ಮಡಿಕೇರಿ, ಜ. ೨೬: ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಗಣರಾಜ್ಯೋತ್ಸವದ ಅಂಗವಾಗಿ ಜಿಲ್ಲಾ ಕ್ರೀಡಾಂಗಣದ ಸಮೀಪವಿರುವ ಮಂದ್‌ನಲ್ಲಿ ಸಮಾಲೋಚನಾ ಸಭೆ ನಡೆಯಿತು. ಸಿಎನ್‌ಸಿ ಅಧ್ಯಕ್ಷ ಎನ್.ಯು. ನಾಚಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೊಡವರನ್ನು ಒಳಗೊಳ್ಳಲಿರುವ ಪರಿಪೂರ್ಣ ಗಣರಾಜ್ಯಕ್ಕಾಗಿ ಸಿಎನ್‌ಸಿ ಮುಂದಿಟ್ಟಿರುವ ಬೇಡಿಕೆಗಳಿಗೆ ಮನ್ನಣೆ ಸಿಗಬೇಕೆಂದು ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ರಾಷ್ಟçಪತಿ ಹಾಗೂ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಸಭೆಯಲ್ಲಿ ಅಜ್ಜಿನಿಕಂಡ ಇನಿತ ಮಾಚಯ್ಯ, ಕಲಿಯಂಡ ಮೀನಾ ಪ್ರಕಾಶ್, ಪಟ್ಟಮಾಡ ಲಲಿತ ಗಣಪತಿ, ಅರೆಯಡ ಸವಿತ, ಪುಲ್ಲೇರ ಸ್ವಾತಿ ಕಾಳಪ್ಪ, ಮಣವಟ್ಟಿರ ರಮ್ಯ ಚಿಣ್ಣಪ್ಪ, ಮುಕ್ಕಾಟಿರ ರೋಜಿ ಗಣಪತಿ, ಕಂಗAಡ ಶಶಿ, ಬೊಟ್ಟಂಗಡ ಸವಿತ ಮತ್ತು ಕಲಿಯಂಡ ಪ್ರಕಾಶ್, ಬೇಪಡಿಯಂಡ ದಿನು, ಅರೆಯಡ ಗಿರೀಶ್, ನಂದಿನೆರವAಡ ವಿಜು, ಪುಲ್ಲೇರ ಕಾಳಪ್ಪ, ಪುದಿಯೊಕ್ಕಡ ಕಾಶಿ, ಮಣವಟ್ಟಿರ ಚಿಣ್ಣಪ್ಪ, ನಂದಿನೆರವAಡ ಅಯ್ಯಣ್ಣ, ನಂದಿನೆರವAಡ ಅಪ್ಪಯ್ಯ, ಕೂಪದಿರ ಸಾಬು, ಕೂಪದಿರ ಪ್ರಣಾಮ್, ಬೊಟ್ಟಂಗಡ ಗಿರೀಶ್, ಬೊಟ್ಟಂಗಡ ದೇವಯ್ಯ, ಅಜ್ಜಿಕುಟ್ಟಿರ ಲೋಕೇಶ್, ಕಿರಿಯಮಾಡ ಶರೀನ್, ಪುಟ್ಟಿಚಂಡ ಡಾನ್ ದೇವಯ್ಯ, ಕೋಡಿರ ರತ್ನ ದೇವಯ್ಯ, ಚೋಳಪಂಡ ನಾಣಯ್ಯ, ಕೊಂಗೆಟ್ಟಿರ ಲೋಕೇಶ್ ಭಾಗವಹಿಸಿದ್ದರು.