ಮಡಿಕೇರಿ, ಫೆ. ೩: ಗೋಣಿಕೊಪ್ಪಲುವಿನ ಸ್ವಯಂ ಪ್ರೇರಣ ಬಳಗ ಸೇವಾ ಸಂಸ್ಥೆಯ ಮೂಲಕ ತಾ. ೯ ರಂದು ಗೋಣಿಕೊಪ್ಪಲು ಮಹಿಳಾ ಸಮಾಜದಲ್ಲಿ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿದೆ. ಈ ಶಿಬಿರದ ಸಂದರ್ಭದಲ್ಲಿ ನೇತ್ರದಾನ ಹಾಗೂ ದೇಹದಾನದ ಹೆಸರು ನೋಂದಾವಣೆ ಕಾರ್ಯವನ್ನು ಆಯೋಜಿಸಲಾಗಿದೆ.

ಅಂದು ಬೆಳಿಗ್ಗೆ ೧೦.೩೦ ರಿಂದ ೨ ಗಂಟೆಯತನಕ ಈ ಶಿಬಿರ ನಡೆಯಲಿದೆ. ಮುಂದೆ ಬರುವ ದಾನಿಗಳು ತಮ್ಮ ಆಧಾರ್ ಕಾರ್ಡ್ ಮತ್ತು ೨ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರದೊಂದಿಗೆ ಪಾಲ್ಗೊಳ್ಳಬಹುದಾಗಿದೆ.

ಹೆಚ್ಚಿನ ಮಾಹಿತಿಗೆ ೯೪೮೦೦೮೫೦೬೦. ೮೮೬೭೭೭೬೧೫೯, ೯೯೮೬೯೮೪೭೮೮ ಹಾಗೂ ೯೪೪೮೯೭೬೭೧೪ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಸ್ವಯಂ ಪ್ರೇರಣಾ ಬಳಗದ ಅಧ್ಯಕ್ಷೆ ಕೊಣಿಯಂಡ ಕಾವ್ಯ ಸಂಜು ತಿಳಿಸಿದ್ದಾರೆ.