ಸೋಮವಾರಪೇಟೆ, ಫೆ. ೩: ಹುಣಸೂರಿನಿಂದ ಕೆಲಸಕ್ಕೆಂದು ಬಂದು ಪಟ್ಟಣದಲ್ಲಿ ಆಶ್ರಯವಿಲ್ಲದೇ ಅಲೆದಾಡುತ್ತಿದ್ದ ಕುಟುಂಬವೊAದನ್ನು ಓಡಿಪಿ ಮಹಿಳಾ ಸಾಂತ್ವನ ಕೇಂದ್ರದ ಸಿಬ್ಬಂದಿಗಳು ರಕ್ಷಿಸಿ, ಮರಳಿ ಊರಿಗೆ ತೆರಳಲು ನೆರವು ನೀಡಿದ್ದಾರೆ.

ಹುಣಸೂರು ತಾಲೂಕಿನ ಮಳವಲ್ಲಿ ಗ್ರಾಮದಿಂದ ಕೆಲಸ ಆರಸಿ ಬಂದಿದ್ದ ಕುಟುಂಬವೊAದು, ಇಲ್ಲಿ ಕೆಲಸ ಸಿಗದ ಹಿನ್ನೆಲೆ ಸರ್ಕಾರಿ ಬಸ್ ನಿಲ್ದಾಣದಲ್ಲಿ ಆಶ್ರಯ ಪಡೆದಿತ್ತು. ಹೊಟ್ಟೆಪಾಡಿಗೆ ಪಟ್ಟಣದಲ್ಲಿ ಅಲೆದಾಡುತ್ತಾ, ಭಿಕ್ಷಾಟನೆ ಮಾಡಿಕೊಂಡಿದ್ದ ಕುಟುಂಬವನ್ನು ಗಮನಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಓಡಿಪಿ ಮಹಿಳಾ ಸಾಂತ್ವನ ಕೇಂದ್ರದ ಸಮಾಜ ಕಾರ್ಯಕರ್ತೆಯರಾದ ಎಂ.ಎಸ್. ಶ್ವೇತ, ಪಿ.ಎಂ. ಜ್ಯೋತಿ ಅವರುಗಳು, ಕುಟುಂಬದ ಸಮಸ್ಯೆ ವಿಚಾರಿಸಿ ಮರಳಿ ಹುಣಸೂರಿಗೆ ಕಳುಹಿಸಿಕೊಟ್ಟರು.