ಮಡಿಕೇರಿ, ಜ. ೨೫: ಅತ್ಯಾಧುನಿಕ ವೈದ್ಯಕೀಯ ಚಿಕಿತ್ಸಾ ಕ್ರಮದಿಂದ ಸೀಳುತುಟಿ ಸಮಸ್ಯೆಯನ್ನು ವೈದ್ಯಕೀಯ ರಂಗ ಸುಲಲಿತವಾಗಿ ಪರಿಹರಿಸುತ್ತಿದೆ. ಹೀಗಾಗಿ ಯಾವುದೇ ಆತಂಕವಿಲ್ಲದೇ ಸೀಳುತುಟಿಯ ಸಂಕಷ್ಟವನ್ನು ನಿವಾರಿಸಿಕೊಳ್ಳಲು ಸಮಸ್ಯೆ ಪೀಡಿತರು ಮುಂದಾಗಬೇಕೆAದು ರೋಟರಿ ವಲಯ ೬ ರ ಉಪರಾಜ್ಯಪಾಲ ಅನಿಲ್ ಎಚ್.ಟಿ. ಮನವಿ ಮಾಡಿದ್ದಾರೆ.

ನಗರದ ರೋಟರಿ ಸಭಾಂಗಣದಲ್ಲಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆ ಸಹಯೋಗದಲ್ಲಿ ಆಯೋಜಿತ ಸೀಳುತುಟಿ ಶಿಬಿರ ಉದ್ಘಾಟಿಸಿ ಮಾತನಾಡಿದ ಅನಿಲ್, ಭಾರತದಲ್ಲಿ ೨೫ ಸಾವಿರದಿಂದ ೩೦ ಸಾವಿರದಷ್ಟು ಮಂದಿ ಸೀಳುತುಟಿ ಸಮಸ್ಯೆಯಿರುವ ಶಿಶುಗಳು ಜನಿಸುತ್ತಿದೆ. ದೇಶದಲ್ಲಿ ೧.೫ ಮಿಲಿಯನ್ ಮಂದಿ ಸೀಳುತುಟಿ ಸಮಸ್ಯೆ ಹೊಂದಿದ್ದಾರೆ. ಪ್ರತೀ ೧ ಸಾವಿರ ಮಕ್ಕಳಲ್ಲಿ ೧ ಮಗುವಿಗೆ ಸೀಳುತುಟಿ ಸಮಸ್ಯೆ ಇರುತ್ತದೆ ಎಂದು ಸಮೀಕ್ಷೆಗಳು ತಿಳಿಸಿವೆ. ಹೀಗಿದ್ದರೂ ಇತ್ತೀಚಿನ ವರ್ಷಗಳಲ್ಲಿ ಆಧುನಿಕ ವೈದ್ಯಕೀಯ ಚಿಕಿತ್ಸಾ ಪದ್ಧತಿಯಿಂದ ಸೀಳುತುಟಿ ಹೊಂದಿದವರಿಗೆ ಶಸ್ತçಚಿಕಿತ್ಸೆ ಮೂಲಕ ಸಮಸ್ಯೆಯನ್ನು ಪರಿಹರಿಸಲಾಗುತ್ತದೆ. ಅದರಲ್ಲಿಯೂ ಸೀಳುತುಟಿ ಹೊಂದಿರುವ ಮಕ್ಕಳಲ್ಲಿ ಶಸ್ತçಚಿಕಿತ್ಸೆ ಮೂಲಕ ಸೀಳುತುಟಿ ಸಮಸ್ಯೆ ನಿವಾರಿಸಿ ಮತ್ತೆ ಮಕ್ಕಳ ಮುಖದಲ್ಲಿ ಮಂದಹಾಸ ಮೂಡಿಸಲಾಗುತ್ತಿದೆ ಎಂದರು.

ಮAಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆಯ ವೈದ್ಯ ಡಾ. ನವೀನ್ ರಾವ್ ಮಾತನಾಡಿ, ಕೊಡಗಿನಲ್ಲಿ ಮಿಸ್ಟಿ ಹಿಲ್ಸ್ ಆಯೋಜಿತ ಶಿಬಿರಗಳಲ್ಲಿ ಈವರೆಗೆ ೧೨೦ಕ್ಕೂ ಅಧಿಕ ಮಕ್ಕಳು, ಹಿರಿಯರ ಸೀಳುತುಟಿ ಸಮಸ್ಯೆಯನ್ನು ಉಚಿತವಾಗಿ ಶಸ್ತçಚಿಕಿತ್ಸೆ ಮೂಲಕ ಪರಿಹರಿಸಲಾಗಿದೆ. ಮುಂದೆಯೂ ಮಡಿಕೇರಿ ಸೇರಿದಂತೆ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ವಿವಿಧ ಆರೋಗ್ಯ ಸಮಸ್ಯೆಗೆ ಸಂಬAಧಿಸಿದAತೆ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸುವ ಉದ್ದೇಶವಿದೆ ಎಂದರು.

ರೋಟರಿ ಮಿಸ್ಟಿ ಹಿಲ್ಸ್ ಮತ್ತು ಮಡಿಕೇರಿ ನಗರಸಭಾಧ್ಯಕ್ಷೆ ಅನಿತಾ ಪೂವಯ್ಯ ಮಾತನಾಡಿ, ಬಡತನ ದಿಂದಾಗಿ ಶಸ್ತçಚಿಕಿತ್ಸೆ ಮಾಡಿಸಿಕೊಳ್ಳಲು ಕಷ್ಟವಾದ ಮಕ್ಕಳು, ಹಿರಿಯರಿಗೆ ರೋಟರಿಯಿಂದ ಉಚಿತವಾಗಿ ಶಸ್ತçಚಿಕಿತ್ಸೆ ಮೂಲಕ ನೆರವು ನೀಡಲಾಗುತ್ತಿದೆ. ಭವಿಷ್ಯದಲ್ಲಿ ಮಕ್ಕಳ ಕೊಡಗಿನಲ್ಲಿ ಮಿಸ್ಟಿ ಹಿಲ್ಸ್ ಆಯೋಜಿತ ಶಿಬಿರಗಳಲ್ಲಿ ಈವರೆಗೆ ೧೨೦ಕ್ಕೂ ಅಧಿಕ ಮಕ್ಕಳು, ಹಿರಿಯರ ಸೀಳುತುಟಿ ಸಮಸ್ಯೆಯನ್ನು ಉಚಿತವಾಗಿ ಶಸ್ತçಚಿಕಿತ್ಸೆ ಮೂಲಕ ಪರಿಹರಿಸಲಾಗಿದೆ. ಮುಂದೆಯೂ ಮಡಿಕೇರಿ ಸೇರಿದಂತೆ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ವಿವಿಧ ಆರೋಗ್ಯ ಸಮಸ್ಯೆಗೆ ಸಂಬAಧಿಸಿದAತೆ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸುವ ಉದ್ದೇಶವಿದೆ ಎಂದರು.

ರೋಟರಿ ಮಿಸ್ಟಿ ಹಿಲ್ಸ್ ಮತ್ತು ಮಡಿಕೇರಿ ನಗರಸಭಾಧ್ಯಕ್ಷೆ ಅನಿತಾ ಪೂವಯ್ಯ ಮಾತನಾಡಿ, ಬಡತನ ದಿಂದಾಗಿ ಶಸ್ತçಚಿಕಿತ್ಸೆ ಮಾಡಿಸಿಕೊಳ್ಳಲು ಕಷ್ಟವಾದ ಮಕ್ಕಳು, ಹಿರಿಯರಿಗೆ ರೋಟರಿಯಿಂದ ಉಚಿತವಾಗಿ ಶಸ್ತçಚಿಕಿತ್ಸೆ ಮೂಲಕ ನೆರವು ನೀಡಲಾಗುತ್ತಿದೆ. ಭವಿಷ್ಯದಲ್ಲಿ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಇಂತಹ ಶಿಬಿರಗಳನ್ನು ಮಿಸ್ಟಿ ಹಿಲ್ಸ್ ಕೈಗೊಳ್ಳುತ್ತಾ ಬಂದಿದೆ ಎಂದರು. ಆರ್ಥಿಕ ಅನುಕೂಲಕ್ಕಿಂತ ಆರೋಗ್ಯ ಮುಖ್ಯ ಎಂಬ ತತ್ವದ ಆಧಾರದಲ್ಲಿ ಮಿಸ್ಟಿ ಹಿಲ್ಸ್ ಮುಂದಿನ ದಿನಗಳಲ್ಲಿಯೂ ಆರೋಗ್ಯ ಶಿಬಿರಗಳಿಗೆ ಆದ್ಯತೆ ನೀಡಲಿದೆ ಎಂದೂ ಅನಿತಾ ಹೇಳಿದರು.

ರೋಟರಿ ಮಿಸ್ಟಿ ಹಿಲ್ಸ್ ಸ್ಥಾಪಕಾಧ್ಯಕ್ಷ ಬಿ.ಜಿ. ಅನಂತಶಯನ ಮಾತನಾಡಿ, ಇಂತಹ ಶಿಬಿರಗಳಿಂದ ಜಿಲ್ಲೆಯಲ್ಲಿನ ಮಕ್ಕಳಲ್ಲಿರುವ ಸೀಳುತುಟಿ ಸಮಸ್ಯೆಯನ್ನು ತಪಾಸಣೆ ನಡೆಸಿ ಶಸ್ತçಚಿಕಿತ್ಸೆ ಮೂಲಕ ಯಶಸ್ವಿಯಾಗಿ ನಿವಾರಿಸಲಾಗುತ್ತದೆ. ರೋಟರಿ ಸಂಸ್ಥೆಯು ಆರೋಗ್ಯ ಸಂರಕ್ಷಣೆಗೆ ಅತ್ಯಂತ ಹೆಚ್ಚಿನ ಪ್ರಾಮುಖ್ಯತೆ ನೀಡಿದೆ ಎಂದರು.

ರೋಟರಿ ಮಿಸ್ಟಿ ಹಿಲ್ಸ್ ಮುಂದಿನ ಸಾಲಿನ ಅಧ್ಯಕ್ಷ ಪ್ರಸಾದ್ ಗೌಡ, ನಿರ್ದೇಶಕರುಗಳಾದ ಬಿ.ಕೆ. ರವೀಂದ್ರ ರೈ, ರತ್ನಾಕರ್ ರೈ, ಕ್ಯಾರಿ ಕಾರ್ಯಪ್ಪ, ದೇವಣೀರ ತಿಲಕ್ ಕಾರ್ಯಕ್ರಮದಲ್ಲಿ ದ್ದರು. ಜಿಲ್ಲೆಯ ವಿವಿಧ ಭಾಗಗಳಿಂದ ಬಂದಿದ್ದ ಸೀಳುತುಟಿ ಬಾಧಿತರಿಗೆ ಮಂಗಳೂರು ಫಾದರ್ ಮುಲ್ಲರ್ಸ್ ಮತ್ತು ಸುಳ್ಯದ ಕೆವಿಜಿ ಆಸ್ಪತ್ರೆಗಳ ವೈದ್ಯರ ತಂಡ ತಪಾಸಣೆ ನಡೆಸಿತು. ಬಿ.ಜಿ. ಅನಂತಶಯನ ಸ್ವಾಗತಿಸಿ, ಪ್ರಸಾದ್ ಗೌಡ ವಂದಿಸಿದರು.