ಕಣಿವೆ, ಜ. ೨೭: ಕಾವೇರಿ ನದಿ ದಂಡೆಯ ಗ್ರಾಮೀಣ ಪ್ರದೇಶಗಳ ರೈತಾಪಿಗಳು ಈಗಾಗಲೇ ಭತ್ತದ ಫಸಲು ಕಟಾವು ಮಾಡಿ ಭತ್ತದ ಫಸಲು ಮಾಸಲಿ (ಬಲಿಯಲಿ) ಎಂಬ ಕಾರಣಕ್ಕೆ ತಮ್ಮ ತಮ್ಮ ಮನೆ, ಹೊಲ - ಗದ್ದೆಗಳಲ್ಲಿ ಕೆಲವು ದಿನಗಳ ಕಾಲ ಗುಡ್ಡೆಗಳಾಗಿ ಒಟ್ಟಿಕೊಂಡಿದ್ದರು. ಇದೀಗ ಜಮೀನುಗಳಲ್ಲಿ ಕಣಗಳನ್ನು ನಿರ್ಮಿಸಿ ಬಿಸಿಲಲ್ಲಿ ಒಣಗಿಸಿ ಒಕ್ಕಲುತನ ಮಾಡಿದ ಭತ್ತದ ಫಸಲಿನ ಒಳಗಿನ ಕಸ ಕಡ್ಡಿ ತ್ಯಾಜ್ಯಗಳನ್ನು ಗಾಳಿಯಲ್ಲಿ ತೂರಿ ಸ್ವಚ್ಛ ಮಾಡಿದ ರಾಶಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಮನೆಗೆ ಧಾನ್ಯ ಲಕ್ಷ್ಮಿಯನ್ನು ತುಂಬಿಸಿಕೊಳ್ಳುವ ಚಿತ್ರಣ ‘ಶಕ್ತಿ’ಗೆ ಕಂಡು ಬಂತು.