ಹೊತ್ತಿ ಉರಿದ ಚಲಿಸುತ್ತಿದ್ದ ಬಸ್

ಬೆಂಗಳೂರು, ಫೆ. ೧: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ಬಿಎಂಟಿಸ್ ಬಸ್ ಅಗ್ನಿ ಅನಾಹುತಕ್ಕೀಡಾಗಿದ್ದು, ಅದೃಷ್ಟವಶಾತ್ ಪ್ರಯಾಣಿಕರು ಮತ್ತು ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಮತ್ತೊಂದು ಬಿಎಂಟಿಸಿ ಬಸ್ ನಡು ರಸ್ತೆಯಲ್ಲೇ ಹೊತ್ತಿ ಉರಿದ ಪರಿಣಾಮ ಸ್ಥಳದಲ್ಲಿ ಕೆಲಕಾಲ ಆತಂಕ ಸೃಷ್ಟಿಯಾಗಿತ್ತು. ಕನಕಪುರ ರಸ್ತೆ ಸೌತ್ ಎಂಡ್ ಸರ್ಕಲ್‌ನಲ್ಲಿ ಮಂಗಳವಾರ ಮಧ್ಯಾಹ್ನ ೧.೧೫ರ ಸುಮಾರಿಗೆ ಬಿಎಂಟಿಸಿ ಬಸ್ ಬೆಂಕಿಗೆ ಆಹುತಿಯಾಗಿದೆ. ಮೊದಲು ಇಂಜನ್‌ನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಎಚ್ಚೆತ್ತ ಡ್ರೆöÊವರ್ ಮತ್ತು ಕಂಡಕ್ಟರ್ ಪ್ರಯಾಣಿಕರನ್ನು ಕೆಳಗಿಳಿಸಿದ್ದಾರೆ. ಕ್ಷಣಾರ್ಧದಲ್ಲೇ ಬೆಂಕಿಯ ಕೆನ್ನಾಲಗೆ ಇಡೀ ಬಸ್ ಗೆ ವ್ಯಾಪಿಸಿದೆ. ಈ ಅವಘಡದ ವೇಳೆ ಬಸ್‌ನಲ್ಲಿ ಸುಮಾರು ೨೦ ಪ್ರಯಾಣಿಕರಿದ್ದರು ಎಂದು ತಿಳಿದುಬಂದಿದೆ. ಅದೃಷ್ಟವಶಾತ್ ಯಾರಿಗೂ ಯಾವುದೇ ತೊಂದರೆ ಆಗಿಲ್ಲ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಕಳೆದ ೧೦ ದಿನಗಳ ಅಂತರದಲ್ಲಿ ನಗರದಲ್ಲಿ ನಡೆದ ೨ನೇ ಬಸ್ ಅಗ್ನಿ ಅವಘಡ ಪ್ರಕರಣ ಇದಾಗಿದೆ. ಜ. ೨೧ ರಂದು ಕೆ.ಆರ್. ಮಾರುಕಟ್ಟೆಗೆ ತೆರಳುತ್ತಿದ್ದ ಬಿಎಂಟಿಸಿ ಬಸ್‌ವೊಂದು ಚಾಮರಾಜಪೇಟೆಯ ಮಕ್ಕಳಕೂಟ ಬಳಿ ನಡು ರಸ್ತೆಯಲ್ಲೇ ಹೊತ್ತಿ ಉರಿದಿತ್ತು.

ರಾಜ್ಯದಲ್ಲಿ ಕೊರೊನಾ ಇಳಿಮುಖ-ಡಾ. ಸುಧಾಕರ್

ಬೆಂಗಳೂರು, ಫೆ. ೧: ರಾಜ್ಯದಲ್ಲಿ ಮಹಾಮಾರಿ ಕೊರೊನಾ ದಿನ ಕಳೆದಂತೆ ಸ್ಥಿರವಾಗಿ ಇಳಿಮುಖದತ್ತ ಸಾಗಿದ್ದು, ಪಾಸಿಟಿವಿಟಿ ದರ ಕೂಡ ಇಳಿಕೆಯಾಗಿರುವುದು ಕಂಡು ಬಂದಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ಹೇಳಿದ್ದಾರೆ. ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ. ೧೭,೧೧ಕ್ಕೆ ಇಳಿಕೆಯಾಗಿದೆ. ಪಾಸಿಟಿವಿಟಿ ದರ ಇಳಿಕೆಯಾದರೂ ಜನರು ಮಾತ್ರ ಎಚ್ಚರಿಕೆಯಿಂದಿರುವುದನ್ನು ಮರೆಯಬಾರದು. ಕೋವಿಡ್ ಸೂಕ್ತ ನಡವಳಿಕೆಗಳನ್ನು ಅನುಸರಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ಕಳೆದ ನಾಲ್ಕು ದಿನಗಳಲ್ಲಿ ಬೆಂಗಳೂರಿನಲ್ಲಿ ಸೋಂಕು ಗರಿಷ್ಠ ಮಟ್ಟಕ್ಕೆ ಕುಸಿದಿದೆ. ಈ ಹಿಂದೆ ಪಾಸಿಟಿವಿಟಿ ಶೇ.೩೨ಕ್ಕೆ ತಲುಪಿತ್ತು. ಇದೀಗ ಶೇ. ೧೭ಕ್ಕೆ ಕುಸಿದಿದೆ. ಇತರೆ ಜಿಲ್ಲೆಗಳಲ್ಲೂ ಇದೇ ಪ್ರವೃತ್ತಿ ಕಂಡು ಬರುತ್ತಿದೆ. ಕೆಲವು ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಶೇ. ೩೫ಕ್ಕಿಂತಲೂ ಹೆಚ್ಚಾಗಿದೆ. ರಾಜ್ಯದಲ್ಲಿ ಒಟ್ಟಾರೆ ಪಾಸಿಟಿವಿಟಿ ಪ್ರಮಾಣ ಇಳಿಕೆಯಾಗಿರುವುದು ಉತ್ತಮ ಬೆಳವಣಿಗೆಯಾಗಿದೆ. ಸೋಂಕು ಇಳಿಕೆಯಾಗುತ್ತಿದೆ ಎಂದು ಹೇಳಲು ಇನ್ನೂ ೨-೩ ವಾರಗಳ ಕಾಲ ಇದೇ ರೀತಿಯ ಟ್ರೆಂಡ್ ಮುಂದುವರೆಸಬೇಕಿದೆ. ಕೆಲವು ದೇಶಗಳಲ್ಲಿ ಸೋಂಕಿನ ಪ್ರವೃತ್ತಿಗಳು ಬದಲಾಗುತ್ತಿದ್ದು, ರಾಜ್ಯದಲ್ಲಿ ಹೊಸ ರೂಪಾಂತರಿ ವೈರಸ್ ಎದುರಾಗಿದೆಯೇ ಅಥವಾ ಇರುವ ರೂಪಾಂತರಿ ವೈರಸ್ ವಿಭಿನ್ನ ರೀತಿಯಲ್ಲಿ ಹರಡುತ್ತಿದೆಯೇ ಎಂಬುದನ್ನು ಅರ್ಥಮಾಡಿ ಕೊಳ್ಳಲು ಪರಿಸ್ಥಿತಿ ಮೇಲೆ ನಿಗಾ ಇರಿಸಬೇಕಿದೆ ಎಂದು ತಿಳಿಸಿದ್ದಾರೆ. ಇದೇ ವೇಳೆ ಕೊರೊನಾ ಮೂರನೇ ಅಲೆಯಲ್ಲಿ ಸೋಂಕು ಭಾರೀ ಪ್ರಮಾಣದಲ್ಲಿ ಏರಿಕೆಯಾಗಲಿದೆ ಎಂಬ ಸುದ್ದಿಗಳನ್ನು ನಿರಾಕರಿಸಿದ್ದಾರೆ.

ಅಕ್ರಮ ಗಣಿಗಾರಿಕೆ ವೇಳೆ ದುರಂತ-ನಾಲ್ವರು ಸಾವು

ಧನ್‌ಬಾದ್, ಫೆ. ೧: ಜಾರ್ಖಂಡ್‌ನ ಧನ್‌ಬಾದ್ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ವೇಳೆ ಮೂರು ಕಲ್ಲಿದ್ದಲು ಗಣಿಗಳು ಕುಸಿದು ಬಿದ್ದ ಪರಿಣಾಮ ನಾಲ್ವರು ಸಾವನ್ನಪ್ಪಿದ್ದು, ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ನಿರ್ಸಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದುರಂತ ನಡೆದಿದ್ದು, ಈಸ್ಟರ್ನ್ ಕೋಲ್‌ಫೀಲ್ಡ್ ಲಿಮಿಟೆಡ್‌ನ ಗೋಪಿನಾಥ್‌ಪುರ ಓಪನ್ ಕಾಸ್ಟ್ ಪ್ರಾಜೆಕ್ಟ್ನಿಂದ ಕಲ್ಲಿದ್ದಲು ಕಂಪೆನಿಗಳಿAದ ನೇಮಕಗೊಂಡ ರಕ್ಷಣಾ ತಂಡ ಮೂವರು ಮಹಿಳೆಯರು ಮತ್ತು ಒಬ್ಬ ಹುಡುಗಿಯ ಮೃತದೇಹವನ್ನು ಹೊರತೆಗೆದಿದ್ದಾರೆ ಎಂದು ಧನ್‌ಬಾದ್‌ನ ಉಪವಿಭಾಗೀಯ ಮ್ಯಾಜಿಸ್ಟೆçÃಟ್ ಪ್ರೇಮ್‌ಕುಮಾರ್ ತಿವಾರಿ ಅವರು ಹೇಳಿದ್ದಾರೆ. ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸುತ್ತಿರುವ ತಿವಾರಿ, ಅವಶೇಷಗಳಡಿ ಸಿಲುಕಿರುವ ಇತರರಿಗಾಗಿ ಶೋಧ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಧನಬಾದ್‌ನ ನಿರ್ಸಾದದಲ್ಲಿರುವ ಕಲ್ಲಿದ್ದಲು ಗಣಿಯಲ್ಲಿ ಕೆಲವು ಸಾವು ನೋವುಗಳು ವರದಿಯಾಗಿವೆ. ಜಿಲ್ಲಾಡಳಿತವು ರಕ್ಷಣಾ ಮತ್ತು ಪರಿಹಾರ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ದೇವರು ಅಗಲಿದ ಆತ್ಮಗಳಿಗೆ ಶಾಂತಿ ನೀಡಲಿ ಮತ್ತು ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ. ಗಾಯಾಳುಗಳಿಗೆ ನೆರವು ನೀಡಲಾಗುವುದು ಎಂದು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರು ಟ್ವೀಟ್ ಮಾಡಿದ್ದಾರೆ.

ಹೈ ಎಂಡ್ ಬೈಕ್‌ಗಳ ಮೇಲೆ ಪೊಲೀಸರ ಕಣ್ಣು

ಕೊಚ್ಚಿ, ಫೆ. ೧: ಕಾಲೇಜು ವಿದ್ಯಾರ್ಥಿಗಳ ಅಪಘಾತ ಪ್ರಕರಣಗಳು ಏರಿಕೆ ಕಂಡ ಹಿನ್ನೆಲೆಯಲ್ಲಿ ಕೊಚ್ಚಿ ಪೊಲೀಸರು ದುಬಾರಿ ಬೆಲೆಯ ಹೈ ಎಂಡ್ ಬೈಕ್‌ಗಳನ್ನು ಹೊಂದಿರುವ ಕಾಲೇಜು ವಿದ್ಯಾರ್ಥಿಗಳ ಮೇಲೆ ಹದ್ದಿನ ಕಣ್ಣು ಇರಿಸಲು ನಿರ್ಧರಿಸಿದ್ದಾರೆ. ಇತ್ತೀಚಿಗಷ್ಟೆ ಬೈಕು ಡಿವೈಡರ್‌ಗೆ ಬಡಿದು ಇಬ್ಬರು ಇಂಜಿನಿಯರಿAಗ್ ವಿದ್ಯಾರ್ಥಿಗಳು ಸಾವನ್ನಪ್ಪಿದ್ದರು. ಅಪಘಾತಕ್ಕೆ ಕೆಲವೇ ಗಂಟೆಗೆ ಮುನ್ನ ಪೊಲೀಸರು ಅವರನ್ನು ತಡೆದು ವೇಗ ಚಾಲನೆ ಕುರಿತು ಎಚ್ಚರಿಸಿದ್ದರು ಎನ್ನುವುದು ಗಮನಾರ್ಹ. ಅದರ ಬೆನ್ನಲ್ಲೇ ಪೊಲೀಸರು ಈ ನಿರ್ಧಾರ ಕೈಗೊಂಡಿದ್ದಾರೆ. ವಿದ್ಯಾರ್ಥಿಗಳು ಅಪಘಾತದಲ್ಲಿ ಭಾಗಿಯಾದ ಪ್ರಕರಣಗಳಲ್ಲಿ ಶೇ. ೮೦ರಷ್ಟು ವಿದ್ಯಾರ್ಥಿಗಳ ಬಳಿ ದುಬಾರಿ ಬೆಲೆಯ ಹೈ ಎಂಡ್ ಬೈಕ್ ಇರುವುದು ಕಂಡುಬAದಿತ್ತು. ದುಬಾರಿ ಬೆಲೆಯ ಹೈ ಎಂಡ್ ಬೈಕು ಖರೀದಿಸುವವರು ಕಾನೂನು ಬಗ್ಗೆ ತಿಳುವಳಿಕೆ ಹೊಂದಿರುತ್ತಾರಾದರೂ ಆ ಬೈಕನ್ನು ಜವಾಬ್ದಾರಿಯುತವಾಗಿ ಹ್ಯಾಂಡಲ್ ಮಾಡುವ ತಿಳುವಳಿಕೆ ಇರುವುದಿಲ್ಲ ಎಂದಿದ್ದಾರೆ ಪೊಲೀಸರು.