ಸೋಮವಾರಪೇಟೆ, ಫೆ. ೩: ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಮೂಲಕ ಸೋಮವಾರಪೇಟೆ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಸಿಂಥೆಟಿಕ್ ಹಾಕಿ ಟರ್ಫ್ ಕಾಮಗಾರಿಯನ್ನು ಮುಂದಿನ ೧ ತಿಂಗಳೊಳಗೆ ಪೂರ್ಣಗೊಳಿಸಲಾಗುವುದು ಎಂದು ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಹರೀಶ್ ಭರವಸೆ ನೀಡಿದ್ದಾರೆ.
ಕಳೆದ ೨೦೧೩ರಲ್ಲಿ ಭೂಮಿಪೂಜೆ ನೆರವೇರಿದ್ದರೂ ಇಂದಿಗೂ ಪೂರ್ಣಗೊಳ್ಳದ ಸೋಮವಾರಪೇಟೆ ಸಿಂಥೆಟಿಕ್ ಹಾಕಿ ಟರ್ಫ್ ಮೈದಾನ ಕಾಮಗಾರಿಗೆ ಸಂಬAಧಿಸಿದAತೆ ಜ.೩೧ರ ‘ಶಕ್ತಿ’ಯಲ್ಲಿ ಸವಿಸ್ತಾರ ವರದಿ ಪ್ರಕಟಗೊಂಡಿದ್ದು, ಈ ಬಗ್ಗೆ ಮೈದಾನ ಮೇಲುಸ್ತುವಾರಿ ಸಮಿತಿಯ ಪದಾಧಿಕಾರಿಗಳು, ಇಲಾಖೆಯ ಮೇಲಧಿಕಾರಿಗಳ ಗಮನ ಸೆಳೆದ ಹಿನ್ನೆಲೆ ರಾಜ್ಯ ಯುವ ಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಅಭಿಯಂತರರು ಭೇಟಿ ನೀಡಿ ಮೈದಾನವನ್ನು ಪರಿಶೀಲಿಸಿದರು.
ನಂತರ ನಡೆದ ಸಭೆಯಲ್ಲಿ, ಮೈದಾನದಲ್ಲಿ ಆಗಬೇಕಿರುವ ಕಾಮಗಾರಿಗಳ ಪಟ್ಟಿ ಪಡೆದ ಸಹಾಯಕ ಕಾರ್ಯಪಾಲಕ ಅಭಿಯಂತರ ಹರೀಶ್, ಮೈದಾನದ ಪ್ರಸ್ತುತ ಸ್ಥಿತಿಗತಿ, ಆಗಬೇಕಿರುವ ಕಾಮಗಾರಿಗಳ ಬಗ್ಗೆ ನಾಳೆಯೇ ಇಲಾಖೆಯ ಅಧಿಕಾರಿಗಳಿಗೆ ವರದಿ ನೀಡಲಾಗುವುದು. ಮುಂದಿನ ೧ ತಿಂಗಳೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.
ಮೈದಾನದಲ್ಲಿ ಟರ್ಫ್ ಮ್ಯಾಟ್ ಅಳವಡಿಸಿರುವುದನ್ನು ಬಿಟ್ಟರೆ ಇತರ ಕಾಮಗಾರಿಗಳು ಅಪೂರ್ಣವಾಗಿರುವ ಬಗ್ಗೆ ಸಮಿತಿಯ ಪದಾಧಿಕಾರಿಗಳು ಮಾಹಿತಿ ಒದಗಿಸಿದರು. ಯೋಜನೆ ಅನುಷ್ಠಾನಗೊಂಡ ಸಮಯದಿಂದಲೂ ಈವರೆಗೆ ತಾವುಗಳೇ ಅಭಿಯಂತರರಾಗಿದ್ದು, ೮ ವರ್ಷ ಕಳೆದರೂ ಮೈದಾನ ಕಾಮಗಾರಿ ಪೂರ್ಣಗೊಳ್ಳದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
೪.೩೪ ಕೋಟಿ ವೆಚ್ಚದ ಯೋಜನೆ ನಿರೀಕ್ಷಿತ ಪ್ರಮಾಣದಲ್ಲಿ ಪ್ರಗತಿ ಸಾಧಿಸಿಲ್ಲ. ಆದರೂ ಗುತ್ತಿಗೆದಾರ ಕಂಪೆನಿಗೆ ೩ ಕೋಟಿಯಷ್ಟು ಹಣ ಪಾವತಿಸಲಾಗಿದೆ. ಇದರಲ್ಲಿ ಇಲಾಖೆಯ ಅಭಿಯಂತರರು ಹಾಗೂ ಅಧಿಕಾರಿಗಳ ವೈಫಲ್ಯ ಎದ್ದುಕಾಣುತ್ತಿದೆ ಎಂದು ಸಮಿತಿ ಪದಾಧಿಕಾರಿಗಳು ಆರೋಪಿಸಿದರು.
ಈವರೆಗಿನ ಕೆಲಸ ನಡೆದ ಸಂದರ್ಭ ಇಲಾಖೆಯ ಇಂಜಿನಿಯರ್ ಸ್ಥಳದಲ್ಲಿರಲಿಲ್ಲ. ಗುತ್ತಿಗೆದಾರ ಕಂಪೆನಿಯ ಅಭಿಯಂತರರೂ ಹಾಜರಿರಲಿಲ್ಲ. ಹೀಗಾಗಿ ಕಾಮಗಾರಿ ನಿರೀಕ್ಷಿತ ಮಟ್ಟದಲ್ಲಿ ನಡೆದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭ ಮಾತನಾಡಿದ ಅಭಿಯಂತರ ಹರೀಶ್, ಕಂಪೆನಿಯಿAದ ಇಂಜಿನಿಯರ್‌ರನ್ನು ನಿಯೋಜಿಸಿದ್ದು, ಕೆಲಸ ಮುಗಿಯುವವರೆಗೂ ಇಲ್ಲಿಯೇ ಇರಲಿದ್ದಾರೆ. ವಿದ್ಯುತ್ ಸಂಪರ್ಕ ಕಲ್ಪಿಸುವ ಸಂಬAಧ ಯುವ ಜನ ಸೇವಾ ಮತ್ತು ಕ್ರೀಡಾ ಇಲಾಖೆಯಿಂದಲೇ ವಿದ್ಯುತ್ ಇಲಾಖೆಗೆ ಠೇವಣಿ ಹಣ ಪಾವತಿಸಲಾಗಿದೆ. ಮೈದಾನಕ್ಕೆ ನೀರಿನ ವ್ಯವಸ್ಥೆ ಕಲ್ಪಿಸಲು ಕ್ರಮವಹಿಸಲಾಗುವುದು ಎಂದರು.
ಮೈದಾನದಲ್ಲಿ ವಾಟರ್ ಟ್ಯಾಂಕ್, ಇಂಟರ್‌ಲಾಕ್, ಗೋಲ್‌ಪೋಸ್ಟ್, ಡ್ರೆöÊನೇಜ್ ಕವರ್, ಔಟ್‌ಲೆಟ್, ಫೆನ್ಸಿಂಗ್, ವಿದ್ಯುತ್ ಸಂಪರ್ಕ, ಜೆಟ್ ಅಳವಡಿಕೆ ಕಾಮಗಾರಿ ಅಪೂರ್ಣಗೊಂಡಿದ್ದು, ತಕ್ಷಣ ಕಾಮಗಾರಿ ಪ್ರಾರಂಭಿಸದಿದ್ದರೆ, ರಾಜ್ಯ ಕ್ರೀಡಾ ಸಚಿವರನ್ನು ಭೇಟಿ ಮಾಡಿ ದೂರು ನೀಡಲಾಗುವುದು ಎಂದು ಮೈದಾನ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್ ಎಚ್ಚರಿಸಿದರು.
ಕ್ರಿಯಾಯೋಜನೆಯಲ್ಲಿ ವಿದ್ಯುತ್ ಸಂಪರ್ಕಕ್ಕೆ ಟ್ರಾನ್ಸ್ಫಾರ್ಮರ್ ಅಳವಡಿಕೆ ಹಾಗೂ ಪೈಪ್‌ಲೈನ್ ಕಾಮಗಾರಿಯನ್ನು ಸೇರಿಸದೇ ಇರುವ ಬಗ್ಗೆ ಸಮಿತಿಯ ಸಂಚಾಲಕ ಎಸ್. ಮಹೇಶ್ ಅವರು, ಇಲಾಖೆಯ ಅಭಿಯಂತರರನ್ನು ತರಾಟೆಗೆ ತೆಗೆದುಕೊಂಡರು.
ಟ್ರಾನ್ಸ್ಫಾರ್ಮರ್ ಮತ್ತು ವಿದ್ಯುತ್ ಕಂಬಗಳ ಅಳವಡಿಕೆ, ಲೈನ್ ಎಳೆಯುವ ಕಾಮಗಾರಿಗೆ ಪ್ರತ್ಯೇಕ ಕ್ರಿಯಾಯೋಜನೆ ತಯಾರಿಸಿ, ಇಲಾಖೆಯಿಂದಲೇ ಅನುದಾನ ಒದಗಿಸಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಎಇಇ ಹರೀಶ್ ತಿಳಿಸಿದರು.
ಮುಂದಿನ ೧ ತಿಂಗಳೊಳಗೆ ಕಾಮಗಾರಿ ಪೂರ್ಣಗೊಳ್ಳದಿದ್ದರೆ ಇಲಾಖೆಯ ಅಧಿಕಾರಿಗಳಿಗೆ ದಿಗ್ಬಂಧನ ಹಾಕಿ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಸಮಿತಿ ಪದಾಧಿಕಾರಿಗಳು ಎಚ್ಚರಿಸಿದರು. ಗುತ್ತಿಗೆದಾರ ಕಂಪೆನಿಗೆ ಪೂರ್ಣ ಪ್ರಮಾಣದ ಹಣ ಬಿಡುಗಡೆ ಮಾಡಿಲ್ಲ. ಕ್ರಿಯಾಯೋಜನೆಯಂತೆ ಕಾಮಗಾರಿ ಕೈಗೊಳ್ಳಲಾಗುವುದು. ಕಂಪೆನಿಯ ಗುತ್ತಿಗೆದಾರರನ್ನು ಸ್ಥಳದಲ್ಲಿ ನಿಯೋಜನೆ ಮಾಡಿದ್ದು, ಒಂದು ವಾರದೊಳಗೆ ಪ್ರಗತಿ ವರದಿ ಸಲ್ಲಿಸಲಾಗುವುದು ಎಂದು ಎಇಇ ಹರೀಶ್ ಹೇಳಿದರು.
ಸಭೆಯಲ್ಲಿ ಸಮಿತಿಯ ಪದಾಧಿಕಾರಿಗಳಾದ ಕಿಬ್ಬೆಟ್ಟ ಮಧು, ಲಕ್ಷಿö್ಮÃಕಾಂತ್, ಅಭಿಷೇಕ್ ಗೋವಿಂದಪ್ಪ, ಯತೀಶ್, ಯುವ ಜನ ಸೇವಾ ಮತ್ತು ಕ್ರೀಡಾ ಇಲಾಖೆಯ ತರಬೇತುದಾರ ವೆಂಕಟೇಶ್, ಕಾಲೇಜಿನ ಉಪನ್ಯಾಸಕಿ ತಿಲೋತ್ತಮೆ, ಕಂಪೆನಿಯ ಇಂಜಿನಿಯರ್ ನೌಫಲ್ ಉಪಸ್ಥಿತರಿದ್ದರು.