ಮಡಿಕೇರಿ: ಇಲ್ಲಿನ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಸಾಂಸ್ಕೃತಿಕ, ಎನ್.ಎಸ್.ಎಸ್., ರೇಂರ‍್ಸ್, ರೆಡ್ ರಿಬ್ಬನ್, ರೆಡ್‌ಕ್ರಾಸ್ ಘಟಕಗಳ ವತಿಯಿಂದ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು.

ಧ್ವಜಾರೋಹಣ ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ. ಜವರಪ್ಪ ಡಿ.ಜೆ. ನಡೆಸಿಕೊಟ್ಟರು. ರಾಷ್ಟçಪಿತ ಮಹಾತ್ಮಾ ಗಾಂಧೀಜಿ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಸಂವಿಧಾನ ತತ್ವಗಳು, ಭಾರತ ಸಂವಿಧಾನ ವಿಶ್ವದಲ್ಲಿಯೇ ಬೃಹತ್ ಸಂವಿಧಾನ, ಅದರಲ್ಲಿರುವ ಸಮಾನತೆ, ಸ್ವಾತಂತ್ರö್ಯ, ಭ್ರಾತೃತ್ವ, ಹಕ್ಕುಗಳು ಪ್ರತಿಯೊಬ್ಬರಿಗೆ ಅತ್ಯಾವಶ್ಯಕ. ಸಂವಿಧಾನ ರಚನಾಕಾರರನ್ನು ಸ್ಮರಿಸಬೇಕೆಂದು ಪ್ರಾಂಶುಪಾಲ ಪ್ರೊ. ಜವರಪ್ಪ ತಿಳಿಸಿದರು. ಕಾರ್ಯಕ್ರಮದಲ್ಲಿ ಸಿಬ್ಬಂದಿ ವರ್ಗ, ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.ದೇವಣಗೇರಿ: ವೀರಾಜಪೇಟೆ ಸಮೀಪದ ದೇವಣಗೇರಿ ನೂರುಲ್ ಹುದಾ ಮದರಸ ಸಭಾಂಗಣದಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಅಲ್ಲಿನ ಮುಹ್‌ಯ್ಯಿದ್ದೀನ್ ಜುಮ್ಮಾ ಮಸೀದಿ ಅಧ್ಯಕ್ಷ ಪಿ.ಎಂ. ಝುಬೈರ್ ಧ್ವಜಾರೋಹಣ ನೆರವೇರಿಸಿದರು.

ಖತೀಬ್ ಅಹ್ಮದ್ ಸಖಾಫಿ ನೆಲ್ಲಿಹುದಿಕೇರಿ ಅವರು ಪ್ರಾರ್ಥನಾ ಕಾರ್ಯ ನೆರವೇರಿಸಿದರು. ವಿದೇಶಿ ಪ್ರತಿನಿಧಿ ಸ್ಥಳೀಯರೇ ಆದ ಷಂಶುದ್ದೀನ್ ಝೈನಿ ಉಪಸ್ಥಿತರಿದ್ದರು. ನೆರೆದವರಿಗೆ ಸಿಹಿ ವಿತರಿಸಲಾಯಿತು. ದೇವಣಗೇರಿಯ ಅಬ್ಬಾಸ್ ಝೈನಿ ಉಸ್ತಾದ್ ವಂದಿಸಿದರು.ಮಡಿಕೇರಿ: ಕಾಫಿ ಬೋರ್ಡ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಚೆಟ್ಟಳ್ಳಿ ಗ್ರಾ.ಪಂ. ಸದಸ್ಯ ಕಂಠಿ ಕಾರ್ಯಪ್ಪ ಹಾಗೂ ಸದಸ್ಯೆ ಪೇರಿಯನ ನಂದಿನಿ ಉದಯ ಕುಮಾರ್ ಧ್ವಜಾರೋಹಣ ನೆರವೇರಿಸಿ ದಿನದ ಮಹತ್ವವನ್ನು ತಿಳಿಸಿದರು.

ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು ಹಾಗೂ ಹಳೆಯ ವಿದ್ಯಾರ್ಥಿಗಳು ಹಾಜರಿದ್ದರು. ಶಾಲಾ ಮುಖ್ಯೋಪಾಧ್ಯಾಯ ಧನುಪ್ರಕಾಶ್ ಸ್ವಾಗತಿಸಿ, ಸಹ ಶಿಕ್ಷಕ ಟಿ.ಎನ್. ರತೀಶ್ ವಂದಿಸಿದರು. ದೈಹಿಕ ಶಿಕ್ಷಕ ದಿನಕರ ಶೆಟ್ಟಿ ಹಾಗೂ ಟಿ.ಪಿ. ಜನಿತ ಕಾರ್ಯಕ್ರಮವನ್ನು ನಿರೂಪಿಸಿದರು.ಮಡಿಕೇರಿ: ಕಾಫಿ ಬೋರ್ಡ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಚೆಟ್ಟಳ್ಳಿ ಗ್ರಾ.ಪಂ. ಸದಸ್ಯ ಕಂಠಿ ಕಾರ್ಯಪ್ಪ ಹಾಗೂ ಸದಸ್ಯೆ ಪೇರಿಯನ ನಂದಿನಿ ಉದಯ ಕುಮಾರ್ ಧ್ವಜಾರೋಹಣ ನೆರವೇರಿಸಿ ದಿನದ ಮಹತ್ವವನ್ನು ತಿಳಿಸಿದರು.

ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು ಹಾಗೂ ಹಳೆಯ ವಿದ್ಯಾರ್ಥಿಗಳು ಹಾಜರಿದ್ದರು. ಶಾಲಾ ಮುಖ್ಯೋಪಾಧ್ಯಾಯ ಧನುಪ್ರಕಾಶ್ ಸ್ವಾಗತಿಸಿ, ಸಹ ಶಿಕ್ಷಕ ಟಿ.ಎನ್. ರತೀಶ್ ವಂದಿಸಿದರು. ದೈಹಿಕ ಶಿಕ್ಷಕ ದಿನಕರ ಶೆಟ್ಟಿ ಹಾಗೂ ಟಿ.ಪಿ. ಜನಿತ ಕಾರ್ಯಕ್ರಮವನ್ನು ನಿರೂಪಿಸಿದರು.ಮಡಿಕೇರಿ: ನೇತಾಜಿ ಯುವಕ-ಯುವತಿ ಮಂಡಲದ ವತಿಯಿಂದ ತಾಳತ್ತಮನೆಯಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ ಧ್ವಜಾರೋಹಣ ನೆರವೇರಿಸಲಾಯಿತು. ಸ್ಥಳೀಯರಾದ ಪದ್ಮಪ್ಪ ಗಣರಾಜ್ಯದ ಮಹತ್ವವನ್ನು ತಿಳಿಸಿದರು.

ಈ ಸಂದರ್ಭ ನೇತಾಜಿ ಯುವಕ ಸಂಘದ ಸಲಹಾ ಸಮಿತಿ ಅಧ್ಯಕ್ಷ ಹೆಚ್.ಎ. ಚಿನ್ನಪ್ಪ ಮುಖ್ಯ ಅತಿಥಿಗಳಾಗಿ ಹಾಜರಿದ್ದರು. ಖಜಾಂಚಿ ಕೆ.ಪಿ. ಕಾರ್ಯಪ್ಪ ಕಾರ್ಯಕ್ರಮ ನಿರೂಪಿಸಿದರು. ಸಂಘದ ಅಧ್ಯಕ್ಷ ಬಿ.ಬಿ. ಸುದೀಪ್ ರೈ ಅಧ್ಯಕ್ಷತೆ ವಹಿಸಿದ್ದರು. ಯುವಕ ಮಂಡಲದ ಕಾರ್ಯಕಾರಿ ಸಮಿತಿ ಸದಸ್ಯರು ಹಾಜರಿದ್ದರು.