ಮುಳ್ಳೂರು/ಶನಿವಾರಸಂತೆ, ಫೆ. ೩: ಸಮೀಪದ ದುಂಡಳ್ಳಿ ಗ್ರಾ.ಪಂ. ವತಿಯಿಂದ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಬೇಜವಾಬ್ದಾರಿ ಯಿಂದ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡದೆ ಅವಮಾನ ಮಾಡಿದ್ದಾರೆಂದು ದಸಂಸ ಜಿಲ್ಲಾ ಒಕ್ಕೂಟ ಮತ್ತು ದಲಿತ ಮುಖಂಡರು ಆರೋಪಿಸಿ ಅಧಿಕಾರಿಗಳಿಂದ ಸಮಜಾಯಿಷಿಕೆ ಕೇಳಿದಾಗ ಅವರು ಸಕಾರಾತ್ಮಕ ಉತ್ತರ ದೊರೆತಿರಲಿಲ್ಲ. ಈ ಹಿನ್ನೆಲೆ ದಸಂಸ ಮುಖಂಡರು ಗ್ರಾ.ಪಂ. ಕಚೇರಿ ಎದುರು ಪ್ರಕರಣ ಖಂಡಿಸಿ ಪ್ರತಿಭಟನೆ ನಡೆಸಿದ್ದರು. ಮಂಗಳವಾರ ದುಂಡಳ್ಳಿ ಗ್ರಾ.ಪಂ. ಅಧ್ಯಕ್ಷೆ ಪೂರ್ಣಿಮಾ ಕಿರಣ್ ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಸಭಾಂಗಣದಲ್ಲಿ ದಸಂಸ ಮುಖಂಡರೊAದಿಗೆ ತುರ್ತು ಸಭೆ ನಡೆಸಲಾಯಿತು. ಸಭೆಯಲ್ಲಿ ಪಾಲ್ಗೊಂಡು ಪ್ರಕರಣ ಕುರಿತು ಮಾತನಾಡಿದ ವಿಘ್ನೇಶ್ವರ ಬಾಲಕಿಯರ ಪ್ರೌಢಶಾಲಾ ಶಿಕ್ಷಕ ಕೆ.ಪಿ. ಜಯಕುಮಾರ್, ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪೂಜಿಸಿ ಗೌರವಿಸುವಂತೆ ಸರಕಾರ ಆದೇಶ ಹೊರಡಿಸಿ ಸುತ್ತೋಲೆ ನೀಡಿದೆ ಹೀಗಿದ್ದರೂ ಗ್ರಾ.ಪಂ. ಪಿಡಿಒ ಅವರು ಬೇಜವಾಬ್ದಾರಿ ಮೆರೆದಿರುವುದು ಕೇವಲ ಅಂಬೇಡ್ಕರ್ ಅವರಿಗೆ ಅವಮಾನವಾಗಿಲ್ಲ ಸಂವಿಧಾನ ವ್ಯವಸ್ಥೆಯಲ್ಲಿರುವ ಅಧಿಕಾರಿಗಳು, ಜನಪ್ರತಿನಿಧಿಗಳಿಗೂ ಸಾರ್ವಜನಿಕರಿಗೂ ಅವಮಾನ ಮಾಡಿದಂತಾಗಿದೆ ಇದೊಂದು ನೋವಿನ ವಿಚಾರವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಭೆಯಲ್ಲಿ ಗ್ರಾ.ಪಂ. ಪಿಡಿಒ ವೇಣುಗೋಪಾಲ್ ಪ್ರಕರಣದ ಬಗ್ಗೆ ಸಮಜಾಯಿಷಿಕೆ ನೀಡಿ, ನಮ್ಮ ಸಂವಿಧಾನದ ಬಗ್ಗೆ ಇದನ್ನು ರಚಿಸಿದ ಡಾ. ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ನನಗೆ ಅಪಾರ ಗೌರವಿದೆ ನಮ್ಮ ಗ್ರಾ.ಪಂ. ವತಿಯಿಂದ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕರ್ತವ್ಯ ಒತ್ತಡದ ತರಾತುರಿಯಲ್ಲಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲು ಸಾಧ್ಯವಾಗಿರಲ್ಲಿಲ್ಲ ಯಾವುದೇ ದುರುದ್ದೇಶ ಇರಲಿಲ್ಲ. ಆದರೂ ನಮ್ಮಿಂದ ತಪ್ಪು ಆಗಿದ್ದು, ಸಾರ್ವಜನಿಕರ ಕ್ಷಮೆಯಾಚಿಸುತ್ತೇನೆ ಇನ್ನು ಮುಂದೆ ಇಂvಹ ತಪ್ಪಾಗದಂತೆ ಎಚ್ಚರವಹಿಸುತ್ತೇನೆ ಎಂದರು.

ಗ್ರಾ.ಪA. ಅಧ್ಯಕ್ಷೆ ಪೂರ್ಣಿಮ ಕಿರಣ್, ಹಿರಿಯ ಸದಸ್ಯರಾದ ಡಿ.ಬಿ. ಬೋಜಪ್ಪ, ಸಿ.ಜೆ. ಗಿರೀಶ್ ಪ್ರಕರಣದ ಬಗ್ಗೆ ಕ್ಷಮೆಯಾಚಿಸಿ ಇನ್ನು ಮುಂದೆ ಈ ರೀತಿಯ ಪ್ರಕರಣಗಳಾಗದಂತೆ ಜವಬ್ದಾರಿ ತೆಗೆದುಕೊಳ್ಳುತ್ತೇವೆ ಎಂದು ಆಶ್ವಾಸನೆ ನೀಡಿದರು. ಹಿರಿಯ ಸದಸ್ಯೆ ಎಸ್.ಪಿ. ಭಾಗ್ಯ ಮಾತನಾಡಿದರು. ಸಭೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷ ನಿತಿನ್ ಸದಸ್ಯರಾದ ಮನು, ಕಾಂತರಾಜು, ಗೋಪಿಕಾ, ಜಾನಕಿ, ಭವಾನಿ ದಸಂಸ ಒಕ್ಕೂಟದ ಜಿಲ್ಲಾ ಘಟಕದ ಕಾರ್ಯದರ್ಶಿ ವೀರೇಂದ್ರ ಪ್ರಮುಖರಾದ ಶಿವಲಿಂಗ, ಎಸ್.ಟಿ. ಮೋಹನ್, ಜಗದೀಶ್ ಮುಂತಾದವರಿದ್ದರು.