ಮಡಿಕೇರಿ ಜ.೨೪ : ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ತಾ. ೨೬ ರಂದು ೭೨ನೇ ಗಣರಾಜ್ಯೋತ್ಸವದ ಅಂಗವಾಗಿ ಸಮಾಲೋಚನಾ ಸಭೆ ನಡೆಯಲಿದೆ ಎಂದು ಸಿಎನ್ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ.
ಅಂದು ಬೆಳಗ್ಗೆ ೧೦.೩೦ ಗಂಟೆಗೆ ನಗರದ ಜಿಲ್ಲಾ ಕ್ರೀಡಾಂಗಣ ಸಮೀಪದ ಮಂದ್ನಲ್ಲಿ ಸಿಎನ್ಸಿ ಸಭೆ ನಡೆಯಲಿದೆ. ನಂತರ ಕೊಡವರನ್ನೊಳಗೊಳ್ಳಲಿರುವ ಪರಿಪೂರ್ಣ ಗಣರಾಜ್ಯಕ್ಕಾಗಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟçಪತಿಗಳು ಹಾಗೂ ಭಾರತ ಸರ್ಕಾರದ ವರಿಷ್ಠರಿಗೆ ಜ್ಞಾಪನಾ ಪತ್ರ ಸಲ್ಲಿಸಲಾಗುವುದು.
ಸಭೆಯಲ್ಲಿ ಕೊಡವ ಜನಾಂಗವನ್ನು ಒಳಗೊಳ್ಳಲಿರುವ ಭಾರತ ಗಣರಾಜ್ಯ ಮಾತ್ರ ಪರಿಪೂರ್ಣ, ಕೊಡವ ಲ್ಯಾಂಡ್ ಜಿಯೋ ಪೊಲಿಟಿಕಲ್ ಅಟೋನಮಿ, ಕೊಡವ ರೇಸಿಗೆ ಸಂವಿಧಾನದಲ್ಲಿ ಬುಡಕಟ್ಟು ಜನಾಂಗದ ಸ್ಥಾನಮಾನ, ಕೊಡವ ತಕ್ಕನ್ನು ಸಂವಿಧಾನದ ೮ನೇ ಪರಿಚ್ಚೇದಕ್ಕೆ ಸೇರ್ಪಡೆ, ಕೊಡವ ರೇಸಿಗೆ ಬಂದೂಕು ಹಕ್ಕು ಅಬಾಧಿತವಾಗಿ ಮುಂದುವರೆಯುವ ಸಂವಿಧಾನದ ೨೫, ೨೬, ೨೭, ೨೮ ವಿಧಿಗಳಲ್ಲಿ ಧಾರ್ಮಿಕ ಸಂಸ್ಕೃತಿ ಎಂದು ಘೋಷಣೆ ಸೇರಿದಂತೆ ಕೊಡವರ ಭೂಮಿ, ಭಾಷೆ, ಸಂಸ್ಕೃತಿ, ಜನಪದ ನೆಲೆ ಎಲ್ಲದಕ್ಕೂ ರಾಜ್ಯಾಂಗ ಭದ್ರತೆ ನೀಡಬೇಕೆಂದು ಒತ್ತಾಯಿಸಲಾಗುವುದು.