ಶನಿವಾರಸಂತೆ, ಜ. ೨೬: ಸಮೀಪದ ದುಂಡಳ್ಳಿ ಗ್ರಾ.ಪಂ. ವ್ಯಾಪ್ತಿಯ ಕೂಜಗೇರಿ, ಮಾದ್ರೆ, ಎಡೆಹಳ್ಳಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಳೆದ ೧೦ ದಿನಗಳಿಂದ ಬೀಡುಬಿಟ್ಟಿರುವ ಕಾಡಾನೆಗಳ ಹಿಂಡು ರಾತ್ರಿ ವೇಳೆ ತೋಟಗಳಿಗೆ ನುಗ್ಗಿ ದಾಂಧಲೆ ಎಬ್ಬಿಸಿ ಬಾಳೆ, ತೆಂಗು, ಕಾಫಿ, ತರಕಾರಿ ಬೆಳೆ ನಾಶಪಡಿಸುತ್ತಿವೆ ಎಂದು ರೈತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಭಯಬೀತರಾಗಿದ್ದಾರೆ.

೧ ಮರಿಯಾನೆಯೊಂದಿಗೆ ೫ ದೊಡ್ಡಾನೆಗಳು ಹಿಂಡಿನಲ್ಲಿರುವುದ ರಿಂದ ಕಾಫಿ ಕೊಯ್ಲಿನ ಸಮಯವಾ ಗಿದ್ದರೂ ಬೆಳೆಗಾರರು ಹಾಗೂ ಕೂಲಿ ಕಾರ್ಮಿಕರು ಭಯದಿಂದ ತೋಟ ಗಳತ್ತ ಸುಳಿಯುತ್ತಿಲ್ಲ. ಗ್ರಾಮಸ್ಥರು ಪಟ್ಟಣದ ಕಡೆ ಬರುತ್ತಿಲ್ಲ. ಶನಿವಾರ ಸಂತೆ ವಲಯ ಅರಣ್ಯ ಇಲಾಖೆಯ ವರು ರಾತ್ರಿ ವೇಳೆ ಕಾಡಾನೆ ಗಳನ್ನು ಕಾಡಿಗಟ್ಟಲು ಪ್ರಯತ್ನಿಸುತ್ತಿದ್ದಾರೆ. ಗ್ರಾಮಗಳ ಕೆಲವು ತೋಟ ಮಾಲೀಕರೂ ಆನೆಗಳು ಗ್ರಾಮ ಪ್ರವೇಶಿಸದಂತೆ ತಡೆಯಲು ಪ್ರಯತ್ನಪಡುತ್ತಿದ್ದಾರೆ.

ಗಡಿಭಾಗ ಯಸಳೂರು ಮೀಸಲು ಅರಣ್ಯದಿಂದ ಕಾಡಾನೆಗಳು ಬರುತ್ತಿದ್ದು, ಕೊಡಗು-ಹಾಸನ ಜಿಲ್ಲೆಗಳ ಗಡಿಭಾಗವಾಗಿರುವುದರಿಂದ ಎರಡೂ ಜಿಲ್ಲೆಗಳ ಅರಣ್ಯ ಇಲಾಖೆಯವರು ಅತ್ತಿಂದಿತ್ತ-ಇತ್ತಿAದತ್ತ ಓಡಾಡಿಸುತ್ತಿದ್ದು, ರೈತರ ನಿದ್ದೆಗೆಡುವಂತಾಗಿದೆ ಎಂದು ರೈತರಾದ ಕೆ.ಟಿ. ಹರೀಶ್, ಎಂ.ಡಿ. ಹೇಮಂತ್, ಎಂ.ಕೆ. ತೇಜ್, ಲೋಕೇಶ್, ರುದ್ರೇಗೌಡ, ಸುಮಂತ್, ಎಂ.ಕೆ. ನಾಗರಾಜ್, ಎಂ.ಎA. ವಿಶ್ವನಾಥ್, ಎಂ.ಸಿ. ಪ್ರಸಾದ್ ಅಳಲು ತೋಡಿಕೊಂಡಿದ್ದಾರೆ.

ಶನಿವಾರಸAತೆ ವಲಯ ಅರಣ್ಯಾಧಿಕಾರಿ ಪ್ರಫುಲ್ ಶೆಟ್ಟಿ ಅವರು ಪ್ರತಿಕ್ರಿಯಿಸಿ, ಕಾಡಾನೆಗಳನ್ನು ಕಾಡಿಗಟ್ಟಲು ಇಲಾಖೆ ವತಿಯಿಂದ ನಿರಂತರ ಪ್ರಯತ್ನ ನಡೆದಿದೆ. ಅಗತ್ಯ ಕ್ರಮಗಳನ್ನೂ ಕೈಗೊಂಡಿದ್ದೇವೆ. ರೈತರು ಬೆಳೆ ನಾಶ ಪರಿಹಾರಕ್ಕಾಗಿ ಅರ್ಜಿ ಗಳನ್ನು ಕೊಟ್ಟಿದ್ದು, ಅದಕ್ಕೂ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.