ಮಡಿಕೇರಿ, ಜ. ೨೪: ನಗರದ ಕೆಲ ವಾರ್ಡ್ಗಳಲ್ಲಿ ನಿಷ್ಕಿçಯ ವಾಗಿರುವ ಬೋರ್‌ವೆಲ್‌ಗಳಿಗೆ ಮೋಟರ್ ಅಳವಡಿಸುವುದರ ಮೂಲಕ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಎದುರಾಗದಂತೆ ಎಚ್ಚರವಹಿಸುವಂತೆ ನಗರಸಭಾ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ವಿವಿಧ ವಾರ್ಡ್ಗಳಿಗೆ ಹಾಗೂ ಕೂಟೂಹೊಳೆಗೆ ಭೇಟಿ ನೀಡಿದ ಅಧ್ಯಕ್ಷೆ ನೀರಿನ ಪೂರೈಕೆಯ ಬಗ್ಗೆ ಮಾಹಿತಿ ಪಡೆದರು. ಭಗವತಿ ನಗರ, ಎಫ್‌ಎಂಸಿ ಕಾಲೇಜು, ಐ.ಟಿ.ಐ. ಹಿಂಭಾಗದ ಬೋರ್‌ವೆಲ್‌ಗಳ ಪರಿಶೀಲನೆ ನಡೆಸಿದರು. ನಗರದಲ್ಲಿ ನಡೆಯುತ್ತಿರುವ ರಾಜಕಾಲುವೆ ಕಾಮಗಾರಿ ಸೇರಿದಂತೆ ಇನ್ನಿತರ ಕಾಮಗಾರಿಗಳ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.
ಈ ಸಂದರ್ಭ ಉಪಾಧ್ಯಕ್ಷೆ ಸವಿತಾ ರಾಕೇಶ್, ಸದಸ್ಯರುಗಳಾದ ಮಹೇಶ್ ಜೈನಿ, ಅಪ್ಪಣ್ಣ, ಚಂದ್ರ, ಶೇಖರ್, ಶ್ವೇತಾ ಪ್ರಶಾಂತ್, ಶಾರದಾ ನಾಗರಾಜ್ ಮಂಜುಳಾ, ಉಷಾ, ಚಿತ್ರಾವತಿ, ಸಬಿತಾ ನಗರ ಸಭಾ ಆಯುಕ್ತ ರಾಮದಾಸ್, ಸಿಬ್ಬಂದಿಗಳು ಹಾಜರಿದ್ದರು