ವೀರಾಜಪೇಟೆ, ಫೆ. ೨: ಹಿಂದೂ ಅಗ್ನಿ ದಳ ಸಂಘಟನೆಯಿAದ ಪ್ರಥಮ ವರ್ಷದ ಕಾಲ್ಚೆಂಡು ಪಂದ್ಯಾಟಗಳು ನಗರದಲ್ಲಿ ಆಯೋಜನೆಗೊಳ್ಳಲಿದೆ. ಹಿಂದೂ ಅಗ್ನಿದಳ ವೀರಾಜಪೇಟೆ ನಗರ ಸಂಘಟನೆಯ ದಶಮಾನೊತ್ಸವದ ಅಂಗವಾಗಿ ಪುರುಷರ ಹೊನಲು ಬೆಳಕಿನ ಪ್ರಥಮ ವರ್ಷದ ಟೈಗರ್ ಫೈ ಕಾಲ್ಚೆಂಡು ಪಂದ್ಯಾಟಗಳು ತಾ. ೧೯ ಮತ್ತು ೨೦ ರಂದು ನಗರದ ತಾಲೂಕು ಮೈದಾನದಲ್ಲಿ ಆಯೋಜಿಸಲಾಗುತ್ತಿದೆ.
ಪಂದ್ಯಾಟದ ಬಗ್ಗೆ ಮಾತನಾಡಿದ ಹಿಂದೂ ಅಗ್ನಿದಳ ಸಂಘಟನೆಯ ಅಧ್ಯಕ್ಷ ಸೊಮಶೇಖರ್ (ಪ್ರಸನ್ನ) ಅವರು ಸಂಘಟನೆಯು ಹಿಂದೂ ಬಾಂಧವರ ಸಮಸ್ಯೆಗಳಿಗೆ ಸ್ಪಂದಿಸಿ, ಸಾಮಾಜಿಕ ಸೇವೆಯನ್ನು ಗುರಿಯಾಗಿಸಿಕೊಂಡು ಸಮಾಜದ ಒಳಿತಿಗಾಗಿ ಶ್ರಮಿಸುತ್ತಾ ತನ್ನ ೯ ವರ್ಷಗಳನ್ನು ಪೂರೈಸಿ ದಶಮಾನೋತ್ಸವವನ್ನು ಆಚರಿಸುತ್ತಿದೆ. ಹಿಂದೂ ಬಾಂಧವರಿಗಾಗಿ ಕಾಲ್ಚೆಂಡು ಪಂದ್ಯಾಟವನ್ನು ಆಯೋಜಿಸಲಾಗುತ್ತಿದೆ ಎಂದು ಹೇಳಿದರು.
ಕ್ರೀಡಾ ಉತ್ಸವದ ಸಂಚಾಲಕ ಎನ್.ಪಿ. ದಿನೇಶ್ ನಾಯರ್ ಅವರು ಮಾತನಾಡಿ, ಪಂದ್ಯಾಟ ಸಂಪೂರ್ಣವಾಗಿ ಹಿಂದೂ ಬಾಂಧವರಿಗಾಗಿದ್ದು. ಪಂದ್ಯಾಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳು ಕಡ್ಡಾಯವಾಗಿ ಗುರುತಿನ ಚೀಟಿ ಹೊಂದಿರಬೇಕು. ಪಂದ್ಯಾಟವನ್ನು ಸಂಕ್ರಾAತಿ ದಿನದಂದ ನಡೆಸಲು ಉದ್ದೇಶವಾಗಿತ್ತು. ಕೋವಿಡ್ ಸೋಂಕು ವ್ಯಾಪಕತೆಯಿಂದಾಗಿ ಫೆಬ್ರವರಿ ತಿಂಗಳಲ್ಲಿ ಆಯೋಜನೆ ಮಾಡಲಾಗುತ್ತಿದೆ, ಪಂದ್ಯಾಟದಲ್ಲಿ ಎರಡು ಅತಿಥಿ ಆಟಗಾರರಿಗೆ ಅವಕಾಶ ಕಲ್ಪಿಸಲಾಗಿದೆ. ಪಂದ್ಯಾಟವು ರಾಜ್ಯಮಟ್ಟದಾಗಿದೆ. ತಂಡಗಳ ನೋಂದಾಣಿಗೆ ತಾ. ೧೭ ಅಂತಿಮ ದಿನವಾಗಿದೆ.
ಪಂದ್ಯಾಟದಲ್ಲಿ ವಿಜೇತ ತಂಡಗಳಿಗೆ ಆಕರ್ಷಕವಾದ ಪಾರಿತೋಷಕ ಮತ್ತು ವೈಯಕ್ತಿಕ ಬಹುಮಾನಗಳನ್ನು ನೀಡಲಾಗುತ್ತದೆ. ಆಸಕ್ತ ತಂಡಗಳು ಮತ್ತು ಹೆಚ್ಚಿನ ವಿವರಗಳಿಗಾಗಿ ಪ್ರಸನ್ನ ೯೯೦೨೩೬೭೮೨೮, ದಿನೇಶ್ ೮೭೬೨೨೭೯೩೯೭ ಮತ್ತು ಕಿಶನ್ ವಿ.ಎಸ್. ೯೯೦೦೪೦೭೭೩೧ ಸಂಪರ್ಕಿಸಬಹುದು ಎಂದು ಪಂದ್ಯಾಟದ ಮಾಹಿತಿ ನೀಡಿದ್ದಾರೆ.