ಮಡಿಕೇರಿ, ಜ. ೨೫: ಮಡಿಕೇರಿ ೬೬/೧೧ ಕೆವಿ ವಿದ್ಯುತ್ ಉಪ ಕೇಂದ್ರದಿAದ ಹೊರಹೋಗುವ ಎಫ್೪ ಬೋಯಿಕೇರಿ ಮತ್ತು ಎಫ್ ೮ ಕುಂಡಾ ಮೇಸ್ತಿçà ಫೀಡರ್‌ನಲ್ಲಿ ತುರ್ತು ನಿರ್ವಹಣೆ ಕಾರ್ಯ ನಡೆಸಬೇಕಿರುವುದರಿಂದ ತಾ. ೨೭ ರಂದು ಬೆಳಿಗ್ಗೆ ೧೦ ಗಂಟೆಯಿAದ ಸಂಜೆ ೫ ಗಂಟೆವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು.

ಬೋಯಿಕೇರಿ, ಉದಯಗಿರಿ, ಕರ್ಣಂಗೇರಿ, ರಾಜೇಶ್ವರಿ ನಗರ, ಮುಕ್ಕೋಡ್ಲು, ಮಕ್ಕಂದೂರು, ಮೇಘತ್ತಾಳು, ಹಚ್ಚಿನಾಡು, ಹಮ್ಮಿಯಾಲ, ಕುಂಡಾಮೇಸ್ತಿçà ಹಾಗೂ ಕೂಟುಹೊಳೆ ಕುಡಿಯುವ ನೀರಿನ ಸ್ಥಾವರ ಸೇರಿದಂತೆ ಸುತ್ತಮುತ್ತ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಸೆಸ್ಕ್ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕೋರಿದ್ದಾರೆ.