳೆದುಕೊಂಡವರಿಗೆ ಪರಿಹಾರವಾಗಿ ಸರಕಾರ ಮನೆಗಳನ್ನು ನಿರ್ಮಿಸಿದೆ., ಆದರೆ., ಮನೆಯಲ್ಲಿ ನೆಲೆ ಕಂಡುಕೊಳ್ಳಲು ಇನ್ನೂ ಕೂಡ ಸಂತ್ರಸ್ತರಿಗೆ ಸಾಧ್ಯವಾಗಿಲ್ಲ., ಮನೆಗಳಿರುವ ಬಡಾವಣೆಯ ಉದ್ಘಾಟನೆ ಆಗಿ ಒಂಭತ್ತು ತಿಂಗಳಾಗಿದೆ., ಫಲಾನುಭವಿಗಳಿಗೆ ಮನೆಗಳನ್ನು ಹಂಚಿಕೆ ಮಾಡಿ ಐದು ತಿಂಗಳಾದರೂ ಇನ್ನೂ ಬೀಗದ ಕೀಲಿ ಕೈ ಸಿಕ್ಕಿಲ್ಲ., ಸಂತ್ರಸ್ತರನೇಕರು ಇನ್ನೂ ಕೂಡ ಬಾಡಿಗೆ ಮನೆಗಳಲ್ಲಿದ್ದಾರೆ., ಇನ್ನೂ ಕೂಡ ಕೆಲಸ ಕಾಮಗಾರಿಗಳು ಪೂರ್ಣಗೊಂಡಿಲ್ಲ., ಆಗಿರುವ ಅವೈಜ್ಞಾನಿಕ ಕಾಮಗಾರಿಗಳಿಂದಾಗಿ ಬಹುತೇಕ ಮನೆಗಳಿಗೆ ತೆರಳಲು ಮಾರ್ಗವೇ ಇಲ್ಲದಾಗಿದ್ದು, ಮತ್ತೊಬ್ಬರ ಮನೆಗಾಗಿ ಹಾದು ಹೋಗಬೇಕಾಗಿದೆ., ಇದು ಜಗಳಕ್ಕೆ ದಾರಿ ಮಾಡಿ ಕೊಟ್ಟಂತಾಗಿದೆ..!
ಸAತ್ರಸ್ತರಿಗಾಗಿ ಗಾಳಿಬೀಡು ಗ್ರಾಮದಲ್ಲಿನ ವಿಶಾಲವಾದ ಪ್ರದೇಶದಲ್ಲಿ ಸುಮಾರು ೨೦೦ ಮನೆಗಳನ್ನು ನಿರ್ಮಿಸಲಾಗಿದೆ. ಸರಿಯಾದ ರೀತಿಯಲ್ಲಿ ನೆಲ ಸಮತಟ್ಟು ಮಾಡದೆ ಜಾಗ ಇರುವಂತೆಯೇ
(ಮೊದಲ ಪುಟದಿಂದ) ಮನೆ ನಿರ್ಮಿಸಲಾಗಿದ್ದು, ಇದೀಗ ಸಮಸ್ಯೆಯಾಗಿ ಪರಿಣಮಿಸಿದೆ. ನಿರ್ಮಾಣ ಕಾರ್ಯ ಪೂರ್ಣಗೊಳ್ಳುವ ಮುನ್ನವೇ ಬಡಾವಣೆಯ ಉದ್ಘಾಟನೆ ಮಾಡಲಾಗಿದ್ದು, ಹಂಚಿಕೆ ಕೂಡ ಮಾಡಲಾಗಿದೆ. ಇನ್ನೂ ಶೇ.೫೦ರಷ್ಟು ಕೆಲಸಗಳಾಗಬೇಕಿದೆ.
ಬಾಗಿಲಲ್ಲಿ ಅಣಬೆ..!
ಇಲ್ಲಿ ನಿರ್ಮಿಸಲಾಗಿರುವ ಮನೆಗಳಿಗೆ ಬಾಗಿಲುಗಳನ್ನು ಅಳವಡಿಸಲಾಗಿದೆ. ಮಳೆಗಾಲದಲ್ಲಿ ಮಳೆ ನೀರು ಬಾಗಿಲಿಗೆ ರಾಚುತ್ತಿದ್ದು, ನೀರು ಮನೆಯೊಳಗಡೆ ಹರಿಯುತ್ತದೆ. ಇದನ್ನು ತಡೆಯಲು ಎಲ್ಲ ಬಾಗಿಲುಗಳಿಗೆ ಪ್ಲೆöÊವುಡ್ ಶೀಟ್‌ಗಳನ್ನು ಮೊಳೆ ಹೊಡೆದು ಜೋಡಿಸಲಾಗಿದೆ. ಬಾಗಿಲಿಗೆ ನೀರು ಬಿದ್ದುದರಿಂದ ತೇವಗೊಂಡ ಬಾಗಿಲಲ್ಲಿ ಅಣಬೆಗಳು ಹುಟ್ಟಿಕೊಂಡಿವೆ..!
ಶೌಚ ಗೃಹಕ್ಕೆ ಬಾಗಿಲಿಲ್ಲ..!
ಬಡಾವಣೆಯ ಬಹುತೇಕ ಮನೆಗಳ ಶೌಚಾಲಯಗಳಿಗೆ ಬಾಗಿಲುಗಳನ್ನು ಅಳವಡಿಸಲಾಗಿಲ್ಲ. ಇನ್ನಷ್ಟೇ ಬಾಗಿಲುಗಳನ್ನು ಅಳವಡಿಸಬೇಕಾಗಿದೆ. ಹಾಗಾಗಿ ಶೌಚ ಬೇಸಿನ್‌ಗಳಲ್ಲಿ ಕಲ್ಲು, ಮಣ್ಣು ತುಂಬಿಕೊAಡಿದ್ದು, ಕೆಲವದರಲ್ಲಿ ಕಾಡು ಗಿಡಗಳು ಹುಟ್ಟಿಕೊಂಡಿವೆ..! ಶೌಚಾಲಯ ಗುಂಡಿ ನಿರ್ಮಾಣ ಕಾರ್ಯ ಆಗುತ್ತಿದೆ.
ಪೈಪ್‌ಲೈನ್ ಆಗಿಲ್ಲ..!
ಬಡಾವಣೆಯ ಮನೆಗಳಿಗೆ ನೀರನ್ನೊದಗಿಸುವ ಸಲುವಾಗಿ ಬೃಹತ್ ಗಾತ್ರದ ನೀರಿನ ಟ್ಯಾಂಕ್‌ಗಳನ್ನು ನಿರ್ಮಿಸಲಾಗಿದೆ. ಪ್ರತಿ ಮನೆಗಳಲ್ಲೂ ಸಿಂಟೆಕ್ಸ್ಗಳನ್ನು ಇರಿಸಲಾಗಿದೆ. ಆದರೆ ಇನ್ನೂ ಕೂಡ ಮನೆಗಳಲ್ಲಿ ನಲ್ಲಿ ಹಾಗೂ ಪೈಪ್ ಅಳವಡಿಕೆ ಆಗಿಲ್ಲ. ಒಂದಿಬ್ಬರು ಮಾತ್ರ ಈ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.
ಜಗಳಕ್ಕೆ ದಾರಿ..!
ವಿಚಿತ್ರವೆಂದರೆ ಇಲ್ಲಿನ ಮನೆಗಳಿಗೆ ತೆರಳಲು ದಾರಿ ಕಲ್ಪಿಸಿರುವದು..! ದೋಣಿಯಾಕಾರದಲ್ಲಿರುವ ಪ್ರದೇಶದಲ್ಲಿ ಮನೆಗಳನ್ನು ನಿರ್ಮಿಸಿರುವದರಿಂದ ಬಹುತೇಕ ಮನೆಗಳಿಗೆ ಏರಿಳಿಯುತ್ತಾ ಸಾಗಬೇಕಿದೆ. ಆದರಿಲ್ಲಿ ಜಂಬೂರು, ಕರ್ಣಂಗೇರಿಯAತೆ ಮನೆಗಳಿಗೆ ತೆರಳಲು ಪ್ರತ್ಯೇಕ ಮೆಟ್ಟಿಲುಗಳಿಲ್ಲ. ರಸ್ತೆ ಬದಿ ಎತ್ತರವಾದ ಕಾಂಕ್ರಿಟ್ ತಡೆಗೋಡೆಯನ್ನು ನಿರ್ಮಿಸಲಾಗಿದೆ. ಮೆಟ್ಟಿಲುಗಳನ್ನು ನಿರ್ಮಿಸಿಲ್ಲ. ಬದಲಿಗೆ ಒಂದು ತುದಿಯಿಂದ ಇನ್ನೊಂದು ತುದಿಯವರೆಗೆ ಎಲ್ಲರ ಮನೆ ಎದುರು ನಡೆದು ಹೋಗಲು ಮೆಟ್ಟಿಲು ಹಾಗೂ ಇಂಟರ್‌ಲಾಕ್ ಅಳವಡಿಸಲಾಗಿದೆ. ಎತ್ತರದಲ್ಲಿರುವ ಮನೆಯ ವ್ಯಕ್ತಿ ಅನಿಲ ಸಿಲಿಂಡರ್‌ಗಳಿAದ ಹಿಡಿದು ಪ್ರತಿಯೊಂದು ಸಾಮಗ್ರಿಗಳನ್ನು ತಲೆಯ ಮೇಲೆ ಹೊತ್ತುಕೊಂಡೇ ನಡೆಯಬೇಕಿದೆ. ಒಂದು ವೇಳೆ ಅಕ್ಕ ಪಕ್ಕದ ಮನೆಯವರಿಗೆ ವೈಮನಸ್ಸು ಏನಾದರೂ ಇದ್ದಿತೆಂದರೆ ಜಗಳಕ್ಕೆ ದಾರಿಯಾಗುವದಂತೂ ದಿಟ. ಅವೈಜ್ಞಾನಿಕ ಕಾಮಗಾರಿಯಿಂದಾಗಿ ದೊಡ್ಡದೊಂದು ಸಮಸ್ಯೆ ತಲೆದೋರಲಿದೆ..!
ಕಾಯುತ್ತಿರುವ ಸಂತ್ರಸ್ತರು..!
‘ಕೂಸು ಹುಟ್ಟುವದಕ್ಕೂ ಮುನ್ನ ಕುಲಾಯಿ ಹೊಲಿಸಿದಂತೆ..’ ಎಂಬ ಮಾತಿನಂತೆ ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವ ಮುನ್ನವೇ ಬಡಾವಣೆಯ ಉದ್ಘಾಟನೆ ಮಾಡಲಾಗಿದೆ. ವಸತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವಿ.ಸೋಮಣ್ಣ ಅವರು ತಾ. ೨೩.೪.೨೦೨೧ರಂದು ಉದ್ಘಾಟನೆ ಮಾಡಿದ್ದಾರೆ. ಶಾಸಕರು, ಸಂಸದರು, ಜಿಲ್ಲೆಯ ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು. ನಂತರ ಜುಲೈ ತಿಂಗಳಲ್ಲಿ ಸಂತ್ರಸ್ತರಿಗೆ ಲಾಟರಿ ಮೂಲಕ ಮನೆಗಳನ್ನು ಹಂಚಿಕೆ ಕೂಡ ಮಾಡಲಾಗಿದೆ. ಆದರೆ, ಇದುವರೆಗೂ ಬೀಗದ ಕೀ ನೀಡಿಲ್ಲ. ಸರಿಯಾದ ಕೆಲಸವೂ ಇಲ್ಲದೆ, ಬಾಡಿಗೆ ಮನೆಗಳಲ್ಲಿ ಕಳೆಯುತ್ತಿರುವ ಸಂತ್ರಸ್ತರು ಸರಕಾರದ ಸೂರಿಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ..!