ಸುಂಟಿಕೊಪ್ಪ, ಜ. ೨೭ : ಬೋಯಿಕೇರಿಯ ಇಬ್ನಿವಳವಾಡಿ ಗ್ರಾಮದಲ್ಲಿರುವ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದ ೫ನೇ ವರ್ಷದ ವಾರ್ಷಿಕ ಮಹಾಪೂಜೆ ಶೃದ್ಧಾಭಕ್ತಿಯಿಂದ ನೆರವೇರಿತು.

ಬೆಳಿಗ್ಗೆ ಸ್ವಸ್ತಿ ಪುಣ್ಯಂಕ, ವಾಚನ,ನವಕ ಕಳಸ, ಪಂಚಾಮೃತ ಅಭಿಷೇಕ ನವಕ ಕಲಬಿಷೇಕ ೧೦೮ ಕಾಯಿಗಳ ಹೋಮ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನಡೆದವು.

ಮಡಿಕೇರಿಯ ಆರ್ಚಕರಾದ ಸುಬ್ರಮಣಿ ಕುಡ್ಜ ಸತೀಫ್ ಹೆಬ್ಬಾರ್ ಕುಂಜಿಲ ಇವರುಗಳು ನಡೆಸಿಕೊಟ್ಟರು. ವಾರ್ಷಿಕ ಮಹಾಪೂಜೆಯ ಅಂಗವಾಗಿ ಮಹಾ ಮಂಗಳಾರತಿ ನೆರದಿದ್ದ ಭಕ್ತಾದಿಗಳಿಗೆ ತೀರ್ಥಪ್ರಸಾದ ಹಾಗೂ ಅನ್ನ ಸಂತರ್ಪಣೆ ನಡೆಯಿತು.

ಈ ಸಂದರ್ಭ ದೇವಾಲಯ ಸಮಿತಿ ಅಧ್ಯಕ್ಷ ಗಣೇಶ, ಪದಾಧಿಕಾರಿಗಳಾದ ಎಸ್.ಲೋಕೇಶ್, ಮಂಜು,ಸುಬ್ರಮಣಿ,ತಿಮ್ಮಪ್ಪ, ರವಿಕುಮಾರ್,ಸತೀಶ್ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.