ಮಡಿಕೇರಿ: ಗಣರಾಜ್ಯೋತ್ಸವ ಪ್ರಯುಕ್ತ ಸಂತ ಮೈಕಲರ ವಿದ್ಯಾಸಂಸ್ಥೆಯ ಸಂಚಾಲಕ ರೆ.ಫಾ. ನವೀನ್‌ಕುಮಾರ್ ಧ್ವಜಾರೋಹಣ ನೆರವೇರಿಸಿ, ಪ್ರತಿಯೊಬ್ಬ ಭಾರತೀಯನು ತನಗೆ ದೊರೆತಿರುವ ಸ್ವಾತಂತ್ರö್ಯದ ಸದ್ಬಳಕೆಯನ್ನು ಮಾಡಿ ಜಾತಿ ಧರ್ಮವನ್ನು ಮೀರಿ ಐಕ್ಯತೆಯನ್ನು ಕಾಪಾಡಿಕೊಳ್ಳಬೇಕೆಂದು ಕರೆ ನೀಡಿದರು.

ಈ ಸಂದರ್ಭ ಸಂಸ್ಥೆಯ ವಿವಿಧ ವಿಭಾಗಗಳ ಮುಖ್ಯಸ್ಥರಾದ ಗಣೇಶ್, ಜಾನ್ಸನ್, ಸಿಸ್ಟರ್ ಪ್ರತಿಮಾ ಉಪಸ್ಥಿತರಿದ್ದರು. ಈ ಸಂದರ್ಭ ಶಿಕ್ಷಕಿ ಲಿನೆಟ್ ಆಶಾ ಲೋಬೋ ದಿನದ ಮಹತ್ವದ ಕುರಿತು ಮಾತನಾಡಿದರು. ಪ್ರಾಥಮಿಕ ಶಾಲಾ ಶಿಕ್ಷಕಿ ಲತಾಂಜಲಿ ಸ್ವಾಗತಿಸಿ, ಲವಿನ ರೋಡ್ರಿಗಸ್ ವಂದಿಸಿದರು.ಗೋಣಿಕೊಪ್ಪ: ಇಲ್ಲಿನ ಕೂರ್ಗ್ ಪಬ್ಲಿಕ್ ಶಾಲೆಯಲ್ಲಿ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರವನ್ನು ಅನಾವರಣ ಮಾಡಿ ಪುಷ್ಪಾರ್ಚನೆಯೊಂದಿಗೆ ಗಣರಾಜ್ಯೋತ್ಸವದ ಶುಭ ಕಾಮನೆಗಳೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು.

ಕಾರ್ಯಕ್ರಮದ ಪ್ರಾರಂಭದಲ್ಲಿ ೯ನೇ ತರಗತಿಯ ವಿದ್ಯಾರ್ಥಿ ರೇಹಾನ್ ಬೋಪಣ್ಣ ಮಾತನಾಡಿ, ಅಖಂಡ ಭವ್ಯ ಭಾರತದ ಗಣತಂತ್ರ ದಿನದಂದು ಡಾ. ಅಂಬೇಡ್ಕರ್ ಅವರು ಸತ್ವಭರಿತ ಸಂವಿಧಾನವನ್ನು ರೂಪಿಸಿದರು. ಕಾನೂನಿನ ನಿಯಮಗಳನ್ನು ರೂಪಿಸಲು ಅನ್ಯಾಯಗಳನ್ನು ತಡೆಯಲು ಕಟ್ಟುನಿಟ್ಟಿನ ಷರತ್ತುಗಳನ್ನು ಹಾಕಿದರು. ಮೂಲಭೂತ ಕರ್ತವ್ಯಗಳು, ಸೌಕರ್ಯಗಳನ್ನು ಪಡೆಯಲು ಹೇಳಿದರು. ಸಮಾನತೆಯ ಹಕ್ಕು, ಜೀವಿಸುವ ಹಕ್ಕುಗಳನ್ನು ನೀಡಿದರು. ನಾವೆಲ್ಲರೂ ಪ್ರಜಾಪ್ರಭುತ್ವ ರಾಷ್ಟçದಲ್ಲಿ, ಸಮಾನತೆ ಕಟ್ಟಿಕೊಟ್ಟ ಸಂವಿಧಾನದಲ್ಲಿ ಲಿಖಿತ ಸಂವಿಧಾನ ಬರೆದ ಡಾ. ಅಂಬೇಡ್ಕರ್ ಅವರಿಗೆ ನಮಿಸುತ್ತ ದೇಶವನ್ನು ಏಳಿಗೆಯತ್ತ ಕೊಂಡೊಯ್ಯೋಣ ಎಂದು ಹೇಳಿದರು.

ಶಾಲಾ ಶಿಕ್ಷಕಿ ಮಿಥಿಲ್ ದೇಚಮ್ಮ ನೆರೆದ ಸಭಿಕರನ್ನು ಕುರಿತು ಭ್ರಷ್ಟಾಚಾರ, ಅನಕ್ಷರತೆ, ಅಸಮಾನತೆ ಮತ್ತು ಇತರ ಸಾಮಾಜಿಕ ತಾರತಮ್ಯದ ಗುಲಾಮರಾಗಬಾರದೆಂಬ ಸಂದೇಶ ನೀಡಿದರು. ಸೌಹಾರ್ದತೆ, ಶಾಂತಿ, ಸಹಿಷ್ಣುತೆ, ಸಮಾನತೆ ಈ ದೇಶವನ್ನು ಭದ್ರಪಡಿಸುವ ಮೌಲ್ಯಗಳನ್ನು ಜೀವನೆಲದಲ್ಲಿ ಅಳವಡಿಸಿಕೊಂಡು ನಮ್ಮ ನಮ್ಮ ಜವಾಬ್ದಾರಿಗಳನ್ನು ಅರಿತು ಕೆಲಸ ಮಾಡುವ ಮೂಲಕ ವೈಯಕ್ತಿಕವಾಗಿ ಮತ್ತು ಸಾಂಘಿಕವಾಗಿ ಪ್ರಯತ್ನಪಟ್ಟರೆ ದೇಶದ ವಿವಿಧ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಪ್ರಾಂಶುಪಾಲ ಡಾ. ಬೆನ್ನಿ ಕುರಿಯಕೋಸ್ ಅವರು ಮಾತನಾಡಿ, ಗಣರಾಜ್ಯೋತ್ಸವದ ಶುಭಾಶಯಗಳನ್ನು ತಿಳಿಸುತ್ತಾ, ಎಲ್ಲ ಮನಸ್ಸುಗಳ ಐಕ್ಯತೆ ಮತ್ತಷ್ಟು ಗಟ್ಟಿಯಾಗಲಿ, ಎಲ್ಲರಲ್ಲೂ ದೇಶವನ್ನು ಪ್ರಗತಿಯತ್ತ ಮುನ್ನಡೆಸುವ ಛಲ ವೃದ್ಧಿಯಾಗಲಿ ಎಂದರು. ಭಾರತದ ಹೆಸರು ವಿಶ್ವದೆಲ್ಲೆಡೆ ಪ್ರೀತಿಯ ಕುರುಹು ಆಗಿ, ಅದರ ವೈವಿಧ್ಯತೆಯ ಸತ್ವವು ಜಗಕೆ ಸಂದೇಶ ಸಾರಲಿ ಎಂದು ಹೇಳಿದರು. ಶಾಲಾ ಮಕ್ಕಳಿಂದ ಸುಂದರವಾದ ದೇಶಭಕ್ತಿ ಗೀತೆಗಳು ಮೂಡಿಬಂದವು.ವೀರಾಜಪೇಟೆ: ಗಣರಾಜ್ಯೋತ್ಸವದ ಅಂಗವಾಗಿ ವೀರಾಜಪೇಟೆ ಕರ್ನಾಟಕ ಸಂಘದಲ್ಲಿ ಅಧ್ಯಕ್ಷ ಮಾಳೇಟಿರ ಎಂ. ಬೆಲ್ಲು ಬೋಪಯ್ಯ ಧ್ವಜಾರೋಹಣ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಕೋವಿಡ್ ಕಾರಣದಿಂದಾಗಿ ಕಳೆದ ಎರಡು ವರ್ಷಗಳಿಂದಲು ಕನ್ನಡ ಕಾರ್ಯಕ್ರಮಗಳನ್ನು ನಡೆಸಲು ಸಾಧ್ಯವಾಗುತ್ತಿಲ್ಲ. ಸರ್ಕಾರದ ನಿಯಮವನ್ನು ಪ್ರತಿಯೊಬ್ಬರು ಪಾಲಿಸಲೆಬೇಕು. ಕೊರೊನಾ ಕಡಿಮೆಯಾದ ನಂತರ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಕನ್ನಡ ನಾಡು, ನುಡಿ, ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಕರ್ನಾಟಕ ಸಂಘ ಕನ್ನಡ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿ ಹೇಳಿದರು.

ಧ್ವಜಾರೋಹಣ ಸಂದರ್ಭ ಕರ್ನಾಟಕ ಸಂಘದ ಉಪಾಧ್ಯಕ್ಷ ಚೇನಂಡ ಗಿರೀಶ್ ಪೂಣಚ್ಚ, ಕೋಶಾಧಿಕಾರಿ ಕೆ.ಯು. ಗಣೇಶ್ ತಮ್ಮಯ್ಯ, ಆಡಳಿತ ಮಂಡಳಿ ನಿದೇಶಕರಾದ ಸಿ.ಪಿ. ಕಾವೇರಪ್ಪ, ಎಂ. ಕುಸುಮ ಸೋಮಣ್ಣ, ಸಿ.ಎಂ. ಸುರೇಶ್ ನಾಣಯ್ಯ, ಎ.ಎಂ. ಜೋಯಪ್ಪ, ಬಿ. ಗಣೇಶ್ ಬಿದ್ದಪ್ಪ ಮತ್ತಿತರರು ಇದ್ದರು.ಗಾಳಿಬೀಡು: ಗಾಳಿಬೀಡುವಿನಲ್ಲಿರುವ ಜವಾಹರ ನವೋದಯ ವಿದ್ಯಾಲಯದಲ್ಲಿ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ವಿದ್ಯಾಲಯದ ಪ್ರಾಚಾರ್ಯರಿಂದ ಧ್ವಜಾರೋಹಣ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷರಾಗಿ ಮಾತನಾಡಿದ ಪ್ರಾಚಾರ್ಯ ಪಿ.ಒ. ಪಂಕಜಾಕ್ಷನ್, ಸಂವಿಧಾನದ ಮಹತ್ವವನ್ನು ವಿವರಿಸಿದರು. ವಿದ್ಯಾಲಯದ ಹಿರಿಯ ಶಿಕ್ಷಕರು ಹಾಗೂ ಇತಿಹಾಸ ಅಧ್ಯಾಪಕರೂ ಆದ ಎಂ. ಬಾಬು ಅವರು ಭಾರತದ ಸಂವಿಧಾನದ ಶ್ರೇಷ್ಠತೆಯನ್ನು ವಿವರಿಸಿದರು. ಆನ್‌ಲೈನ್‌ನಲ್ಲಿ ವಿದ್ಯಾರ್ಥಿಗಳಿಂದ ದೇಶಭಕ್ತಿ ಗೀತೆ ಹಾಗೂ ಗಣರಾಜ್ಯೋತ್ಸವದ ವಿಶೇಷತೆಯ ಬಗ್ಗೆ ಭಾಷಣಗಳು ನೆರವೇರಿದವು.ಮಡಿಕೇರಿ: ನಗರದ ಲಿಟ್ಲ್ ಫ್ಲವರ್ ವಿದ್ಯಾಸಂಸ್ಥೆಯಲ್ಲಿ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಕಾರ್ಯಕ್ರಮದ ನಿರೂಪಣೆಯನ್ನು ಶಾಲಾ ವಿದ್ಯಾರ್ಥಿನಿ ಆಲ್ಫಿಯಾ ನಡೆಸಿಕೊಟ್ಟರು. ಕುಲದೀಪ್ ಸ್ವಾಗತ ಭಾಷಣ ಮಾಡಿದರು.

ಧ್ವಜಾರೋಹಣವನ್ನು ಶಾಲೆಯ ಆಡಳಿತ ಮಂಡಳಿ ಸದಸ್ಯ ಪ್ರಶಾಂತ್, ಶಾಲಾ ಆಡಳಿತ ಮಂಡಳಿಯ ಆಡಳಿತ ಕಾರ್ಯದರ್ಶಿ ಪ್ರೀತು ಮತ್ತು ಶಾಲಾ ಮುಖ್ಯೋಪಾಧ್ಯಾಯಿನಿ ಸುನೀತ ಪ್ರೀತು ಅವರು ನೆರವೇರಿಸಿದರು. ವಿದ್ಯಾರ್ಥಿ ಸಾನ್ವಿಕ್ ಪ್ರಾಸ್ತಾವಿಕ ಭಾಷಣ ಮಾಡಿದರು. ನಂತರ ವಿದ್ಯಾರ್ಥಿಗಳಿಂದ ದೇಶಭಕ್ತಿ ಗೀತ ಗಾಯನ ನಡೆಯಿತು. ಶಾಲಾ ಆಡಳಿತ ಮಂಡಳಿ ಸದಸ್ಯ ಪ್ರಶಾಂತ್ ಗಣರಾಜ್ಯೋತ್ಸವ ದಿನದ ಮಹತ್ವ ತಿಳಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ್ದ ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ, ಮಕ್ಕಳು ವಿದ್ಯಾವಂತರಾಗಿ ದೇಶದ ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕು ಎಂದು ಕಿವಿಮಾತು ಹೇಳಿದರು. ವಿದ್ಯಾರ್ಥಿ ಅಂಭ್ರಿನ್ ಅವರಿಂದ ದೇಶಭಕ್ತಿ ಗೀತೆಗೆ ನೃತ್ಯ ನೆರವೇರಿತು. ಮಕ್ಕಳ ದಿನಾಚರಣೆಯ ಪ್ರಯುಕ್ತ ನಡೆಸಲಾದ ಛದ್ಮವೇಷ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಎಲ್ಲರಿಗೂ ಸಿಹಿ ಹಂಚಲಾಯಿತು.ಸುAಟಿಕೊಪ್ಪ: ಗಣರಾಜ್ಯೋತ್ಸವ ಅಂಗವಾಗಿ ಜೆಸಿಐ ಸಂಸ್ಥೆ ಸುಂಟಿಕೊಪ್ಪ ಹಾಗೂ ‘ನಮ್ಮ ಸುಂಟಿಕೊಪ್ಪ’ ಬಳಗ ಮತ್ತು ವಿವಿಧ ಸಂಘ-ಸAಸ್ಥೆಗಳ ವತಿಯಿಂದ ಕೇಂದ್ರ ಸರಕಾರದ ಉಚಿತ ಇ-ಶ್ರಮ್ ಕಾರ್ಡ್ ನೋಂದಣಿ ಶಿಬಿರ ಏರ್ಪಡಿಸಲಾಗಿತ್ತು.

ಸುಂಟಿಕೊಪ್ಪ ವಾಹನ ಚಾಲಕರ ಸಂಘದ ವೇದಿಕೆಯಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮವನ್ನು ಸುಂಟಿಕೊಪ್ಪ ಠಾಣಾ ಎಎಸ್‌ಐ ಶಿವಪ್ಪ, ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಬಡವರಿಗೆ ಉಚಿತ ಇ-ಶ್ರಮ್ ಕಾರ್ಡ್ ನೋಂದಣಿ ಜೆಸಿಐ ಸಂಸ್ಥೆ ಸುಂಟಿಕೊಪ್ಪ ಮತ್ತು ಇತರ ಸಂಘಗಳು ಮಾಡುತ್ತಿರುವುದು ಸ್ವಾಗತಾರ್ಹ. ಬಡತನ ರೇಖೆಯಲ್ಲಿರುವ ಬಡವರು ಕೂಲಿ ಕಾರ್ಮಿಕರು ಕಾರ್ಮಿಕ ಸಂಘಗಳು ಇದರ ಸದುಪಯೋಗ ಪಡೆದು ನೆಮ್ಮದಿ ಜೀವನ ನಡೆಸುವಂತಾಗಲಿ ಎಂದರು. ಟೆಲಿ ಕಾನೂನು ಅಡಿಯಲ್ಲಿ ಅಂಕಿತ ಜನರಿಗೆ ಕಾನೂನು ನೆರವಿನಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಇದರಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊAಡಲ್ಲಿ ಉಚಿತ ಕಾನೂನು ನೆರವು ದೊರಕಲಿದೆ. ಇದರ ಪ್ರಯೋಜನವನ್ನು ಎಲ್ಲರು ಪಡೆದುಕೊಳ್ಳುವಂತೆ ಕರೆ ನೀಡಿದರು. ಕಾರ್ಯಕ್ರಮದಲ್ಲಿ ೧೫೦ಕ್ಕೂ ಹೆಚ್ಚು ಅಸಂಘಟಿತ ಕಾರ್ಮಿಕರಿಗೆ ಉಚಿತವಾಗಿ ಇ-ಶ್ರಮ್ ಕಾರ್ಡ್ ಮಾಡಿಕೊಡಲಾಯಿತು.

ಶಿಬಿರದಲ್ಲಿ ಸ್ವಯಂ ಸೇವಕರಾಗಿ ಆಗಮಿಸಿ ಉಚಿತವಾಗಿ ಕಾರ್ಡ್ನ್ನು ನೋಂದಾಯಿಸಿ ಕೊಟ್ಟ ಕಮಲಹಾಸನ್, ಕಾರ್ತಿಕ್, ತಿರುಮೂರ್ತಿ, ವನಜ ಅವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಜೇಸಿ ಅಧ್ಯಕ್ಷ ಬಿ.ಕೆ. ಸತೀಶ್‌ಕುಮಾರ್, ನಿಕಟಪೂರ್ವ ಅಧ್ಯಕ್ಷ ಪ್ರೀತಮ್ ಪ್ರಭಾಕರ್, ಕಾರ್ಯದರ್ಶಿ ನಿರಂಜನ್, ವಾಹನ ಚಾಲಕರ ಸಂಘದ ಉಪಾಧ್ಯಕ್ಷ ಕೃಷ್ಣಪ್ಪ, ಆಟೋ ಚಾಲಕರ ಸಂಘದ ಅಧ್ಯಕ್ಷ ಶರೀಫ್, ಪಂಚಾಯಿತಿ ಅಧ್ಯಕ್ಷೆ ಶಿವಮ್ಮ, ಪಂಚಾಯಿತಿ ಅಭಿವೃಧ್ದಿ ಅಧಿಕಾರಿ ವೇಣುಗೋಪಾಲ್, ಪಂಚಾಯಿತಿ ಸದಸ್ಯರು, ನಮ್ಮ ಸುಂಟಿಕೊಪ್ಪ ಬಳಗದ ಅಧ್ಯಕ್ಷ ಡೆನ್ನೀಸ್ ಡಿಸೋಜ, ಕಾರ್ಯದರ್ಶಿ ಕೆ.ಎಸ್. ಅನಿಲ್‌ಕುಮಾರ್, ಎಸ್.ಎಂ.ಜಿ.ಎA. ಟ್ರಸ್ಟ್ ಅಧ್ಯಕ್ಷ ಮುಖುಲ್ ಮಹೀಂದ್ರ ಇದ್ದರು.ಸುಂಟಿಕೊಪ್ಪ: ಗಣರಾಜ್ಯೋತ್ಸವ ಅಂಗವಾಗಿ ಜೆಸಿಐ ಸಂಸ್ಥೆ ಸುಂಟಿಕೊಪ್ಪ ಹಾಗೂ ‘ನಮ್ಮ ಸುಂಟಿಕೊಪ್ಪ’ ಬಳಗ ಮತ್ತು ವಿವಿಧ ಸಂಘ-ಸAಸ್ಥೆಗಳ ವತಿಯಿಂದ ಕೇಂದ್ರ ಸರಕಾರದ ಉಚಿತ ಇ-ಶ್ರಮ್ ಕಾರ್ಡ್ ನೋಂದಣಿ ಶಿಬಿರ ಏರ್ಪಡಿಸಲಾಗಿತ್ತು.

ಶಿಬಿರದಲ್ಲಿ ಸ್ವಯಂ ಸೇವಕರಾಗಿ ಆಗಮಿಸಿ ಉಚಿತವಾಗಿ ಕಾರ್ಡ್ನ್ನು ನೋಂದಾಯಿಸಿ ಕೊಟ್ಟ ಕಮಲಹಾಸನ್, ಕಾರ್ತಿಕ್, ತಿರುಮೂರ್ತಿ, ವನಜ ಅವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಜೇಸಿ ಅಧ್ಯಕ್ಷ ಬಿ.ಕೆ. ಸತೀಶ್‌ಕುಮಾರ್, ನಿಕಟಪೂರ್ವ ಅಧ್ಯಕ್ಷ ಪ್ರೀತಮ್ ಪ್ರಭಾಕರ್, ಕಾರ್ಯದರ್ಶಿ ನಿರಂಜನ್, ವಾಹನ ಚಾಲಕರ ಸಂಘದ ಉಪಾಧ್ಯಕ್ಷ ಕೃಷ್ಣಪ್ಪ, ಆಟೋ ಚಾಲಕರ ಸಂಘದ ಅಧ್ಯಕ್ಷ ಶರೀಫ್, ಪಂಚಾಯಿತಿ ಅಧ್ಯಕ್ಷೆ ಶಿವಮ್ಮ, ಪಂಚಾಯಿತಿ ಅಭಿವೃಧ್ದಿ ಅಧಿಕಾರಿ ವೇಣುಗೋಪಾಲ್, ಪಂಚಾಯಿತಿ ಸದಸ್ಯರು, ನಮ್ಮ ಸುಂಟಿಕೊಪ್ಪ ಬಳಗದ ಅಧ್ಯಕ್ಷ ಡೆನ್ನೀಸ್ ಡಿಸೋಜ, ಕಾರ್ಯದರ್ಶಿ ಕೆ.ಎಸ್. ಅನಿಲ್‌ಕುಮಾರ್, ಎಸ್.ಎಂ.ಜಿ.ಎA. ಟ್ರಸ್ಟ್ ಅಧ್ಯಕ್ಷ ಮುಖುಲ್ ಮಹೀಂದ್ರ ಇದ್ದರು.ಮಡಿಕೇರಿ: ನಗರದ ರಾಘವೇಂದ್ರ ದೇವಾಲಯದ ಬಳಿ ಇರುವ ನೇತಾಜಿ ಜಂಕ್ಷನ್‌ನಲ್ಲಿ ಭಾರತ್ ಮಾತಾ ಪೂಜನಾ ಮತ್ತು ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.

ಮೊದಲಿಗೆ ಭಾರತಮಾತಾ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಮುಖ್ಯ ಭಾಷಣಕಾರರಾಗಿ ಆಗಮಿಸಿದ ರಾಷ್ಟಿçÃಯ ಸ್ವಯಂಸೇವಕ ಸಂಘದ ಹಿರಿಯ ಸ್ವಯಂ ಸೇವಕ ಡಿ.ಹೆಚ್. ತಮ್ಮಪ್ಪ ಮಾತನಾಡಿ, ಭಾರತ ಮಾತಾ ಪೂಜನಾ, ಅದರ ಮಹತ್ವ, ಹಿನ್ನೆಲೆ ಹಾಗೂ ಭಾರತದ ವೈಭವದ ಬಗ್ಗೆ ಮಾತನಾಡಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ನಗರಸಭಾ ಸದಸ್ಯ ಕೆ.ಎಸ್. ರಮೇಶ್ ಗಣರಾಜ್ಯೋತ್ಸವದ ಹಿನ್ನೆಲೆ ಹಾಗೂ ಗಣರಾಜ್ಯೋತ್ಸವದ ಮಹತ್ವದ ಬಗ್ಗೆ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮಡಿಕೇರಿ ನಗರಸಭೆ ೬ನೇ ವಾರ್ಡ್ನ ಸ್ಥಳೀಯ ನಿವಾಸಿಗಳು, ಮಕ್ಕಳು ಭಾಗವಹಿಸಿದ್ದರು. ಇಂಪನಾ ಅವರು ದೇಶಭಕ್ತಿ ಗೀತೆಯನ್ನು ಹಾಡಿದರು. ಕಾರ್ಯಕ್ರಮದ ನಿರೂಪಣೆಯನ್ನು ವಿವೇಕ್ ನರೇನ್ ನಡೆಸಿಕೊಟ್ಟರು. ಕೊನೆಯಲ್ಲಿ ರಾಷ್ಟçಗೀತೆ ಗಾಯನದೊಂದಿಗೆ ಮುಕ್ತಾಯಗೊಂಡಿತು. ಕಾರ್ಯಕ್ರಮದ ನಂತರ ಸಿಹಿ ತಿಂಡಿ ಮತ್ತು ಪಾನೀಯವನ್ನು ವಿತರಿಸಲಾಯಿತು.ಚೆಯ್ಯಂಡಾಣೆ: ಚೆಯ್ಯಂಡಾಣೆಯ ನರಿಯಂದಡ ಕೇಂದ್ರ ಪ್ರೌಢಶಾಲೆಯಲ್ಲಿ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಧ್ವಜಾರೋಹಣವನ್ನು ಮುಖ್ಯ ಶಿಕ್ಷಕ ಮನೋಹರ್ ನಾಯಕ್ ನಿರ್ವಹಿಸಿದರು. ಈ ಸಂದರ್ಭ ಶಾಲೆಯ ಶಿಕ್ಷಕರು, ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಹಾಜರಿದ್ದರು.ಕುಶಾಲನಗರ: ಇಲ್ಲಿನ ಅರಣ್ಯ ಕಚೇರಿಯಲ್ಲಿ ಗಣರಾಜ್ಯೋತ್ಸವ ಅಂಗವಾಗಿ ವಲಯ ಅರಣ್ಯಾಧಿಕಾರಿ ಅನನ್ಯ ಕುಮಾರ್ ಧ್ವಜಾರೋಹಣ ನೆರವೇರಿಸಿದರು.