ಮಡಿಕೇರಿ, ಜ. ೨೬: ಆತ್ಮ ನಿರ್ಭರ ಭಾರತ ಅಭಿಯಾನದ ಅಂಗವಾಗಿ ಪಿಎಂ, ಎಫ್ಎಂಇ (ಒಂದು ಜಿಲ್ಲೆ ಒಂದು ಉತ್ಪನ್ನ) ಯೋಜನೆಯಡಿ ಕೊಡಗು ಜಿಲ್ಲೆಗೆ ಕಾಫಿ ಬೆಳೆಯನ್ನು ಆಯ್ಕೆ ಮಾಡಲಾಗಿದ್ದು, ಅಸಂಘಟಿತ ಆಹಾರ ಸಂಸ್ಕರಣಾ ಉದ್ದಿಮೆಗಳ ಉನ್ನತೀಕರಣಕ್ಕೆ ಮತ್ತು ವಿಸ್ತರಣೆಗೆ ಅತ್ಯುತ್ತಮ ಅವಕಾಶ ಕಲ್ಪಿಸಲಾಗಿದೆ.
ಈ ಯೋಜನೆಯಡಿಯಲ್ಲಿ ಒದಗಿಸುವ ಸಾಲ ಸೌಲಭ್ಯಗಳಿಗೆ ಹಾಲಿ ಇರುವ ಶೇ.೩೫ ರಷ್ಟು ಸಹಾಯಧನಕ್ಕೆ ರಾಜ್ಯ ಸರ್ಕಾರದ ಶೇ.೧೫ ರಷ್ಟು ಹೆಚ್ಚುವರಿ ಸಹಾಯ ಧನದೊಂದಿಗೆ ಒಟ್ಟು ಸಹಾಯಧನವನ್ನು ಶೇ.೩೫ ರಿಂದ ಶೇ.೫೦ ಕ್ಕೆ (ಗರಿಷ್ಟ ಮಿತಿ ೧೦ ಲಕ್ಷ) ಹೆಚ್ಚಿಸಲಾಗಿದೆ. ಈ ಸಹಾಯಧನವು ವೈಯಕ್ತಿಕ ಉದ್ದಿಮೆದಾರರು ಹಾಗೂ ಗುಂಪುಗಳಿಗೆ (ರೈತ ಉತ್ಪಾದಕ ಗುಂಪುಗಳು, ಸ್ವ ಸಹಾಯ ಗುಂಪುಗಳು, ಒಕ್ಕೂಟಗಳು, ಸಹಕಾರಿ ಸಂಸ್ಥೆಗಳು) ಅನ್ವಯಿಸುತ್ತದೆ.
ಈ ಯೋಜನೆಯಡಿ ಈಗಾಗಲೇ ಅರ್ಜಿ ಸಲ್ಲಿಸಿರುವ ಹಾಗೂ ಸಾಲ ಮಂಜೂರಾತಿಯಾಗಿರುವ ಅರ್ಜಿದಾರರಿಗೂ ಹೆಚ್ಚುವರಿಯಾಗಿರುವ ಸಹಾಯಧನ ಅನ್ವಯಿಸುತ್ತದೆ. ಸಾಮಾನ್ಯ ಮೂಲಭೂತ ಸೌಕರ್ಯ (ಅommoಟಿ Iಟಿಜಿಡಿಚಿsಣಡಿuಛಿಣuಡಿe) ಸ್ಥಾಪನೆ ಘಟಕಕ್ಕೆ ಅನ್ವಯಿಸುವುದಿಲ್ಲ. ಆಸಕ್ತ ಫಲಾನುಭವಿಗಳು ಪೋರ್ಟಲ್ Pಒಈಒಇ ತಿebsiಣe ಟiಟಿಞ: hಣಣಠಿ://ಠಿmಜಿme.moಜಿಠಿi.gov.iಟಿ, Pಒಈಒಇ ಒIS ತಿebsiಣe ಟiಟಿಞ: hಣಣಠಿ://ಠಿmಜಿme.moಜಿಠಿi.gov.iಟಿ/mis ಮೂಲಕ ಅರ್ಜಿ ನೋಂದಾಯಿಸಬಹುದು. ಹಾಗೂ ಫಲಾನುಭವಿಗಳ ದಾಖಲೆಗಳ ಕ್ರೋಡೀಕರಣ ವಿಸ್ತೃತ ಯೋಜನಾ ವರದಿ ತಯಾರಿಕೆ ಹಾಗೂ ಇತರೆ ಮಾರ್ಗದರ್ಶನಕ್ಕಾಗಿ ಪಿಎಂ-ಎಫ್ಎAಇ ಯೋಜನೆಯ ಜಿಲ್ಲಾ ಸಂಪನ್ಮೂಲ ವ್ಯಕ್ತಿ ಕೆ.ಜಿ. ನಿರಜಾ ದೂ. ೮೮೬೧೪೨೨೫೪೦ ಹಾಗೂ ಪುಟ್ಟಸ್ವಾಮಿ ಹೆಚ್.ಆರ್. ದೂ. ೯೯೬೪೭೯೯೧೮ ಇವರನ್ನು ಸಂಪರ್ಕಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕಿ ಶಬಾನಾ ಎಂ. ಶೇಖ್ ಕೋರಿದ್ದಾರೆ.