ಕಡಂಗ, ಜ. ೨೯: ಕೊಡಗು - ಕೇರಳ ಗಡಿ ಮಾಕುಟ್ಟ ಚೆಕ್ ಪೋಸ್ಟ್ನಲ್ಲಿ ಆರ್ಟಿಪಿಸಿಆರ್ ತಪಾಸಣೆ ಕಾರ್ಯವನ್ನು ಕಟ್ಟುನಿಟ್ಟಾಗಿ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಗೃಹರಕ್ಷಕ ದಳದ ಸಿಬ್ಬಂದಿ ನಿರ್ವಹಿಸುತ್ತಿದ್ದಾರೆ.
ಕೇರಳದಿಂದ ಕೊಡಗಿಗೆ ಆಗಮಿಸುತ್ತಿರುವ ಜನರು ಕಡ್ಡಾಯವಾಗಿ ಕೊರೊನಾ ಪರೀಕ್ಷೆ ಮಾಡಿಸಿ ಬಂದಲ್ಲಿ ಮಾತ್ರ ಕೊಡಗಿನ ಆಗಮನಕ್ಕೆ ಅವಕಾಶ ನೀಡಲಾಗುತ್ತಿದೆ.
ಇತ್ತೀಚಿನ ದಿನಗಳಲ್ಲಿ ಕೋವಿಡ್ ಪರೀಕ್ಷೆಯ ನಕಲಿ ರಿಪೋರ್ಟ್ ಪ್ರಕರಣಗಳು ಹೆಚ್ಚಾಗಿದ್ದು, ಇಂತಹ ಪ್ರಕರಣಗಳನ್ನು ಪತ್ತೆ ಹಚ್ಚಲು ವಿಶೇಷ ತನಿಖೆ ತಂಡ ರಚಿಸಿದ್ದು, ಈ ಬಗ್ಗೆ ನಿಗಾ ವಹಿಸಲಾಗಿದೆ ಎಂದು
ಆರೋಗ್ಯ ಇಲಾಖೆಯ ಅಧಿಕಾರಿ ಕೆಂಪರಾಜ್ ತಿಳಿಸಿದ್ದಾರೆ.
ಬೆಳಿಗ್ಗೆ ೮ರಿಂದ ಸಂಜೆ ೬ರವರೆಗೆ ಆರೋಗ್ಯ ಇಲಾಖೆಯ ಒಂದು ತಂಡ ಮತ್ತೊಂದು ತಂಡ ಸಂಜೆ ೬ ರಿಂದ ಬೆಳಿಗ್ಗೆ ೮ ಗಂಟೆವರೆಗೆ ಕಾರ್ಯನಿರ್ವಹಿಸುತ್ತಿದೆ.
ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಬೆಳಿಗ್ಗೆ ೯ ಗಂಟೆಯಿAದ ಮರುದಿನ ೯ ಗಂಟೆವರೆಗೆ ಒಂದು ತಂಡ ಮತ್ತು ಮತ್ತೊಂದು ತಂಡವು ರಾತ್ರಿ ೯ರಿಂದ ಬೆಳಿಗ್ಗೆ ೯ ಗಂಟೆವರೆಗೆ ಕೆಲಸ ಮಾಡುತ್ತಿದೆ.
-ನೌಫಲ್