ಕುಶಾಲನಗರ, ಜ. ೨೫: ಕುಶಾಲನಗರ ಪಟ್ಟಣದ ಒಳಚರಂಡಿ ಕಾಮಗಾರಿಗಳನ್ನು ಪೂರ್ಣಗೊಳಿಸಿ ೨೦೨೨ರ ಮೇ ತಿಂಗಳಲ್ಲಿ ಲೋಕಾರ್ಪಣೆಗೊಳಿಸಲಾಗುವುದು ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮಡಿಕೇರಿ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ಸ್ಪಷ್ಟಪಡಿಸಿದ್ದಾರೆ.

ಕುಶಾಲನಗರ ಪಟ್ಟಣಕ್ಕೆ ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಯೋಜನೆಯ ರೂ೪೦.೧೦ ಕೋಟಿಗಳ ಅಂದಾಜು ಮತ್ತು ಕರ್ನಾಟಕ ಸರ್ಕಾರದಿಂದ ಆಗಸ್ಟ್ ೨೦೧೨ ರಲ್ಲಿ ಆಡಳಿತಾತ್ಮಕ ಅನುಮೋದನೆ ದೊರಕಿರುತ್ತದೆ ಸದರಿ ಯೋಜನೆ ಯನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ವತಿಯಿಂದ ಕೈಗೆತ್ತಿಕೊಳ್ಳಲಾಗಿದ್ದು ಮೊದಲನೇ ಹಂತದಲ್ಲಿ ನಿರ್ಮಾಣ ಮಾಡುವ ಕಾಮಗಾರಿಯನ್ನು ಒಂದು ಟೆಂಡರ್ ಮುಖಾಂತರ ೨೦೧೪ ಪ್ರಾರಂಭಿಸಿದ್ದು ತಿಂಗಳ ಅವಧಿಯಲ್ಲಿ ಅಂದರೆ ೨೦೧೭ ಜುಲೈ ೭೧.೫೦ ಕಿಲೋಮೀಟರ್ ಉದ್ದದ ಕೊಳವೆ ಮಾರ್ಗ ೨೬೫೬ ಮ್ಯಾನ್ಹೋಲ್‌ಗಳು, ೨೧ ಸೆಪ್ಟಿಕ್ ಟ್ಯಾಂಕ್ ನಿರ್ಮಾಣದ ಕಾಮಗಾರಿಗಳನ್ನು ಪೂರ್ಣಗೊಳಿ ಸಲಾಗಿದೆ ಎಂದು ವಿವರ ನೀಡಿದ್ದಾರೆ.

ಯೋಜನೆಯಡಿ ೪.೫೦ ಎಂಎಲ್ ಡಿ ಸಾಮರ್ಥ್ಯದ ಮಲಿನ ನೀರು ಶುದ್ಧೀಕರಣ ಘಟಕವನ್ನು ನಿರ್ಮಿಸಲು ಅವಶ್ಯವಿರುವ ೧.೯೦ ಎಕರೆ ಜಾಗವನ್ನು ಗುಮ್ಮನಹಳ್ಳಿ ಗ್ರಾಮದ ಸರ್ವೆ ನಂಬರ್ ೫/೧ ರಲ್ಲಿ ೨೦೨೦ ಫೆಬ್ರವರಿ ಎಲ್ಲಿ ಹಸ್ತಾಂತರಿಸಲಾಗಿದೆ. ಅದರಂತೆ ಎರಡನೇ ಹಂತದ ಅಡಿಯಲ್ಲಿ ಯೋಜನೆಯನ್ನು ಚಾಲನೆಗೊಳಿಸಲು ಬಾಕಿ ಇರುವ ಕಾಮಗಾರಿಗಳ ೪.೫೦ ಸಾಮರ್ಥ್ಯದ ನೀರು ಶುದ್ಧೀಕರಣ ಘಟಕ ನಿರ್ಮಾಣ, ಪಂಪಿAಗ್ ಮಷಿನರಿ ಮಾರ್ಗ ಹಾಗೂ ೧೧ ಕೆವಿ ವಿದ್ಯುತ್ ಸಂಪರ್ಕ ಒದಗಿಸುವ ೧೮.೪೩ ಕೋಟಿ ರೂ.ಗಳ ಎರಡನೇ ಪ್ಯಾಕೇಜ್ ಟೆಂಡರ್ ಕಾಮಗಾರಿಯನ್ನು ೨೦೨೦ ಅಕ್ಟೋಬರ್ ತಿಂಗಳಲ್ಲಿ ಆರಂಭಿಸ ಲಾಗಿದೆ ಕಾಮಗಾರಿ ಪ್ರಗತಿಯಲ್ಲಿರುತ್ತದೆ ಎಂದು ಮಾಹಿತಿ ಒದಗಿಸಿದ್ದಾರೆ.

ಪ್ರಸ್ತುತ ಮಲಿನ ನೀರು ಶುದ್ಧೀಕರಣ ಘಟಕ ನಿರ್ಮಾಣದ ಕಾಮಗಾರಿಗಳು ಪ್ರಗತಿಯಲ್ಲಿರುತ್ತವೆ. ಪ್ರಸ್ತುತ ಮಲಿನ ನೀರು ಶುದ್ಧೀಕರಣ ಘಟಕ ನಿರ್ಮಾಣದ ಕಾಮಗಾರಿ ಪ್ರಗತಿಯಲ್ಲಿದ್ದು, ೨೦೨೨ ರ ಮೇ ತಿಂಗಳ ಒಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸಿ ಕುಶಾಲನಗರದಲ್ಲಿ ಒಳಚರಂಡಿ ವ್ಯವಸ್ಥೆಗೆ ಚಾಲನೆ ಕೊಡುವುದು ಎಂದು ಸ್ಪಷ್ಟಪಡಿಸಿದ್ದಾರೆ.

ತಾ. ೨೩ರಂದು ‘ಶಕ್ತಿ’ಯಲ್ಲಿ ನೆನೆಗುದಿಗೆ ಬಿದ್ದಿರುವ ೪೦ ಕೋಟಿಯ ಒಳಚರಂಡಿ ವ್ಯವಸ್ಥೆ’ ವರದಿ ಹಿನ್ನೆಲೆಯಲ್ಲಿ ಕುಶಾಲನಗರ ಪಟ್ಟಣದ ಒಳಚರಂಡಿ ಯೋಜನೆಯ ಅನುಪಾಲನಾ ವರದಿಯೊಂದನ್ನು ಬಿಡುಗಡೆಗೊಳಿಸಿದ್ದು, ಕುಶಾಲನಗರ ಪಟ್ಟಣವು ಕಾವೇರಿ ನದಿಯ ದಡದ ಲ್ಲಿದ್ದು ಪಟ್ಟಣದಲ್ಲಿ ಉತ್ಪತ್ತಿಯಾಗುವ ಮಾಲಿನ್ಯ ನೀರು ನದಿಯನ್ನು ಸೇರಿ ಕಲುಷಿತಗೊಳಿಸುವ ತಡೆಗಟ್ಟಿ ಪಟ್ಟಣದ ಕಥೆಯನ್ನು ಕಾಪಾಡುವುದು ಒಳಚರಂಡಿ ವ್ಯವಸ್ಥೆಯ ಮೂಲ ಉದ್ದೇಶವಾಗಿರುತ್ತದೆ. ಪ್ರಸ್ತುತ ಮಲಿನ ನೀರು ಶುದ್ಧೀಕರಣ ಘಟಕ ನಿರ್ಮಾಣ ಹಂತದಲ್ಲಿದ್ದು, ಕಾಮಗಾರಿಯನ್ನು ಪೂರ್ಣಗೊಳಿಸಿದ ನಂತರ ಪಟ್ಟಣ ದಲ್ಲಿ ನೀರನ್ನು ನೀರು ಶುದ್ಧೀಕರಣ ಘಟಕದಲ್ಲಿ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ನಿಯಮಗಳಂತೆ ಶುದ್ಧೀಕರಿಸಿ ನದಿ ಪಾತ್ರಗಳಿಗೆ ಹರಿಸುವುದರಿಂದ ಕಾವೇರಿ ಮಲಿನವಾಗುವುದನ್ನು ತಡೆಗಟ್ಟ ಬಹುದು. ಒಳಚರಂಡಿ ಯೋಜನೆಯ ಕಾಮಗಾರಿಗಳು ಪ್ರಗತಿಯಲ್ಲಿರುವುದ ರಿಂದ ಪಟ್ಟಣದ ನಿವಾಸಿಗಳು ತಮ್ಮ ಮನೆಗಳಲ್ಲಿ ನೀರಿನ ಸಂಪರ್ಕವನ್ನು ಯೋಜನೆ ಚಾಲನೆಗೊಳ್ಳುವವರೆಗೂ ನೀಡದಿರಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.ಒಳಚರಂಡಿ ವ್ಯವಸ್ಥೆಯಲ್ಲಿ ಕೊಳವೆ ಸಾಲುಗಳ ಜಾಲವನ್ನು ಗುರುತ್ವಾಕರ್ಷಣ ಆಧಾರದ ಮೇಲೆ ವಿನ್ಯಾಸ ಮಾಡಿರುವುದರಿಂದ ಕುಶಾಲನಗರ ಪಟ್ಟಣದ ಭೌಗೋಳಿಕ ಸ್ಥಿತಿ ಅನುಸಾರವಾಗಿ ಪಟ್ಟಣಕ್ಕೆ ಪೂರ್ಣವಾಗಿ ಒಳಚರಂಡಿ ವ್ಯವಸ್ಥೆಯನ್ನು ಒದಗಿಸುವ ನಿಟ್ಟಿನಲ್ಲಿ ವಿನ್ಯಾಸ ಮಾಡಲಾಗಿದೆ. ಅದರಂತೆ ಕೊಳವೆ ಸಾಲುಗಳನ್ನು ಅಳವಡಿಸಿ ಗುಂಡಿಗಳನ್ನು ನಿರ್ಮಾಣ ಮಾಡಲಾಗಿ ರುತ್ತದೆ ಈ ಪೈಕಿ ತಾವರೆಕೆರೆಯಿಂದ ಗುಮ್ಮನಹಳ್ಳಿವರೆಗೆ ಸುಮಾರು ೪.೫ ಕಿಲೋಮೀಟರ್ ಮಾರ್ಗವನ್ನು ಕಾವೇರಿ ನದಿಯ ದಡದ ಅಂಚಿನಲ್ಲಿ ಲಭ್ಯವಿರುವ ಜಾಗದ ಅನುಸಾರವಾಗಿ ಅಳವಡಿಸಲಾಗಿರುತ್ತದೆ ಹಾಗೂ ಗುಂಡಿಗಳನ್ನು ೨೦೧೮ರ ನದಿ ಪ್ರವಾಹದಿಂದ ಎತ್ತರಕ್ಕೆ ನಿರ್ಮಾಣ ಮಾಡಲಾಗಿರುತ್ತದೆ. ನದಿಯ ಅಂಚಿನಲ್ಲಿ ಒಳಚರಂಡಿ ಮುಖ್ಯ ಕೊಳವೆ ಸಾಲುಗಳನ್ನು ಅಳವಡಿಸ ದಿದ್ದರೆ ಪಟ್ಟಣದ ಯೋಗಾನಂದ ನಿಜಾಮುದ್ದಿನ್ ಇಂದಿನ ಪೇಟೆ ಸಿಂಗರಮ್ಮ, ಶೈಲಜಾ, ವಿವೇಕಾನಂದ, ಆದಿ ಶಂಕರಾಚಾರ್ಯ, ಕುವೆಂಪು ಬಡಾವಣೆ ಪ್ರದೇಶಗಳಿಗೆ ಒಳಚರಂಡಿ ವ್ಯವಸ್ಥೆಯನ್ನು ಕಲ್ಪಿಸಲು ಸಾಧ್ಯ ಆಗುತ್ತಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.