ವೀರಾಜಪೇಟೆ, ಫೆ. ೧: ಕಿರು ನದಿಯ ಪಾತ್ರದಲ್ಲಿ ಅಕ್ರಮವಾಗಿ ಮರಳು ಸಂಗ್ರಹಿಸಿ ಸಾಗಾಟಕ್ಕೆ ಸಿದ್ದವಾಗಿದ್ದ ಲಾರಿ ಮತ್ತು ತೆಪ್ಪವನ್ನು ವಶಕ್ಕೆ ಪಡೆದ ಘಟನೆ ವೀರಾಜಪೇಟೆ ಸಮೀಪದ ಕೆದಮುಳ್ಳೂರು ಗ್ರಾಮದಲ್ಲಿ ನಡೆದಿದೆ.
ಮಡಿಕೇರಿ ತಾಲೂಕು ನಾಪೊಕ್ಲು ಪಾಲೂರು ನಿವಾಸಿ ಟಿಪ್ಪರ್ ಲಾರಿ ಚಾಲಕ ವಿ.ಆರ್. ದಕ್ಷಿತ್ (೨೨) ಅಕ್ರಮ ಮರಳು ಸಾಗಾಟ ಮಾಡುತಿದ್ದ ವೇಳೆಯಲ್ಲಿ ಬಂಧಿತನಾದ ವ್ಯಕ್ತಿ. ಪ್ರಕರಣದಲ್ಲಿ ಭಾಗಿಗಳಾಗಿರುವ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ.
ಮರಳು ತೆಗೆದು ಸಾಗಾಟಕ್ಕೆ ಯತ್ನಿಸುತ್ತಿದ್ದ ವೇಳೆಯಲ್ಲಿ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯ ಠಾಣಾಧಿಕಾರಿ ಸಿದ್ದಲಿಂಗ ಬಿ ಬಾಣಾಸೆ ಅವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊAದಿಗೆ ಸ್ಥಳಕ್ಕೆ ತೆರಳಿದ್ದಾರೆ. ಈ ಸಂದÀರ್ಭದಲ್ಲಿ ನದಿಯ ಪಾತ್ರದಿಂದ ಅಕ್ರಮವಾಗಿ ಮರಳು ತೆಗೆದು ಟಿಪ್ಪರ್ ಲಾರಿಯಲ್ಲಿ ತುಂಬಿಸಿಡಲಾಗಿತ್ತು ಮತ್ತು ಸಾಗಾಟಕ್ಕೆ ಸಿದ್ಧಗೊಂಡಿತ್ತು. ಪೊಲೀಸರ ಆಗಮನದಿಂದ ಸ್ಥಳದಲ್ಲಿದ್ದ ಕಾರ್ಮಿಕರು ಮತ್ತು ಇತರರು ಪರಾರಿಯಾಗಿದ್ದಾರೆ. ಲಾರಿಯಲ್ಲಿ ತುಂಬಿಸಲಾಗಿದ್ದ ಮರಳನ್ನು ಕೆಳಗಿಳಿಸಲು ಪ್ರಯತ್ನ ಮಾಡಿದ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಮಿನಿ ಟಿಪ್ಪರ್ ಲಾರಿ ಸೇರಿ ೧೦ ಸಾವಿರ ರೂ. ಮೌಲ್ಯದ ಮರಳು ಸೇರಿದಂತೆ ೨೦ ಸಾವಿರ ಮೌಲ್ಯದ ಕಬ್ಬಿಣದ ತೆಪ್ಪವನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತ ಆರೋಪಿಯ ಮೇಲೆ ಅಕ್ರಮ ಮರಳು ಸಾಗಾಟಕ್ಕೆ ಯತ್ನ ೩೭೯ ಐ.ಪಿ.ಸಿ ಮತ್ತು ಎಂ.ಎA.ಆರ್.ಡಿ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.
ವೀರಾಜಪೇಟೆ ಉಪವಿಭಾಗ ಡಿವೈಎಸ್ಪಿ ಸಿ.ಟಿ. ಜಯಕುಮಾರ್ ಅವರ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಬಿ.ಎಸ್. ಶ್ರೀಧರ್ ನಿದೆೆÃðಶನದ ಮೇರೆಗೆ ಗ್ರಾಮಾಂತರ ಪೊಲೀಸ್ ಠಾಣೆಯ ಠಾಣಾಧಿಕಾರಿ ಸಿದ್ದಲಿಂಗ ಬಿ. ಬಾಣಸೆ ಮತ್ತು ಅಪರಾಧ ವಿಭಾಗದ ಠಾಣಾಧಿಕಾರಿ ಸಿ. ಶ್ರೀಧರ್, ಸಿಬ್ಬಂದಿಗಳಾದ ರಾಮಪ್ಪ, ತೀರ್ಥಕುಮಾರ್, ಮೂರ್ತಿ ಹೆಚ್.ಎಂ. ಶ್ರೀಕಾಂತ್ ಕೆಂದೂರ ಮತ್ತು ಸಂದೀಪ್ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
-ಕಿಶೋರ್ ಕುಮಾರ್ ಶೆಟ್ಟಿ