ಮಡಿಕೇರಿ, ಜ. ೨೩: ಪವಿತ್ರ ಕ್ಷೇತ್ರವಾಗಿರುವ ಭಾಗಮಂಡಲದ ಸಂಗಮ ಪ್ರದೇಶಕ್ಕೆ ಕೆಲವು ಹೊಟೇಲ್‌ಗಳಿಂದ ತ್ಯಾಜ್ಯ ನೀರನ್ನು ಹರಿಯಬಿಡಲಾಗುತ್ತಿದೆ; ಇದರಿಂದ ಕ್ಷೇತ್ರದ ಪಾವಿತ್ರö್ಯತೆಗೆ ಧಕ್ಕೆಯಾಗುತ್ತಿದ್ದು, ಇದರ ಬಗ್ಗೆ ಕ್ರಮಕೈಗೊಳ್ಳಬೇಕೆಂದು ಶ್ರಿ ಕಾವೇರಿ ಹಿತರಕ್ಷಣಾ ಬಳಗ ಒತ್ತಾಯಿಸಿದೆ. ಈ ಬಗ್ಗೆ ಬಳಗದ ಪ್ರಮುಖರು ಜಿಲ್ಲಾಧಿಕಾರಿಗಳು ಸೇರಿದಂತೆ ಭಾಗಮಂಡಲ ಗ್ರಾ.ಪಂ. ಹಾಗೂ ಭಗಂಡೇಶ್ವರ ತಲಕಾವೇರಿ ದೇವಾಲಯದ ಕಾರ್ಯ ನಿರ್ವಹಣಾಧಿಕಾರಿಗಳಿಗೂ ಮನವಿ ಸಲ್ಲಿಸಿದ್ದಾರೆ.
ಅಲ್ಲಿನ ಹೊಟೇಲೊಂದರಿAದ ರಾತ್ರಿವೇಳೆಯಲ್ಲಿ ತ್ಯಾಜ್ಯ ನೀರು ಹರಿಯಬಿಡಲಾಗುತ್ತಿದ್ದು, ಇದು ನದಿಗೆ ಸೇರುತ್ತಿದೆ ಎಂಬದಾಗಿ ಭಾವಚಿತ್ರ ಸಹಿತವಾಗಿ ಸಂಬAಧಿಸಿದವರ ಗಮನ ಸೆಳೆಯಲಾಗಿದೆ. ಈ ಬಗ್ಗೆ ತಕ್ಷಣ ಗಮನ ಹರಿಸಿ ಇದನ್ನು ನಿಯಂತ್ರಿಸಬೇಕು ಎಂದು ಬಳಗದ ಪ್ರಮುಖರು ಆಗ್ರಹಿಸಿದ್ದಾರೆ.