ಮಡಿಕೇರಿ, ಫೆ. ೩: ರಾಣಿಪೇಟೆಯ ಈದ್ಗಾ ಗೇಟ್ ಬಳಿ ಎಸೆದಿದ್ದ ಕಸವನ್ನು ಕಸ ಎಸೆದವರಿಂದಲೇ ಹೆಕ್ಕಿಸಲಾಯಿತು. ಈದ್ಗಾ ಗೇಟ್ ಬಳಿ ಪ್ರತಿನಿತ್ಯ ತ್ಯಾಜ್ಯ ಇರುತ್ತಿದ್ದನ್ನು ಗಮನಿಸಿದ ನಗರಸಭಾ ಸದಸ್ಯ ಮುಸ್ತಫಾ ಅವರು ಸಮೀಪದಲ್ಲಿ ಸಿಸಿ ಕ್ಯಾಮರಾ ಅಳವಡಿಸಿದ್ದು. ಕಸ ಎಸೆದವರನ್ನು ಈ ಮೂಲಕ ಗುರುತಿಸಿ ಸ್ಥಳೀಯರಾದ ಮನ್ಸೂರ್ ಹಾಗೂ ಹರೀಶ್ ಅವರುಗಳು ತ್ಯಾಜ್ಯ ಸುರಿದ ವ್ಯಕ್ತಿಯಿಂದಲೇ ತ್ಯಾಜ್ಯ ತೆರವುಗೊಳಿಸಿದರು.