ಕುಶಾಲನಗರ, ಫೆ. ೨: ಕುಶಾಲನಗರದಲ್ಲಿ ಐಪಿಎಲ್ ಮಾದರಿ ಕ್ರಿಕೆಟ್ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು. ಕುಶಾಲ ನಗರದ ಸಹಾರ ಕ್ಲಬ್ ಆಶ್ರಯದಲ್ಲಿ ಎಸ್‌ಎಲ್‌ಎನ್ ಸ್ಕೆ÷್ವÃರ್ ಮೈದಾನದಲ್ಲಿ ೩ ದಿನಗಳ ಕಾಲ ನಡೆಯಲಿರುವ ಕ್ರೀಡಾಕೂಟಕ್ಕೆ ಉದ್ಯಮಿ ಪುಲಿಯಂಡ ರಾಮ್ ದೇವಯ್ಯ ಮತ್ತು ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯವರ್ಧನ್ ಚಾಲನೆ ನೀಡಿದರು. ಕ್ರೀಡಾಕೂಟದಲ್ಲಿ ೮ ತಂಡಗಳು ಭಾಗಿಯಾಗಿದ್ದು ೧೦೦ ಕ್ಕೂ ಅಧಿಕ ಕ್ರೀಡಾಪಟುಗಳು ಪಾಲ್ಗೊಂಡಿದ್ದರು.
ಉದ್ಘಾಟನಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕುಡಾ ಅಧ್ಯಕ್ಷ ಎಂ.ಎA. ಚರಣ್, ಬಿಜೆಪಿ ಅಧ್ಯಕ್ಷ ಉಮಾಶಂಕರ್, ಪಪಂ ಸದಸ್ಯ ವಿ.ಎಸ್ ಆನಂದ್ ಕುಮಾರ್, ಲೋಕೋಪಯೋಗಿ ಇಲಾಖೆ ಅಭಿಯಂತರ ಸೈಜನ್ ಪೀಟರ್, ಕಾವೇರಿ ನೀರಾವರಿ ನಿಗಮ ಅಭಿಯಂತರ ಕಿರಣ್, ಕ್ಲಬ್ ಅಧ್ಯಕ್ಷ ಸುಮೇರ್ ಪಾಲ್ಗೊಂಡಿದ್ದರು.