ಗೋಣಿಕೊಪ್ಪ ವರದಿ, ಜ. ೨೬: ಆರಾಟ್ ಆಚರಣೆ ಮೂಲಕ ಕೇರಳದ ಬೈತೂರು ಉತ್ಸವ ಬುಧವಾರ ಸಂಪನ್ನ ಗೊಂಡಿತು. ಉತ್ಸವ ಮೂರ್ತಿಯನ್ನು ಹೊರ ತಂದು ದೇವರ ಮಹಾಚೈತನ್ಯ ವನ್ನು ಭಕ್ತರು ಮತ್ತು ಜೀವಸಂಕುಲ ಗಳಿಗೆ ತುಂಬುವ ಆಚರಣೆ ಮಾಡಲಾಯಿತು. ಮಾನವನ ಮನಸ್ಸಿನಲ್ಲಿ ತುಂಬಿರುವ ರಾಕ್ಷಸಿಯ ಗುಣ ನಾಶಗೊಂಡು ಧಾರ್ಮಿಕ ಚಿಂತನೆ, ಪರಸ್ಪರ ಪ್ರೀತಿ, ಭಕ್ತಿ ತುಂಬಿಸಲು ಕಿರಾತಮೂರ್ತಿ ಮೆರವಣಿಗೆ ನಡೆಯಿತು. ಪನಂದೂಟ ದಲ್ಲಿ ಕೊಡಗಿನ ಭಕ್ತರು ದೇವರ ಆಯುಧಗಳನ್ನು ಪೂಜೆ ಮಾಡಿಸಿದರು.

ತಾ. ೨೨ ರಂದು ಸಾಂಪ್ರದಾಯಿಕವಾಗಿ ಅಕ್ಕಿ ಅಳೆಯುವ ಶಾಸ್ತçದ ಮೂಲಕ ಚಾಲನೆ ನೀಡಲಾಗಿತ್ತು. ಎತ್ತ್ ಪೋರಾಟ, ದುಡಿಕೊಟ್ಟ್ ಪಾಟ್, ತಕ್ಕನ ಕುಟುಂಬದ ಪೂಜೆ, ಪತ್ತೂಟ, ನೈಯಭಿಷೇಕ, ಆರಾಟ್ ನಮ್ಮೆ ಬೈತೂರು ಕ್ಷೇತ್ರದ ಕೊಡಗು ಜಿಲ್ಲೆಯ ತಕ್ಕ ಪುಗ್ಗೇರ ಪೊನ್ನಪ್ಪ ಮುಂದಾಳತ್ವದಲ್ಲಿ ಆಚರಣೆ ನಡೆಯಿತು.