
ಸೋಮವಾರಪೇಟೆ, ಜ. ೩೧: ಕಿಡ್ನಿ ಸಂಬAಧಿತ ಸಮಸ್ಯೆಗಳನ್ನು ಎದುರಿಸುತ್ತಿರುವ ರೋಗಿಗಳ ಪಾಲಿಗೆ ಸೋಮವಾರಪೇಟೆಯ ಡಯಾಲಿಸಿಸ್ ಘಟಕ ನರಕದ ಕೂಪವಾಗಿ ಪರಿಣಮಿಸಿದೆ.
ಇಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಳೆದ ೪ ವರ್ಷಗಳ ಹಿಂದೆ ಕಾರ್ಯಾರಂಭ ಮಾಡಿ ರೋಗಿಗಳಿಗೆ ಸೇವೆ ಒದಗಿಸುತ್ತಿದ್ದ ಡಯಾಲಿಸೀಸ್ ಘಟಕ, ಕಳೆದ ೫ ತಿಂಗಳಿನಿAದ ಸಮಸ್ಯೆಗಳ ಸುಳಿಗೆ ಸಿಲುಕಿ ನರಳಾಡುತ್ತಿದ್ದು, ರೋಗಿಗಳ ಪಾಲಿಗೆ ನೋವು ನೀಡುವ ಘಟಕವಾಗಿ ಮಾರ್ಪಟ್ಟಿದೆ. ಡಯಾಲಿಸಿಸ್‌ಗೆ ಒಳಗಾಗಿ ಒಂದೆರಡು ಗಂಟೆಗಳಲ್ಲಿಯೇ ದಿಢೀರಾಗಿ ಯಂತ್ರ ಸ್ಥಗಿತಗೊಳ್ಳುತ್ತಿದ್ದು, ಈ ಸಂದರ್ಭ ಕೆಲ ರೋಗಿಗಳಲ್ಲಿ ಅಧಿಕ ರಕ್ತದೊತ್ತಡ, ಅರೆಪ್ರಜ್ಞಾವಸ್ಥೆ ಕಂಡುಬರುತ್ತಿದೆ.
ಈ ಹಿಂದೆ ಇದ್ದ ಮೂರು ಘಟಕಗಳ ಪೈಕಿ ಒಂದು ಘಟಕ ಕೆಟ್ಟುನಿಂತು ವರ್ಷ ಕಳೆದಿದೆ. ಉಳಿದ ಎರಡು ಘಟಕಗಳಲ್ಲಿ ಆಗಾಗ್ಗೆ ತಾಂತ್ರಿಕ ಸಮಸ್ಯೆ ಕಂಡುಬರುತ್ತಿದ್ದು, ಇದನ್ನು ಸರಿಪಡಿಸಲು ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಈವರೆಗೆ ಸಾಧ್ಯವಾಗಿಲ್ಲ ಎಂಬುದೇ ಸೋಜಿಗ!
ಈಗ ಇರುವ ೨ ಘಟಕದಲ್ಲಿ ಆಗಾಗ್ಗೆ ತಾಂತ್ರಿಕ ಸಮಸ್ಯೆ ಉಂಟಾಗುತ್ತಿದ್ದು, ರೋಗಿಗಳು ಜೀವ ಭಯದಿಂದಲೇ ಚಿಕಿತ್ಸೆಗೆ ಒಳಪಡುವಂತಾಗಿದೆ. ತಾಂತ್ರಿಕ ಸಮಸ್ಯೆಯಿಂದಾಗಿ ಡಯಾಲಿಸಿಸ್‌ಗೆ ಒಳಗಾದ ಸಂದರ್ಭವೇ ರಕ್ತದೊತ್ತಡ ಸಮಸ್ಯೆ ಕಂಡುಬAದು, ಬದುಕುಳಿದಿದ್ದೇ ಹೆಚ್ಚು ಎಂದು ಐಗೂರಿನ ಶಶಿ ಅವರು ಅಳಲು ತೋಡಿಕೊಂಡರೆ, ಚಿಕಿತ್ಸೆಗೆ ಒಳಗಾದ ಸಂದರ್ಭ ಅರೆಪ್ರಜ್ಞಾವಸ್ಥೆಗೆ ತಲುಪಿ, ಮೈಸೂರಿಗೆ ಸಾಗಿಸಿದರಿಂದ ಜೀವ ಉಳಿದಿದೆ ಎಂದು ಕೂಡಿಗೆಯ ಚಂದ್ರಶೇಖರ್ ಪರಿಸ್ಥಿತಿಯನ್ನು ವಿವರಿಸಿದ್ದಾರೆ.
ಘಟಕದ ಸಮಸ್ಯೆಯ ಬಗ್ಗೆ ಆರೋಗ್ಯ ಇಲಾಖೆಯ ಎಲ್ಲಾ ಹಂತದ ಅಧಿಕಾರಿಗಳು, ಶಾಸಕರು, ಇತರ ಜನಪ್ರತಿನಿಧಿಗಳ ಗಮನ ಸೆಳೆದಿದ್ದರೂ ಹೆಚ್ಚಿನ ಪ್ರಯೋಜನವಾಗಿಲ್ಲ. ಇಂತಹ ವಿಷಮ ಪರಿಸ್ಥಿತಿಯಲ್ಲೂ ಜೀವ ಉಳಿಸಿಕೊಳ್ಳಲು ಹೆಣಗಾಡಬೇಕಾದ ಪರಿಸ್ಥಿತಿ ಯಾವ ಶತ್ರುವಿಗೂ ಬರಬಾರದು ಎಂದು ಸಮಸ್ಯೆ ಅನುಭವಿಸುತ್ತಿರುವ ರೋಗಿಗಳು ಪತ್ರಿಕೆಯೊಂದಿಗೆ ಅಳಲು ತೋಡಿಕೊಂಡಿದ್ದಾರೆ.
ಕಳೆದ ೩ ತಿಂಗಳವರೆಗೂ ಉತ್ತಮವಾಗಿ
(ಮೊದಲ ಪುಟದಿಂದ) ನಡೆಯುತ್ತಿದ್ದ ಡಯಾಲಿಸಿಸ್ ಘಟಕ, ನಂತರ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಈ ಬಗ್ಗೆ ವರದಿಗಳು ಪ್ರಕಟವಾದ ಬೆನ್ನಲ್ಲೇ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರು ಘಟಕದ ಸಮಸ್ಯೆಗಳತ್ತ ಗಮನಹರಿಸಿ, ಎರಡು ಯಂತ್ರಗಳನ್ನು ದುರಸ್ತಿಗೊಳಿಸುವಲ್ಲಿ ಶ್ರಮವಹಿಸಿದ್ದರು. ಇದೀಗ ಆ ಯಂತ್ರಗಳಲ್ಲೂ ತಾಂತ್ರಿಕ ದೋಷ ಕಂಡುಬರುತ್ತಿದ್ದು, ಹೊಸ ಘಟಕಗಳ ಅಳವಡಿಕೆಗೆ ಕ್ರಮವಹಿಸಲೇಬೇಕಿದೆ.
ಸೋಮವಾರಪೇಟೆಯ ಡಯಾಲಿಸಿಸ್ ಘಟಕದಲ್ಲಿ ವಾರದಲ್ಲಿ ೨೨ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು, ಇದೀಗ ತಾಂತ್ರಿಕ ಸಮಸ್ಯೆಗೆ ಒಳಗಾಗಿರುವುದರಿಂದ ರೋಗಿಗಳ ಸಂಖ್ಯೆ ಇಳಿಕೆಯಾಗಿದೆ. ಓರ್ವ ರೋಗಿಗೆ ಕನಿಷ್ಟ ೪ ಗಂಟೆಗಳ ಕಾಲ ಡಯಾಲಿಸಿಸ್ ಮಾಡಬೇಕಿದೆ. ಕೆಲವರಿಗೆ ವಾರದಲ್ಲಿ ಮೂರು ಬಾರಿ ಡಯಾಲಿಸಿಸ್ ಮಾಡಬೇಕಿದ್ದು, ಅಂತವರನ್ನು ಬೇರೆ ಆಸ್ಪತ್ರೆಗೆ ಕಳಿಸಲಾಗುತ್ತಿದೆ.
ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಡಯಾಲಿಸಿಸ್ ನಡೆದರೆ, ಖಾಸಗಿ ಆಸ್ಪತ್ರೆಗಳಲ್ಲಿ ಇದಕ್ಕೆ ಸಾವಿರಾರು ರೂಪಾಯಿ ವ್ಯಯಿಸಬೇಕಿದೆ. ಇದರಿಂದಾಗಿ ಬಡ ರೋಗಿಗಳು ಹೆಚ್ಚಿನ ಸಮಸ್ಯೆಗೆ ಸಿಲುಕುವಂತಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ವಾರದಲ್ಲಿ ೨ ಬಾರಿ ಡಯಾಲಿಸಿಸ್‌ಗೆ ಒಳಪಡುವ ರೋಗಿಗಳು ೪೮೦೦ ರೂಪಾಯಿ ನೀಡಬೇಕಿದೆ. ವಾರಕ್ಕೊಮ್ಮೆ ಇಷ್ಟು ದೊಡ್ಡಮೊತ್ತವನ್ನು ಭರಿಸಲು ಬಡ ರೋಗಿಗಳಿಗೆ ಸಾಧ್ಯವೇ? ಈ ಬಗ್ಗೆ ಆರೋಗ್ಯ ಇಲಾಖೆ ಹಾಗೂ ಜನಪ್ರತಿನಿಧಿಗಳು ಯಾಕೆ ಗಮನ ಹರಿಸುತ್ತಿಲ್ಲ ಎಂಬುದು ಸಾರ್ವಜನಿಕರ ಪ್ರಶ್ನೆ.
ಈ ಘಟಕದ ಆರ್.ಓ. ಪ್ಲಾಂಟ್‌ನಲ್ಲಿ ಆಗಾಗ್ಗೆ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದು, ‘ಅಲ್ಟಾç ಫಿಲ್ಟೆçÃಷನ್’ ಇದ್ದಕ್ಕಿದ್ದಂತೆ ಸ್ಥಗಿತಗೊಳ್ಳುತ್ತಿದೆ. ಡಯಾಲಿಸಿಸ್ ಘಟಕದ ದುರಸ್ತಿಗೆ ನುರಿತ ತಂತ್ರಜ್ಞರು ಲಭ್ಯವಾಗದ ಹಿನ್ನೆಲೆ ಸಮಸ್ಯೆ ಇಂದಿಗೂ ಜೀವಂತವಾಗಿದೆ. ಇದರಿಂದಾಗಿ ಜೀವ ಉಳಿಸಿಕೊಳ್ಳಲು ರೋಗಿಗಳು ಹೆಣಗಾಡುವಂತಾಗಿದೆ.
ಒಟ್ಟಾರೆ ಸೋಮವಾರಪೇಟೆಯ ಡಯಾಲಿಸಿಸ್ ಘಟಕದ ಅವ್ಯವಸ್ಥೆ ಬಗ್ಗೆ ಹಲವಷ್ಟು ಬಾರಿ ಜನಪ್ರತಿನಿಧಿಗಳು ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಸ್ಪಂದನೆ ದೊರೆತಿಲ್ಲ.
ಈ ಬಗ್ಗೆ ಆರೋಗ್ಯ ಇಲಾಖೆಯ ಅಧಿಕಾರಿಗಳನ್ನು ಪ್ರಶ್ನಿಸಿದರೆ ‘ಟೆಂಡರ್ ಆಗಬೇಕು-ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ-ವಾರದೊಳಗೆ ನೂತನ ಯಂತ್ರಗಳು ಬರುತ್ತದೆ’ ಎಂಬ ಸಿದ್ಧ ಉತ್ತರ ನೀಡುತ್ತಿದ್ದಾರೆ. ಇವರ ಭರವಸೆಗಳಿಗೆ ತಿಂಗಳುಗಳೇ ಕಳೆದಿದ್ದರೂ ಅಧಿಕಾರಿಗಳು ಹೇಳಿದ ‘ವಾರ’ ಮಾತ್ರ ಇನ್ನೂ ಬಂದಿಲ್ಲ! ಇನ್ನಾದರೂ ಇಚ್ಛಾಶಕ್ತಿಯೊಂದಿಗೆ ಈ ಬಗ್ಗೆ ಗಮನಹರಿಸಿ; ಬಡ ರೋಗಿಗಳ ಪಾಲಿಗೆ ‘ವೈದ್ಯೋ ನಾರಾಯಣೋ ಹರಿ’ ಎಂಬ ಮಾತಿನಂತೆ ದೇವರಾಗಬೇಕಿದೆ!
- ವಿಜಯ್ ಹಾನಗಲ್