ಗೋಣಿಕೊಪ್ಪಲು, ಫೆ. ೧: ಅರಣ್ಯದಂಚಿನಲ್ಲಿ ವಾಸಿಸುತ್ತಿರುವ ಗಿರಿಜನರಿಗೆ ವಿವಿಧ ಇಲಾಖೆಗಳ ಸಹಕಾರ ಪಡೆದು ಮೂಲ ಸೌಕರ್ಯಗಳನ್ನು ಒದಗಿಸುವಂತೆ ಗ್ರಾಮ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.ಚೂರಿಕಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಕೆ. ಬಾಡಗ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಜೆ.ಆರ್. ಚಂದ್ರ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ನಾಣಚ್ಚಿ ಗದ್ದೆ ಹಾಡಿ, ಬಾಳೆಕೋವು, ನಾಗರಹೊಳೆ ಹಾಡಿ ಸೇರಿದಂತೆ ಇನ್ನಿತರ ಹಾಡಿಗಳಲ್ಲಿ ಹಕ್ಕುಪತ್ರ ಲಭಿಸಿದ್ದರೂ ಇನ್ನೂ ಕೂಡ ಮೂಲಭೂತ ಸೌಕರ್ಯಗಳು ಲಭಿಸಿಲ್ಲ ಎಂದು ಹಾಡಿಯ ಪ್ರಮುಖರಾದ ಜೆ.ಬಿ. ರಮೇಶ್, ಕಾಳ, ಶಿವು ಸೇರಿದಂತೆ ಇನ್ನಿತರ ಪ್ರಮುಖರು ಪ್ರಸ್ತಾಪಿಸಿದರು.
ಹಾಡಿ ನಿವಾಸಿಗಳ ಪ್ರಶ್ನೆಗೆ ಉತ್ತರಿಸಿದ ಪಂಚಾಯಿತಿ ಪಿಡಿಒ ಕಳ್ಳಿಚಂಡ ಪೂಣಚ್ಚ, ಗಿರಿಜನರ ಅಭಿವೃದ್ಧಿಗಾಗಿ ಪ್ರತ್ಯೇಕ ಇಲಾಖೆಯು ಕಾರ್ಯನಿರ್ವಹಿಸುತ್ತಿದೆ. ಅರಣ್ಯ ವಾಸಿಗಳ ಮೂಲ ಸೌಕರ್ಯಗಳನ್ನು ನೀಡಲು ಈ ಇಲಾಖೆ ಶ್ರಮಿಸುತ್ತಿದೆ. ಇಲಾಖೆಯಲ್ಲಿ ಸಾಕಷ್ಟು ಅನುದಾನವು ಲಭ್ಯವಿದೆ. ಆದರೆ ಅರಣ್ಯ ಇಲಾಖೆಯ ಸುತ್ತೋಲೆಯಿಂದ ಸೌಕರ್ಯ ಒದಗಿಸಲು ಕಷ್ಟವಾಗುತ್ತಿದೆ. ಈ ಬಗ್ಗೆ ಗ್ರಾಮ ಸಭೆಯ ನಿರ್ಣಯವನ್ನು ಇಲಾಖೆಗೆ ಕಳುಹಿಸಿ ಮೂಲ ಸೌಕರ್ಯ ನೀಡಲು ಮನವಿ ಮಾಡುವುದಾಗಿ ಭರವಸೆ ನೀಡಿದರು. ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಮಹಾತ್ಮ ಗಾಂಧಿ ರಾಷ್ಟಿçÃಯ ಉದ್ಯೋಗ ಖಾತ್ರಿ ಯೋಜನೆ ಪೂರಕವಾಗಿದೆ. ಗ್ರಾಮದ ಜನರು ಹೆಚ್ಚು ಹೆಚ್ಚಾಗಿ ಈ ಯೋಜನೆಯಲ್ಲಿ ತಮ್ಮ ಹೆಸರನ್ನು ನೋಂದಾಯಿಸುವAತೆ ಇದೆ ಸಂದರ್ಭ ಪಂಚಾಯಿತಿ ಪಿಡಿಒ ಕಳ್ಳಿಚಂಡ ಪೂಣಚ್ಚ ಕೋರಿದರು.
ಗ್ರಾಮದಲ್ಲಿ ಆರೋಗ್ಯ ಸಮಸ್ಯೆಗಳ ಬಗ್ಗೆ ಕಾನೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ದಿವೀಂದ್ರ ರಮೇಶ್ ಮಾತನಾಡಿ, ಕೊರೊನಾ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಮೂಲಕ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತರು, ಆರೋಗ್ಯ ಸಹಾಯಕರು ದಿನವಿಡೀ ಶ್ರಮಿಸಿದ್ದಾರೆ. ಇಲಾಖೆಯ ಮಾರ್ಗಸೂಚಿಯಂತೆ ಕೆಲಸ ನಿರ್ವಹಿಸಿ ಯಶಸ್ವಿಯಾಗಿದ್ದೇವೆ. ಗ್ರಾಮ ಜನರ ಸಹಕಾರ ಮುಂದೆಯೂ ಇಲಾಖೆಗೆ ಬೇಕೆಂದು ತಿಳಿಸಿದರು.
ಗ್ರಾಮದ ಪ್ರಮುಖರಾದ ಅಳಮೇಂಗಡ ಮೋಟಯ್ಯ, ಪೆಮ್ಮಣಮಾಡ ನವೀನ್, ಗುಡಿಯಂಗಡ ರಾಜ, ಪೂವಪ್ಪ ಹಾಡಿಯ ಪ್ರಮುಖರಾದ ರಮೇಶ್, ಕಾಳ, ತಿಮ್ಮ ಮತ್ತಿತರರು ಹಲವು ಗ್ರಾಮದಲ್ಲಿ ಇನ್ನೂ ಕೂಡ ಕುಡಿಯುವ ನೀರು, ವಿದ್ಯುತ್, ತಡೆಗೋಡೆ ಹಾಗೂ ರಸ್ತೆ ಕಾಮಗಾರಿ ನಡೆಸಲು ತಿಳಿಸಿದರು.
ಅನುದಾನ ಆದ್ಯತೆ ಮೇರೆ ಕಾಮಗಾರಿಯನ್ನು ಆಯ್ಕೆ ಮಾಡಿಕೊಂಡು ಕೆಲಸ ನಿರ್ವಹಿಸುವುದಾಗಿ ಪಿಡಿಒ ಕಳ್ಳಿಚಂಡ ಪೂಣಚ್ಚ ತಿಳಿಸಿದರು. ಸಭೆಯಲ್ಲಿ ಉಪಾಧ್ಯಕ್ಷರಾದ ಚೆಪ್ಪುಡೀರ ರೀಟಾ, ಸದಸ್ಯರಾದ ರಿತೇಶ್ ಬಿದ್ದಪ್ಪ, ರಾಧ, ಲಕ್ಷಿö್ಮ, ಸುಖಪ್ರಿಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಒದಗಿಸಿದರು.