ಮುಳ್ಳೂರು, ಫೆ. ೩: ಬದಲಾದ ಇಂದಿನ ಕಾಲಘಟ್ಟದಲ್ಲಿ ಅತ್ಯಾಚಾರ, ವರದಕ್ಷಿಣೆ, ಲೈಂಗಿಕ ಕಿರುಕುಳ ಮುಂತಾದ ಸ್ವರೂಪಗಳಲ್ಲಿ ಮಹಿಳೆ ಯರು ಸಮಸ್ಯೆಯನ್ನು ಎದುರಿಸುತ್ತಿ ರುವುದು ದುರಾದೃಷ್ಟಕರ ಎಂದು ಶನಿ ವಾರಸಂತೆ ವಿಘ್ನೇಶ್ವರ ಬಾಲಕಿಯರ ಪ್ರೌಢಶಾಲಾ ಶಿಕ್ಷಕ ಕೆ.ಪಿ. ಜಯ ಕುಮಾರ್ ವಿಷಾದÀ ವ್ಯಕ್ತಪಡಿಸಿದರು. ಕೊಡ್ಲಿಪೇಟೆ ಸಮೀಪದ ಎಣ್ಣೆಗದ್ದೆ ಗ್ರಾಮದಲ್ಲಿ ಸ್ತಿçà ಶಕ್ತಿ ಸಂಘಟನೆಗಳು, ಸ್ತಿçà ಶಕ್ತಿ ಸೋಮವಾರಪೇಟೆ ತಾಲೂಕು ಘಟಕ ಮತ್ತು ಕೊಡ್ಲಿಪೇಟೆ ಗ್ರಾ.ಪಂ. ಸಂಯುಕ್ತ ಆಶ್ರಯದಲ್ಲಿ ಮಹಿಳಾ ದೌರ್ಜನ್ಯ ಮುಕ್ತ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಮಾಹಿತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಮಹಿಳೆಯರು ಹಿಂದಿನ ಕಾಲದಲ್ಲಿ ಬಾಲ್ಯ ವಿವಾಹ, ಸತಿಸಹಗಮನ ಪದ್ಧತಿ, ಬಹುಪತ್ನಿತ್ವ, ದೇವದಾಸಿ ಪದ್ಧತಿ ಮುಂತಾದ ಸಾಮಾಜಿಕ ಮೌಢ್ಯ ಆಚರಣೆಯ ದೆಸೆಯಿಂದ ಕುಗ್ಗಿ ಹೋಗಿದ್ದರು. ಆದರೆ ಈಗ ಸಮಾಜ ಬದಲಾವಣೆ ಯಾಗಿದ್ದರೂ ಸಹ ಮಹಿಳೆಯರು ಶೋಷಣೆ ದೌರ್ಜನ್ಯಗಳನ್ನು ಎದುರಿಸುತ್ತಿರುವುದು ವಿಷಾದನೀಯ ಎಂದರು. ಮಹಿಳೆಯರ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ತಡೆಯಲು ಪ್ರತಿಯೊಬ್ಬ ಮಹಿಳೆ ವಿದ್ಯಾವಂತರಾಗುವುದರ ಜೊತೆಯಲ್ಲಿ ಮಹಿಳೆಯರ ಸುರಕ್ಷತೆಗಾಗಿ ರೂಪಿತಗೊಂಡಿರುವ ಕಾನೂನು ಕಾಯಿದೆಗಳ ಬಗ್ಗೆ ಅರಿವು ಹೊಂದುವ ಅವಶ್ಯಕತೆ ಇದೆ ಎಂದರು.
ಸ್ತಿçà ಶಕ್ತಿ ಸೋಮವಾರಪೇಟೆ ತಾಲೂಕು ಘಟಕದ ಅಧ್ಯಕ್ಷೆ ಎನ್.ಕೆ. ಸುಮತಿ ಅಧ್ಯಕ್ಷತೆ ವಹಿಸಿ ಮಾತನಾಡಿ-ಸರಕಾರ ಮಹಿಳಾ ದೌರ್ಜನ್ಯ ತಡೆಗಾಗಿ ಹಲವಾರು ಕಾಯಿದೆ ಕಾನೂನುಗಳನ್ನು ಜಾರಿಗೊಳಿಸಿದ್ದರೂ ಮಹಿಳೆಯರ ಮೇಲೆ ನಿರಂತರ ದೌರ್ಜನ್ಯ ಶೋಷಣೆಗಳಾಗುತ್ತಿದ್ದು ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರ ಮಹಿಳೆಯರಿಗಾಗಿ ಜಾರಿಗೊಂಡಿರುವ ಕಾನೂನು ಕಾಯಿದೆಗಳ ಬಗ್ಗೆ, ಗ್ರಾಮೀಣ ಪ್ರದೇಶದ ಮಹಿಳೆಯರಿ ಗಾಗಿ ಮಾಹಿತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳುತ್ತಿದೆ ಎಂದರು.
ಕಾರ್ಯಾಗಾರದಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ಗೀತ, ಸ್ತಿçà ಶಕ್ತಿ ಸಂಘದ ಉಪಾಧ್ಯಕ್ಷೆ ಯಶೋಧ, ಆಶಾ ಕಾರ್ಯಕರ್ತೆ ಕಲಾವತಿ, ಸಂಜೀವಿನಿ ಒಕ್ಕೂಟದ ವೇದ, ಅಂಗನವಾಡಿ ಶಿಕ್ಷಕಿಯರಾದ ಗುಣಮಣಿ, ಪಂಕಜ ಮುಂತಾದವರಿದ್ದರು.