
ಮಡಿಕೇರಿ, ಫೆ ೧. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಂ.ಪಿ.ಕೇಶವ ಕಾಮತ್ ರವರು ಜಿಲ್ಲೆಯ ೫ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತುಗಳಿಗೆ ಅಧ್ಯಕ್ಷರುಗಳನ್ನು ನೇಮಿಸಿದ್ದಾರೆ.
ಮಡಿಕೇರಿ ತಾಲೂಕು ಅಧ್ಯಕ್ಷರಾಗಿ ಅಂಬೆಕಲ್ ನವೀನ್, ಸೋಮವಾರ ಪೇಟೆ ತಾಲೂಕಿನ ಅಧ್ಯಕ್ಷರಾಗಿ ಎಸ್.ಡಿ.ವಿಜೇತ್, ವಿರಾಜಪೇಟೆ ತಾಲೂಕು ಅಧ್ಯಕ್ಷರಾಗಿ ಡಿ.ರಾಜೇಶ್ ಪದ್ಮನಾಭ, ಪೊನ್ನಂಪೇಟೆ ತಾಲೂಕು ಅಧ್ಯಕ್ಷರಾಗಿ ಕೋಳೆರ ದಯಾ ಚಂಗಪ್ಪ ಹಾಗೂ ಕುಶಾಲನಗರ ತಾಲೂಕು ಅಧ್ಯಕ್ಷರಾಗಿ ಕೆ.ಎಸ್.ಮೂರ್ತಿ ಇವರುಗಳನ್ನು ನೇಮಿಸಲಾಗಿದೆ.
ಸದ್ಯದಲ್ಲೇ ೫ ತಾಲೂಕು ಕಸಾಪ ಸಮಿತಿಗಳಿಗೆ ನೂತನ ಅಧ್ಯಕ್ಷರೊಂದಿಗೆ ಸಮಾಲೋಚಿಸಿ ಸದಸ್ಯರುಗಳನ್ನು ನೇಮಿಸಲಾಗುವುದು ಎಂದು ಕಸಾಪ ಜಿಲ್ಲಾ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


