ಮುಳ್ಳೂರು, ಜ. ೨೬: ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಗೌಡಳ್ಳಿ ಗ್ರಾಮ ಪಂಚಾಯಿತಿ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಗೌಡಳ್ಳಿ ಗ್ರಾ.ಪಂ. ವ್ಯಾಪ್ತಿಯ ಶುಂಠಿ ಗ್ರಾಮದಲ್ಲಿ ‘ಮಹಿಳಾ ದೌರ್ಜನ್ಯ ಮುಕ್ತಿ’ ದಿನ ಆಚರಿಸಲಾಯಿತು.
ದಿನದ ಮಹತ್ವ ಕುರಿತು ಶನಿವಾರಸಂತೆ ವಿಘ್ನೇಶ್ವರ ಬಾಲಕಿಯರ ಪ.ಪೂ. ಕಾಲೇಜಿನ ಶಿಕ್ಷಕ ಕೆ.ಪಿ. ಜಯಕುಮಾರ್ ಮಾತನಾಡಿ, ಮಹಿಳೆಯರು ಹಿಂದಿನಿAದಲೂ ಅವಮಾನ, ಸಮಾಜದಲ್ಲಿ ಹಲವಾರು ಕಟ್ಟುಪಾಡು, ಅಸಮಾನತೆ, ವರದಕ್ಷಿಣೆ ಪಿಡುಗು, ಮುಂತಾದ ದೌರ್ಜನ್ಯಗಳನ್ನು ಅನುಭವಿಸುತ್ತಿದ್ದರು. ಬದಲಾದ ಕಾಲ ಘಟ್ಟದಲ್ಲಿ ಮಹಿಳೆಯರು ವಿದ್ಯಾವಂತರಾಗುತ್ತಿದ್ದು ಪ್ರತಿಯೊಂದು ಕ್ಷೇತ್ರದಲ್ಲಿ ಸಾಧನೆ ಮಾಡುತಿದ್ದಾರೆ. ಪುರುಷನಿಗೆ ಸರಿ ಸಮಾನರಾಗಿದ್ದರೂ ಕೆಲವು ಕಡೆಗಳಲ್ಲಿ ಮಹಿಳೆಯರ ಮೇಲೆ ಶೋಷಣೆ, ಅತ್ಯಾಚಾರ, ದೌರ್ಜನ್ಯಗಳಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಇಂದು ಮಹಿಳೆಯರಿಗಾಗಿ ಕಾನೂನಿನಲ್ಲಿ ಮಹಿಳಾ ದೌರ್ಜನ್ಯ ತಡೆ, ವರದಕ್ಷಿಣೆ ತಡೆ, ಆಸ್ತಿ ಹಕ್ಕು, ಮುಂತಾದ ಕಾಯಿದೆಗಳು ಜಾರಿಗೊಂಡಿದ್ದು ಈ ಮೂಲಕ ಮಹಿಳೆಯರು ಮಹಿಳೆಯರ ಪರವಾಗಿರುವ ಕಾಯಿದೆ ನಿಯಮಗಳ ಬಗ್ಗೆ ತಿಳಿದುಕೊಂಡು ಜಾಗೃತಿ ಹೊಂದುವAತೆ ಸಲಹೆ ನೀಡಿದರು.
ವಕೀಲ ಜೀವನ್ ಮಹಿಳೆಯರಿಗೆ ಕಾನೂನು ನೆರವು, ಮಹಿಳಾ ದೌರ್ಜನ್ಯ, ಉಚಿತ ಕಾನೂನು ವ್ಯವಸ್ಥೆ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಗೌಡಳ್ಳಿ ಗ್ರಾ.ಪಂ.ಉಪಾಧ್ಯಕ್ಷೆ ರೋಹಿಣಿ ಅಧ್ಯಕ್ಷತೆ ವಹಿಸಿದರು. ವೇದಿಕೆಯಲ್ಲಿ ಶಾಲಾ ಶಿಕ್ಷಕ ದಯಾನಂದ್, ಶುಂಠಿ ಗ್ರಾಮದ ಪೂಜಾ ಯುವತಿ ಮಂಡಳಿ ಅಧ್ಯಕ್ಷೆ ಲತಾ ಬಸವರಾಜ್, ಸದಸ್ಯರಾದ ಅಕ್ಷತಾ, ಸರೋಜ, ಕೆ.ಕೆ.ವಿನಯ, ಗಾಯತ್ರಿ ಹಾಜರಿದ್ದರು. ಕಾರ್ಯಕ್ರಮದಲ್ಲಿ ಗ್ರಾ.ಪಂ.ವ್ಯಾಪ್ತಿಯ ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಮಹಿಳಾ ಸಂಘ, ಸ್ತಿçÃಶಕ್ತಿ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.